ಶನಿವಾರ, ಜುಲೈ 31, 2021
28 °C

‘ಪೆಂಗ್ವಿನ್‌’ನಲ್ಲಿ ಕೀರ್ತಿಯ ಬೀಭತ್ಸ ನೋಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕೀರ್ತಿ ಸುರೇಶ್ ಅಭಿನಯದ ‘ಪೆಂಗ್ವಿನ್‌’ ಚಿತ್ರದ ಇನ್ನೊಂದು ಪೋಸ್ಟರ್ ಬಿಡುಗಡೆಯಾಗಿದೆ. ಪೋಸ್ಟರ್‌ನಲ್ಲಿ ಅವರು ತಮ್ಮ ಹಿಂದಿನ ಎಲ್ಲಾ ಚಿತ್ರಗಳಿಗಿಂತ ಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಪೋಸ್ಟರ್‌ನಲ್ಲಿರುವ ಚಿತ್ರದಲ್ಲಿ ಕೀರ್ತಿಯ ತುಟಿಯಲ್ಲಿ ರಕ್ತ ಸೋರುತ್ತಿದ್ದು ಮೂಗು, ಹಣೆಯ ಮೇಲೆ ಗಾಯದ ಗುರುತುಗಳಿವೆ. ಈ ಚಿತ್ರ ಜೂನ್‌ 19 ರಂದು ಅಮೆಜಾನ್‌ ಪ್ರೈಮ್‌ನಲ್ಲಿ ಬಿಡುಗಡೆಯಾಗಲಿದೆ.

ಜ್ಯೋತಿಕಾ ಅಭಿಯನದ ‘ಪೊನ್ಮಗಲ್‌ ವಂದಲ್‌’ ಸಿನಿಮಾದ ನಂತರ ‘ಪೆಂಗ್ವಿನ್‌’ ಸಿನಿಮಾ ಒಟಿಟಿಯಲ್ಲಿ ಬಿಡುಗಡೆಯಾಗುತ್ತಿದೆ. ‘ಪೊನ್ಮಗಲ್‌ ವಂದಲ್‌‌’ ಸಿನಿಮಾ ಕಳೆದ ತಿಂಗಳು ಬಿಡುಗಡೆಯಾಗಿತ್ತು.

‘ಪೆಂಗ್ವಿನ್’ ಚಿತ್ರದ ಟೀಸರ್‌ ಜೂನ್‌ 8ರಂದು ಬಿಡುಗಡೆಯಾಗಲಿದೆ. ಈ ಚಿತ್ರವೂ ಮಹಿಳೆಯರ ಮೇಲಿನ ಅಪರಾಧಗಳ ಮೇಲೆ ಬೆಳಕು ಚೆಲ್ಲಲಿದೆ. ಈಶ್ವರ್ ಕಾರ್ತಿಕ್‌ ನಿರ್ದೇಶನದ ಈ ಚಿತ್ರವನ್ನು ಸ್ಟೋನ್‌ ಬೆಂಚ್‌ ಫಿಲ್ಮ್ಸ್‌ ಹಾಗೂ ಫ್ಯಾಷನ್‌ ಸ್ಟುಡಿಯೋಸ್‌ ಪ್ರೊಡಕ್ಷನ್‌ನಡಿ ಕಾರ್ತಿಕ್‌ ಸುಬ್ಬರಾಜ್‌ ನಿರ್ಮಾಣ ಮಾಡಿದ್ದಾರೆ. ಗರ್ಭಿಣಿಯೊಬ್ಬಳ ತವಕ, ತಲ್ಲಣ ಕುರಿತು ಹೇಳುವ ಚಿತ್ರ ಇದು.

ಕೀರ್ತಿ ಸುರೇಶ್ ‘ಮಹಾನಟಿ’ ಸಿನಿಮಾದಲ್ಲಿ ಮನೋಜ್ಞ ನಟನೆಗಾಗಿ ಕಳೆದ ವರ್ಷ ರಾಷ್ಟ್ರಪ್ರಶಸ್ತಿ ಪಡೆದಿದ್ದರು. ಮೋಹನ್‌ಲಾಲ್‌ ಜೊತೆಗೆ ‘ಮರಕ್ಕರ್ ಅರಬಿಕಡಲಿಂಟೆ ಸಿಂಹಮ್’ ಎಂಬ ಮಲಯಾಳ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಕೋವಿಡ್‌ 19 ಪರಿಣಾಮ ಈ ಸಿನಿಮಾದ ಬಿಡುಗಡೆಯ ದಿನಾಂಕ ಮುಂದಕ್ಕೆ ಹೋಗಿದೆ. ಅಲ್ಲದೆ ಅವರು ರಜನಿಕಾಂತ್‌ ನಟನೆಯ ‘ಅಣ್ಣಾತೆ’ ಸಿನಿಮಾದಲ್ಲೂ ನಟಿಸಲಿದ್ದಾರೆ. ಇದಕ್ಕೆ ಸಿರುಥೈ ಶಿವ ನಿರ್ದೇಶಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು