ಸುಚೇಂದ್ರ ಪ್ರಸಾದ ನಿರ್ದೇಶನದ ‘ಪದ್ಮಗಂಧಿ’ ಚಿತ್ರ ಬಿಡುಗಡೆಗೆ ಸಿದ್ಧವಿದೆ. ನಟ, ನಿರ್ದೇಶಕರಾಗಿ ನಾಲ್ಕೂವರೆ ದಶಕಗಳನ್ನು ಪೂರೈಸಿರುವ ಅವರು ಈ ಚಿತ್ರದ ನೆಪದಲ್ಲಿ ಮಾತಿಗೆ ಸಿಕ್ಕರು...

‘ಗಂಧಕ್ಕೆ ಪರಿಮಳ ಎಂಬ ಇನ್ನೊಂದು ಅರ್ಥವಿದೆ. ಕಮಲದ ಪರಿಮಳವನ್ನು ಅರಸಿ ಹೊರಟ ಕಥೆ ಈ ‘ಪದ್ಮಗಂಧಿ’. ಪುರಾಣದಿಂದ ಹಿಡಿದು ಇಲ್ಲಿಯತನಕ ಕಮಲದ ಹೂವಿಗೆ ಇರುವ ಮಹತ್ವ, ಅದರ ವೈಶಾಲ್ಯ, ವಿಸ್ತಾರ, ವೈಚಾರಿಕ, ವೈಜ್ಞಾನಿಕ ನಿಲುವುಗಳನ್ನು ಅಧ್ಯಯನ ಮಾಡಿದವರು ಎಸ್.ಆರ್.ಲೀಲಾ. ಪ್ರಾಧ್ಯಾಪಕಿಯಾಗಿದ್ದ ಅವರು ಬಹಳ ಕಾಲ ಈ ವಿಷಯದ ಮೇಲೆ ಅಧ್ಯಯನ ಮಾಡಿದ್ದಾರೆ. ಅದಕ್ಕೊಂದು ರೂಪ ಕೊಡಬೇಕು ಎಂದು ನನ್ನ ಬಳಿ ಬಂದರು. ಆಗ ಈ ಚಿತ್ರದ ಆಲೋಚನೆ ಶುರುವಾಯಿತು’ ಎಂದು ಚಿತ್ರದ ವಿವರದೊಂದಿಗೆ ಮಾತು ಪ್ರಾರಂಭಿಸಿದರು ಸುಚೇಂದ್ರ ಪ್ರಸಾದ.

ಈ ಚಿತ್ರದ ಪರಿಕಲ್ಪನೆ, ನಿರ್ಮಾಣ ಎಸ್.ಆರ್ ಲೀಲಾ ಅವರದ್ದು. ಚಿತ್ರಕ್ಕೆ ಸುಚೇಂದ್ರ ಪ್ರಸಾದ ಚಿತ್ರಕಥೆ-ಸಂಭಾಷಣೆ-ನಿರ್ದೇಶನವಿದೆ. ಡಾ.ದೀಪಕ್ ಪರಮಶಿವನ್ ಸಂಗೀತ, ಎನ್. ನಾಗೇಶ್ ನಾರಾಯಣಪ್ಪ ಸಂಕಲನ, ಮನು ಯಾಪ್ಲಾರ್ ಮತ್ತು ನಾಗರಾಜ್ ಅದ್ವಾನಿ ಛಾಯಾಗ್ರಹಣವಿರುವ ಈ ಚಿತ್ರದಲ್ಲಿ ಮಹಾಪದ್ಮ, ಮೃತ್ಯುಂಜಯ ಶಾಸ್ತ್ರಿ ಪರಿಪೂರ್ಣ, ಪಂಡಿತ ಪ್ರಸನ್ನ ವೈದ್ಯ, ಡಾ. ದೀಪಕ್ ಪರಮಶಿವನ್ ಮುಂತಾದವರು ನಟಿಸಿದ್ದಾರೆ.

‘ಕಮಲ ಯಾಕೆ ರಾಷ್ಟ್ರೀಯ ಪುಷ್ಪವಾಯ್ತು, ಒಂದು ಪಕ್ಷಕ್ಕೆ ಲಾಂಛನವಾಯ್ತು, ಬ್ರಹ್ಮ ಯಾಕೆ ಇದರ ಮೇಲೆ ಕುಳಿತುಕೊಳ್ಳುತ್ತಾನೆ, ಆಯುರ್ವೇದಕ್ಕೆ ಇದು ಯಾಕೆ ಬೇಕು? ಎಂದು ನೋಡುತ್ತ ಹೋದಾಗ ಕಮಲಕ್ಕೆ 36000ಕ್ಕೂ ಹೆಚ್ಚು ಪರ್ಯಾಯ ನಾಮಗಳಿವೆ ಎಂದು ಕೇಳಿ ಅಚ್ಚರಿಯಾಯ್ತು. ಪದ್ಮ ಸಂಬಂಧಿ ಎಂಬ ಅರ್ಥದಲ್ಲಿ ಈ ಸಿನಿಮಾ ಮಾಡಲಾಗಿದೆ. ಕನ್ನಡ, ಸಂಸ್ಕೃತದಲ್ಲಿ ಚಿತ್ರೀಕರಿಸಿ, ಹಿಂದಿಗೂ ಡಬ್ ಮಾಡಲಾಗಿದೆ. ಇದರಲ್ಲಿ ರಂಜನೆ, ಮಾಹಿತಿ ಎರಡೂ ಇವೆ. ಮಾಹಿತಿ ತುರುಕುವ ಕೆಲಸ ಮಾಡಿಲ್ಲ. ದೃಷ್ಟಾಂತಗಳಿಗೆ ಮಾಹಿತಿಯನ್ನು ಹೊಂದಿಸಿದ್ದೇವೆ. ಈ ರೀತಿ ಚಿತ್ರಗಳನ್ನು ನೋಡುವ ಒಂದು ವರ್ಗವಿದೆ. ಹೇಳದೆ ಉಳಿದ ಅನೇಕ ಸಂಗತಿಗಳನ್ನು ಇಲ್ಲಿ ಹೇಳಿದ್ದೇವೆ’ ಎನ್ನುತ್ತಾರೆ ಅವರು.

1970ರ ದಶಕದಲ್ಲಿ ಚಿತ್ರರಂಗಕ್ಕೆ ಬಂದವರು ಇವರು. ಇಲ್ಲಿವರೆಗೆ ನೂರಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಎಂ.ಎಸ್.ಸತ್ಯು ಅವರ ‘ಘಳಿಗೆ’ ಚಿತ್ರದಿಂದ ಚಿತ್ರರಂಗಕ್ಕೆ ಕಾಲಿಟ್ಟರು. ‘ಕಾನೂರು ಹೆಗ್ಗಡತಿ’ ಇವರ ನಟನೆಯನ್ನು ಗುರುತಿಸಿದ ಚಿತ್ರ. ‘ರಾಷ್ಟ್ರೀಯ ನಾಟಕ ಶಾಲೆಯಲ್ಲಿ ಕಲಿತು ಬಂದವನು. ಹೀಗಾಗಿ ರಂಗದ ನಂಟು ಚೆನ್ನಾಗಿತ್ತು. ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯನ್ನು ಕಟ್ಟಿ ಬೆಳೆಸುವಲ್ಲಿ ನಾವೊಂದು ನಾಲ್ಕು ಮಂದಿ ಶ್ರಮ ಹಾಕಿದ್ದೆವು. ರಂಗಭೂಮಿ, ಸಿನಿಮಾ ಜತೆಗೆ ನಿರ್ದೇಶನವೂ ಸಾಗಿ ಬಂತು. ಪ್ರಯಾಣ ದೀರ್ಘ ಎನ್ನಿಸುತ್ತಿಲ್ಲ. ಹೊಸತು ಕಲಿಯಬೇಕು, ಇನ್ನಷ್ಟು ಕೆಲಸ ಮಾಡಬೇಕೆಂಬ ಮಹತ್ವಾಕಾಂಕ್ಷಿ ನಾನು. ಹೀಗಾಗಿ ಈ ಪಯಣ ಮುಂದುವರಿಯುತ್ತಲೇ ಇದೆ’ ಎಂದು ಸಿನಿಪಯಣದ ಕುರಿತು ವಿವರಿಸಿದರು.

‘ಕೆಡಿ’, ‘ಬಡವರು ಮಕ್ಕಳು ಬೇಳಿಬೇಕು’ ಮೊದಲಾದ ಸಿನಿಮಾಗಳು ಸೇರಿದಂತೆ ಸದ್ಯ 15ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ.

ಶಕ್ತಿಯನ್ನು ಬಳಸಿಕೊಳ್ಳಬೇಕಿತ್ತು

‘ದೃಶ್ಯ ಮಾಧ್ಯಮದ ಸದ್ಬಳಕೆ ಆಗುತ್ತಿಲ್ಲ ಎಂಬ ಆಕ್ಷೇಪ ನನಗೆ ಮೊದಲಿನಿಂದಲೂ ಇದೆ. ಒಂದು ನಿಕ್ಷೇಪವನ್ನು ವ್ಯವಹಾರಕ್ಕೆ ಮಾತ್ರ ಸೀಮಿತಗೊಳಿಸಬಾರದು. ಈ ಮಾಧ್ಯಮಕ್ಕೆ ಇರುವ ಇನ್ನೊಂದಷ್ಟು ಶಕ್ತಿಯನ್ನು ಬಳಸಿಕೊಳ್ಳಬೇಕಿತ್ತು. ಹೊಟ್ಟೆ ಹೊರೆದುಕೊಳ್ಳಲು ಮಾತ್ರ ಈ ಮಾಧ್ಯಮವನ್ನು ಬಳಸಿಕೊಂಡವೇನೋ ಎಂದು ಸಾಕಷ್ಟು ಸಲ ಅನ್ನಿಸುತ್ತದೆ. ಸಾಕಷ್ಟು ಚಿತ್ರಗಳಲ್ಲಿ ಅವಕಾಶ ನೀಡಿದ್ದಾರೆ. ಅದಕ್ಕೆ ಸದಾ ಕೃತಜ್ಞ. ಆದರೆ ಹಲವು ಸಲ ಪಾತ್ರಗಳಲ್ಲಿ ಏನು ಹೇಳಬೇಕೆಂದು ಹೊರಟಿದ್ದಾರೆ ಎಂಬ ಸ್ಪಷ್ಟತೆಯೇ ಸಿನಿಮಾ ತಂಡಗಳಿಗೆ ಇಲ್ಲವೇನೋ ಅನ್ನಿಸುತ್ತದೆ. ಪಾತ್ರ ಪೋಷಣೆ ಗಟ್ಟಿಯಾಗಬೇಕು’ ಎಂದು ಅವರು ಅಭಿಪ್ರಾಯ ಪಡುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.