ಗುರುವಾರ , ಮಾರ್ಚ್ 30, 2023
22 °C

ಅರ್ಜುನ್ ಸರ್ಜಾ ‘ಒಪ್ಪಂದ' ಸಿನಿಮಾ ಹಾಡುಗಳ ಬಿಡುಗಡೆ: ಶೀಘ್ರವೇ ತೆರೆಗೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಜುನ್ ಸರ್ಜಾ - ರಾಧಿಕಾ ಕುಮಾರಸ್ವಾಮಿ ಅಭಿನಯದ ‘ಒಪ್ಪಂದ’ ಚಿತ್ರ ಶೀಘ್ರವೇ ತೆರೆಗೆ ಬರಲಿದೆ. ಅದಕ್ಕೆ ಪೂರ್ವಭಾವಿಯಾಗಿ ಹಾಡುಗಳು ಮತ್ತು ಟೀಸರ್‌ ಬಿಡುಗಡೆ ಇತ್ತೀಚೆಗೆ ನಡೆದಿದೆ. 

ಖ್ಯಾತನಟ ಜೆ.ಡಿ. ಚಕ್ರವರ್ತಿ, ನಟಿ ಸೋನಿ ಚರಿಶ್ಟಾ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಇದ್ದಾರೆ. ಚಿತ್ರದಲ್ಲಿ ಆರು ಹಾಡುಗಳಿವೆ. ಈ ಚಿತ್ರಕ್ಕೆ ಅಮೀರ್ ಲಾಲ್ ಛಾಯಾಗ್ರಹಣ, ಸುಭಾಷ್ ಆನಂದ್ ಸಂಗೀತ ನಿರ್ದೇಶನ, ರಾಘು ಕುಲಕರ್ಣಿ ಕಲಾ ನಿರ್ದೇಶನ, ಅಮ್ಮ ರಾಜಶೇಖರ್ ನೃತ್ಯ ನಿರ್ದೇಶನ, ಖಾಲಿ ಕಿಕಾಸ್ ಸಾಹಸ ನಿರ್ದೇಶನ ಹಾಗೂ ಪ್ರಭು ಅವರ ಸಂಕಲನವಿದೆ.

ನಾಲ್ಕು ಭಾಷೆಗಳಲ್ಲಿ ಈ ಸಿನಿಮಾ ನಿರ್ಮಾಣವಾಗಿದೆ. ಇದೇ ತಿಂಗಳಲ್ಲಿ ಚಿತ್ರ ತೆರೆಗೆ ಬರಲಿದೆ. ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು ಚಿತ್ರದ ನಿರ್ಮಾಪಕ ಹಾಗೂ ನಿರ್ದೇಶಕ ಸಮೀರ್‌‌. ಶಶಿಧರ್‌ ಸಹನಿರ್ಮಾಪಕರು. 

ಅಮೀರ್ ಖಾನ್ ಸಹೋದರ ಫೈಸಲ್ ಖಾನ್ , ಸೋ‌ನಿ ಚರಿಶ್ಟಾ, ವಿಶ್ವನಾಥ್ ತಾರಾಬಳಗದಲ್ಲಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು