ಮಂಗಳವಾರ, ಜನವರಿ 28, 2020
17 °C

ಮತ್ತೆ ಪದ್ಮಲಕ್ಷ್ಮಿಯ ನಗ್ನ ಅವತಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪದ್ಮಲಕ್ಷ್ಮಿ ಭಾರತೀಯ ಮೂಲದ ಅಮೆರಿಕದ ರೂಪದರ್ಶಿ. ಖ್ಯಾತ ಟಿ.ವಿ. ನಿರೂಪಕಿಯೂ ಹೌದು. ಅದೆಲ್ಲಕ್ಕಿಂತಲೂ ಆಕೆ ವಿಶ್ವದ ಪ್ರಸಿದ್ಧ ಆಹಾರ ತಜ್ಞೆ. ಟಿ.ವಿ.ಯಲ್ಲಿ ಪಾಕ ಶಾಸ್ತ್ರ ಕುರಿತ ಕಾರ್ಯಕ್ರಮ ನಡೆಸಿಕೊಡುವ ಮೂಲಕ ಆಕೆ ಅಮೆರಿಕದಲ್ಲಿ ಮನೆಮಾತಾಗಿದ್ದಾರೆ. ಜೊತೆಗೆ, ತನ್ನದೇ ಆದ ವೆಬ್‌ಸೈಟ್‌ನಲ್ಲಿ ಈ ಕಾರ್ಯಕ್ರಮದ ತುಣುಕುಗಳು, ತಾನು ತಯಾರಿಸಿದ ವಿಶಿಷ್ಟ ಅಡುಗೆಗಳ ಬಗ್ಗೆ ಪದ್ಮಲಕ್ಷ್ಮಿ ಪ್ರಕಟಿಸುತ್ತಾರೆ. ಇದಕ್ಕೆ ಸಾವಿರಾರು ಜನರು ಪ್ರತಿಕ್ರಿಯಿಸುತ್ತಾರೆ.

 
 
 
 

 
 
 
 
 
 
 
 
 

New year, same me 💛 (@vogueindia) #bts

A post shared by Padma Lakshmi (@padmalakshmi) on

ಆಕೆ ಹುಟ್ಟಿದ್ದು ತಮಿಳುನಾಡಿನ ಚೆನ್ನೈನಲ್ಲಿ. ಅಂದಹಾಗೆ ಆಕೆಗೆ ಈಗ ಬರೋಬ್ಬರಿ 49 ವರ್ಷ. ಪಾಕ ಶಾಸ್ತ್ರ ಕುರಿತ ಪುಸ್ತಕಗಳನ್ನೂ ಬರೆದಿದ್ದಾರೆ. ಸೌಂದರ್ಯವತಿಯೂ ಆದ ಪದ್ಮ ಲಕ್ಷ್ಮಿ ಅವಕಾಶ ಸಿಕ್ಕಿದಾಗಲೆಲ್ಲಾ ಸಾಮಾಜಿಕ ಜಾಲತಾಣದಲ್ಲಿ ತನ್ನ ದೇಹಸಿರಿ ಪ್ರದರ್ಶಿಸಲು ಹಿಂದೆ ಮುಂದೆ ನೋಡುವುದಿಲ್ಲ.

ಇತ್ತೀಚೆಗೆ ಆಕೆ ಇನ್‌ಸ್ಟಾಗ್ರಾಮ್‌ನಲ್ಲಿ ಹಾಕಿರುವ ನಗ್ನ (ಟಾಪ್‌ಲೆಸ್‌) ಫೋಟೊ ವೈರಲ್‌ ಆಗಿದೆ. ಪಾಕ ಪ್ರವೀಣೆಯ ಈ ಹೊಸ ಅವತಾರ ನೋಡಿ ಆಕೆಯ ಅಭಿಮಾನಿಗಳು ಕಕ್ಕಾಬಿಕ್ಕಿಯಾಗಿದ್ದಾರಂತೆ. ವಯಸ್ಸು ಮನಸ್ಸಿಗಷ್ಟೇ; ಸೌಂದರ್ಯಕ್ಕೆ ಅಲ್ಲ ಎನ್ನುವುದನ್ನು ಈ ನಗ್ನ ಫೋಟೊದ ಮೂಲಕ ಹೇಳಿದ್ದಾರಂತೆ. ಈ ಫೋಟೊದಲ್ಲಿ ಬೀಜ್ ಸ್ಕರ್ಟ್ ಧರಿಸಿರುವ ಆಕೆ, ಕೊರಳ ಸುತ್ತ ಹಳದಿ ಬಣ್ಣದ ಹೂವಿನ ಹಾರವನ್ನು ಸುತ್ತಿಕೊಂಡಿದ್ದಾರೆ.

 
 
 
 

 
 
 
 
 
 
 
 
 

🤍 (📷: @priscillabenedetti) #bw

A post shared by Padma Lakshmi (@padmalakshmi) on

ಕಳೆದ ವಾರ ಪದ್ಮ ಲಕ್ಷ್ಮಿ ಬೆಡ್ಡಿನ ಮೇಲೆ ನಗ್ನವಾಗಿ ಮಲಗಿದ ಫೋಸು ನೀಡಿ ಸುದ್ದಿಯಾಗಿದ್ದರು. ಕಪ್ಪು–ಬಿಳಿಪಿನ ಈ ಫೋಟೊ ವೈರಲ್‌ ಆಗಿತ್ತು. ಆಕೆಯ ಈ ಅವತಾರಕ್ಕೆ ಹಲವು ಮಂದಿ ವಿಭಿನ್ನವಾಗಿ ಪ್ರತಿಕ್ರಿಯಿಸಿದ್ದರು.

ಕಳೆದ ವರ್ಷ ಕೂಡ ಆಕೆ ಪಿಜ್ಜಾ ತುಂಡುಗಳೊಟ್ಟಿಗೆ ಬಾತ್‌ಟಬ್‌ನಲ್ಲಿ ತೆಗೆಸಿಕೊಂಡಿದ್ದ ನಗ್ನ ಫೋಟೊ ಸಾಕಷ್ಟು ಚರ್ಚೆ ಹುಟ್ಟುಹಾಕಿತ್ತು. ‘ನನ್ನ ಆರೋಗ್ಯಪೂರ್ಣ ದೇಹ ಪ್ರದರ್ಶಿಸಲು ನನಗೆ ಯಾವುದೇ ಹಿಂಜರಿಕೆ ಇಲ್ಲ’ ಎಂದು ಸಂದರ್ಶನವೊಂದರಲ್ಲಿ ಹೇಳುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು