ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಜಿಟಲ್‌ ಜಗತ್ತಿನತ್ತ ಪವನ್‌ ಕಲ್ಯಾಣ್‌ ಚಿತ್ತ

Last Updated 10 ಸೆಪ್ಟೆಂಬರ್ 2020, 7:27 IST
ಅಕ್ಷರ ಗಾತ್ರ

ಸಕ್ರಿಯ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದರೂ ಸಿನಿಮಾ ಮೇಲೆ ಟಾಲಿವುಡ್‌ ನಟ ಪವನ್‌ ಕಲ್ಯಾಣ್‌ ಅವರಿಗೆ ಇರುವ ಕಡುಮೋಹ ಕಿಂಚಿತ್ತೂ ಕಡಿಮೆಯಾಗಿಲ್ಲ. ವೇಣು ಶ್ರೀರಾಮ್‌ ನಿರ್ದೇಶನದ ‘ವಕೀಲ್ ಸಾಬ್‌’ ಚಿತ್ರದಲ್ಲಿ ಅವರು ನಟಿಸುತ್ತಿರುವುದೇ ಇದಕ್ಕೆ ನಿದರ್ಶನ. ಇದು ಹಿಂದಿಯ ‘ಪಿಂಕ್‌’ ಚಿತ್ರದ ತೆಲುಗು ರಿಮೇಕ್‌.

ಇತ್ತೀಚೆಗೆ ಸ್ಟಾರ್‌ ನಟ, ನಟಿಯರು ವೆಬ್‌ ಸರಣಿಗಳ ಮೂಲಕ ಡಿಜಿಟಲ್‌ ಜಗತ್ತು ಪ್ರವೇಶಿಸಲು ಉತ್ಸುಕರಾಗಿದ್ದಾರೆ. ಈ ಜಗತ್ತಿನತ್ತ ಹೊಸ ಪೀಳಿಗೆಯು ಆಕರ್ಷಿತರಾಗಿರುವುದೇ ಇದಕ್ಕೆ ಕಾರಣ. ಹಾಗಾಗಿ, ಆ ಜಗತ್ತಿನ ಪ್ರೇಕ್ಷಕರನ್ನು ಸೆಳೆಯುವುದು ನಟ, ನಟಿಯರ ಮೂಲ ಉದ್ದೇಶ.

ಲಾಕ್‌ಡೌನ್‌ ಅವಧಿಯಲ್ಲಿ ಪವನ್‌ ಕಲ್ಯಾಣ್‌ ವಿದೇಶಿ ಹಾಗೂ ಭಾರತೀಯ ವೆಬ್‌ ಸರಣಿಗಳನ್ನು ವೀಕ್ಷಿಸಿದ್ದಾರೆ. ಹಾಗಾಗಿಯೇ, ಅವರು ವೆಬ್‌ ಸರಣಿಯಲ್ಲಿ ನಟಿಸಲು ಮನಸ್ಸು ಮಾಡಿದ್ದಾರೆ. ಅದಕ್ಕಾಗಿ ಸೂಕ್ತ ಕಥೆಯ ಹುಡುಕಾಟದಲ್ಲಿ ತೊಡಗಿದ್ದಾರೆ. ಶೀಘ್ರವೇ, ಈ ಬಗ್ಗೆ ಅಧಿಕೃತ ಮಾಹಿತಿ ಹೊರಬೀಳುವ ನಿರೀಕ್ಷೆಯಿದೆ ಎಂಬುದು ಟಾಲಿವುಡ್‌ ಅಂಗಳದ ಸುದ್ದಿ.

ಪವನ್‌ ಕಲ್ಯಾಣ್‌ ಈಗ ಸಿನಿಮಾ ಮತ್ತು ರಾಜಕೀಯದ ಎರಡೂ ದೋಣಿಗಳ ಮೇಲೆ ಪಯಣಿಸುತ್ತಿದ್ದಾರೆ. ರಾಜಕೀಯದಲ್ಲಿ ಯಶಸ್ಸು ಗಳಿಸಲು ಜನಸೇನಾ ಪಕ್ಷವನ್ನೂ ಕಟ್ಟಿದ್ದಾರೆ. ಆದರೆ, ಬೆಳ್ಳಿತೆರೆಯಲ್ಲಿ ಅವರಿಗೆ ಸಿಕ್ಕಿದಷ್ಟು ಸಕ್ಸಸ್‌ ರಾಜಕೀಯದಲ್ಲಿ ಸಿಕ್ಕಿಲ್ಲ. ಆದರೆ, ರಾಜಕಾರಣದ ಸಖ್ಯ ಕಳೆದುಕೊಳ್ಳಲು ಅವರು ಸಿದ್ಧರಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT