ಕ್ರೇಜಿಸ್ಟಾರ್ ರವಿಚಂದ್ರ ವಿ. ನಟನೆಯ ‘ಕನ್ನಡಿಗ’, ಹ್ಯಾಟ್ರಿಕ್ ಹೀರೊ ಶಿವರಾಜ್‌ಕುಮಾರ್ ನಟನೆಯ ‘ಭಜರಂಗಿ–2’ ಸಿನಿಮಾ ಬಳಿಕ ಇದೀಗ ಒಟಿಟಿ ವೇದಿಕೆ ‘ಜೀ 5’ನಲ್ಲಿ ಶೀಘ್ರದಲ್ಲೇ ರಾಜ್ ಬಿ. ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಗರುಡ ಗಮನ ವೃಷಭ ವಾಹನ’ ತೆರೆಕಾಣಲಿದೆ.

2021ರಲ್ಲಿ ಚಿತ್ರಮಂದಿರಗಳಲ್ಲಿ ತೆರೆಕಂಡ ‘ಹೀರೋ’, ‘ರಾಮಾರ್ಜುನ’, ‘ಪುಕ್ಸಟ್ಟೆ ಲೈಫು ಪುರುಸೋತ್ತೆ ಇಲ್ಲ’ ಸಿನಿಮಾಗಳು ನಂತರ ‘ಜೀ5’ನಲ್ಲಿ ತೆರೆಕಂಡಿದ್ದವು. ಕಳೆದ ನ.19ರಂದು ಚಿತ್ರಮಂದಿರಗಳಲ್ಲಿ ತೆರೆಕಂಡಿದ್ದ ವಿಭಿನ್ನ ಕಥಾಹಂದರ ಹೊಂದಿದ್ದ ‘ಗರುಡ ಗಮನ ವೃಷಭ ವಾಹನ’ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಸೆಳೆಯುವಲ್ಲಿ ಯಶಸ್ವಿಯಾಗಿತ್ತು.

‘ಹರಿ’ ಪಾತ್ರದಲ್ಲಿ ನಟ ರಿಷಬ್ ಶೆಟ್ಟಿ, ‘ಶಿವ’ ಎಂಬ ಪಾತ್ರದಲ್ಲಿ ರಾಜ್ ಪ್ರೇಕ್ಷಕರನ್ನು ಕರಾವಳಿಯ ರೌಡಿಸಂ ಲೋಕಕ್ಕೆ ಕರೆದೊಯ್ದಿದ್ದರು. ಸಂಕ್ರಾಂತಿಗೆ ಜೀ5ನಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.