ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿವಾದಿತ ಮದುವೆ ಮೂಲಕ ಸುದ್ದಿಯಾಗಿದ್ದ ನಟಿ, ಸಂಸದೆ ನುಸ್ರತ್‌ ಜಹಾನ್‌ಗೆ ಗಂಡು ಮಗು

Last Updated 26 ಆಗಸ್ಟ್ 2021, 10:00 IST
ಅಕ್ಷರ ಗಾತ್ರ

ತೃಣಮೂಲ ಕಾಂಗ್ರೆಸ್ ಸಂಸದೆ ಹಾಗೂ ನಟಿ ನುಸ್ರತ್ ಜಹಾನ್ ಗುರುವಾರ ಮಧ್ಯಾಹ್ನ ಕೋಲ್ಕತ್ತದ ಖಾಸಗಿ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕೋಲ್ಕತ್ತದ ಪಾರ್ಕ್ ಸ್ಟ್ರೀಟ್‌ನಲ್ಲಿರುವ ಆಸ್ಪತ್ರೆಗೆ ಬುಧವಾರ ಸಂಜೆ ನುಸ್ರತ್‌ ಜಹಾನ್‌ ದಾಖಲಾಗಿದ್ದರು. ಅವರು ಗುರುವಾರ ಮಧ್ಯಾಹ್ನ 12.20ರ ಸುಮಾರಿಗೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ ಎಂದು ಆಸ್ಪತ್ರೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದಾರೆ ಎಂದು ತಿಳಿದುಬಂದಿದೆ.

ನುಸ್ರತ್ ಜಹಾನ್ ವಿವಾಹ ಮತ್ತು ವಿವಾದ

ಕಾನೂನು ಪ್ರಕಾರ ವಿವಾಹ ನೋಂದಾಯಿಸಿಕೊಳ್ಳುವಂತೆ ತಾವು ಮಾಡಿದ ವಿನಂತಿಗಳನ್ನು ನುಸ್ರತ್ ಜಹಾನ್ ನಿರಾಕರಿಸಿದ್ದರು ಎಂದು ಅವರ ಪತಿ ನಿಖಿಲ್ ಜೈನ್ ಜೂನ್‌ ತಿಂಗಳಲ್ಲಿ ಆರೋಪಿಸಿದ್ದರು.

2020 ಆಗಸ್ಟ್‌ನಲ್ಲಿ ಚಿತ್ರವೊಂದರ ಚಿತ್ರೀಕರಣದಲ್ಲಿ ತೊಡಗಿಸಿಕೊಂಡ ಬಳಿಕ ಆಕೆಯ (ನುಸ್ರತ್) ವರ್ತನೆ ಬದಲಾಗತೊಡಗಿತ್ತು. ಬಳಿಕ ನವೆಂಬರ್‌ನಲ್ಲಿ ಮನೆ ಬಿಟ್ಟು ಹೋದಳು ಎಂದು ಜೈನ್ ತಿಳಿಸಿದ್ದಾರೆ.

2019ರಲ್ಲಿ ಟರ್ಕಿಯಲ್ಲಿ ಉದ್ಯಮಿ ನಿಖಲ್ ಜೈನ್ ಅವರೊಂದಿಗೆ ನಡೆದಿದ್ದ ವಿವಾಹವು ಭಾರತೀಯ ಕಾನೂನುಗಳ ಪ್ರಕಾರ ಮಾನ್ಯವಾಗಿಲ್ಲ ಎಂದು ಟಿಎಂಸಿ ಸಂಸದೆ ನುಸ್ರತ್ ಜಹಾನ್ ಹೇಳಿಕೊಂಡಿದ್ದರು.

ನುಸ್ರತ್‌ ಜಹಾನ್‌ ಅವರು ನಟ ಯಶ್‌ ದಾಸ್‌ ಗುಪ್ತಾ ಅವರೊಂದಿಗೆ ಡೇಟಿಂಗ್‌ ಮಾಡುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT