ಗುರುವಾರ , ಡಿಸೆಂಬರ್ 5, 2019
19 °C

‘ಪೈಲ್ವಾನ್‌’ ಟ್ರೇಲರ್‌ನಲ್ಲಿ ಕಿಚ್ಚ ಸುದೀಪ್‌ ಖದರ್‌

Published:
Updated:

ಕೃಷ್ಣ ನಿರ್ದೇಶನದ ನಟ ಸುದೀಪ್‌ ನಾಯಕ ನಟರಾಗಿರುವ ಬಹುನಿರೀಕ್ಷಿತ ‘ಪೈಲ್ವಾನ್‌’ ಚಿತ್ರದ ಟ್ರೇಲರ್‌ ಬಿಡುಗಡೆಗೊಂಡಿದೆ. 

‘ಬಲ ಇದೆ ಅಂತಾ ಹೊಡೆದಾಡೋನು ರೌಡಿ. ಬಲವಾದ ಕಾರಣಕ್ಕೆ ಹೊಡೆದಾಡೋನು ಯೋಧ. ನಮ್ಮ ಕಿಚ್ಚ ಅಖಾಡಕ್ಕೆ ಇಳಿದ ಅಂದ್ರೆ ಸಿಂಹ ಸಾರ್‌ ಸಿಂಹ...’ ಎಂಬಂತಹ ಪೈಂಚಿಂಗ್‌ ಡೈಲಾಗ್‌ಗಳಿಗೆ ಕಿಚ್ಚನ ಅಭಿಮಾನಿಗಳು ಫಿದಾ ಆಗಿದ್ದಾರೆ.

ಇತ್ತೀಚೆಗೆ ಆಡಿಯೊ ಬಿಡುಗಡೆಗೊಳಿಸಿದ್ದ ಚಿತ್ರತಂಡ ಇಂದು ಟ್ರೇಲರ್‌ ಅನ್ನು ಬಿಡುಗಡೆಗೊಳಿಸಿದೆ. ಸೆಪ್ಟೆಂಬರ್‌ 12ರಂದು ಕನ್ನಡ ಸೇರಿದಂತೆ ಹಿಂದಿ, ತೆಲುಗು, ತಮಿಳು ಮತ್ತು ಮಲಯಾಳದಲ್ಲಿ ‘ಪೈಲ್ವಾನ್’ ತೆರೆ ಕಾಣುತ್ತಿದೆ. ಐದೂ ಭಾಷೆಯಲ್ಲೂ ಏಕಕಾಲದಲ್ಲಿ ಟ್ರೇಲರ್‌ ಬಿಡುಗಡೆಯಾಗಿದೆ.

‘ನಾನು ಗೆಲ್ಲುತ್ತೀನೋ, ಗೆಲ್ಲೋದಿಲ್ವೋ ಗೊತ್ತಿಲ್ಲ. ಆದ್ರೆ ಸೋಲನ್ನು ಸುಲಭವಾಗಿ ಒಪ್ಪಿಕೊಳ್ಳೊನು ನಾನಲ್ಲ’ ಎಂದು ಸುದೀಪ್‌ ಖಡಕ್‌ ಡೈಲಾಗ್‌ನಿಂದ ಗಮನ ಸೆಳೆಯುತ್ತಾರೆ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು