ಬುಧವಾರ, ಮಾರ್ಚ್ 3, 2021
18 °C

ರಾಮಮಂದಿರ ನಿರ್ಮಾಣಕ್ಕೆ ₹ 30 ಲಕ್ಷ ದೇಣಿಗೆ ನೀಡಿದ ಟಾಲಿವುಡ್ ನಟ ಪವನ್ ಕಲ್ಯಾಣ್

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಟಾಲಿವುಡ್‌ನ ಖ್ಯಾತ ನಟ, ರಾಜಕಾರಣಿ ಪವನ್ ಕಲ್ಯಾಣ್ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ₹30 ಲಕ್ಷ ದೇಣಿಗೆ ನೀಡಿದ್ದಾರೆ.

ಜನಸೇನಾ ಪಕ್ಷದ ಅಧ್ಯಕ್ಷರಾಗಿರುವ ಪವನ್‌ ‘ಭಗವಾನ್ ಶ್ರೀರಾಮ ಧರ್ಮ ಹಾಗೂ ತಾಳ್ಮೆಯ ಪ್ರತೀಕ. ರಾಮ ಮಾಡಿದ ತ್ಯಾಗ ಹಾಗೂ ತೋರಿದ ಧೈರ್ಯ ನಮಗೆಲ್ಲರಿಗೂ ಸ್ಫೂರ್ತಿ. ಭಾರತದಲ್ಲಿ ಎಲ್ಲರೂ ರಾಮನ ಹಾದಿಯಲ್ಲಿ ನಡೆಯುತ್ತಿದ್ದಾರೆ. ಆ ಕಾರಣಕ್ಕೆ ಅಂತಹ ಧರ್ಮದ ಪ್ರತಿರೂಪವಾದ ಅಯೋಧ್ಯೆಯಲ್ಲಿ ದೇವಾಲಯ ನಿರ್ಮಾಣಕ್ಕೆ ಎಲ್ಲರೂ ಒಗ್ಗಟ್ಟಾಗಿರುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ರಾಮಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ₹ 30 ಲಕ್ಷ ದೇಣಿಗೆ ನೀಡುತ್ತಿದ್ದೇನೆ’ ಎಂದಿದ್ದಾರೆ.

‘ನಾನು ದೇಣಿಗೆ ನೀಡಿದ್ದನ್ನು ಕೇಳಿ ನನ್ನ ನನ್ನೊಂದಿಗೆ ಕೆಲಸ ಮಾಡುವವರೆಲ್ಲರೂ ಒಂದಾಗಿ ₹ 11,000 ದೇಣಿಗೆ ಸಂಗ್ರಹಿಸಿದ್ದಾರೆ. ಅವರಲ್ಲಿ ಬರೀ ಹಿಂದೂಗಳಲ್ಲ, ಮುಸ್ಲಿಮರು ಹಾಗೂ ಕ್ರಿಶ್ಚಿಯನ್ನರು ಇದ್ದಾರೆ’ ಎಂದಿದ್ದಾರೆ.

ಸಿನಿಮಾಕ್ಕೆ ಸಂಬಂಧಿಸಿದಂತೆ ಪವನ್ ನಟನೆ, ಶ್ರೀರಾಮ್ ವೇಣು ನಿರ್ದೇಶನದ ‘ವಕೀಲ್ ಸಾಬ್’ ಚಿತ್ರ ಬಿಡುಗಡೆಗೆ ಸಿದ್ಧವಾಗಿದೆ. ಇದು ಬಾಲಿವುಡ್‌ನ ಪಿಂಕ್ ಸಿನಿಮಾದ ರಿಮೇಕ್ ಆಗಿದೆ. ಇದರಲ್ಲಿ ಪವನ್ ವಕೀಲನ ಪಾತ್ರಕ್ಕೆ ಬಣ್ಣ ಹಚ್ಚಲಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು