ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊರೊನಾ ರಜೆ | ವೀಲ್‌ಚೇರ್‌ ಡಾನ್ಸ್‌ ಥೆರೆಪಿ

Last Updated 8 ಏಪ್ರಿಲ್ 2020, 19:30 IST
ಅಕ್ಷರ ಗಾತ್ರ

ಕೊರೊನಾ ರಜೆ ಅವಧಿಯಲ್ಲಿ ‘ಮಿರಾಕಲ್‌ ಆನ್‌ ವೀಲ್ಸ್‌’ ಸಂಸ್ಥೆಯ ಸಯ್ಯದ್‌ ಸಲ್ಲಾಹುದ್ದೀನ್‌ ಪಾಷ ಅವರು ಅಂಗವಿಕಲರಿಗೆ ಉಚಿತವಾಗಿ ವೀಲ್‌ಚೇರ್‌ ಡಾನ್ಸ್‌ ಥೆರಪಿ ತರಬೇತಿ ನೀಡಲಿದ್ದಾರೆ.

ಸಯ್ಯದ್‌ ಸಲ್ಲಾಹುದ್ದೀನ್‌ ಪಾಷ ಹಾಗೂ ಅವರ ವಿದ್ಯಾರ್ಥಿಗಳು ಈ ತರಬೇತಿಯನ್ನು ಆನ್‌ಲೈನ್‌ ಮೂಲಕ ನಡೆಸಿಕೊಡಲಿದ್ದಾರೆ.

ಮನೆಯೊಳಗೆ ಕಾಲ ಕಳೆಯಬೇಕಾಗಿರುವುದರಿಂದ ಸಾಮಾನ್ಯ ಜನರಿಗೆ ಒಂದು ರೀತಿಯ ಏಕತಾನತೆ, ಆತಂಕ ಕಾಡುತ್ತಿದೆ. ಇನ್ನು ಅಂಗವಿಕಲರು, ವೀಲ್‌ಚೇರ್‌ಗೆ ಅಂಟಿಕೊಂಡವರ ಮನಸ್ಸು ಹೇಗಾಗಿರಬೇಡ? ಇಂಥಹವರಿಗೆ ಮನಸ್ಸು ಹಾಗೂ ದೇಹವನ್ನು ಸಕ್ರಿಯವಾಗಿ, ಆರೋಗ್ಯವಾಗಿರಿಸಿ ಕೊಳ್ಳಲು ವೀಲ್‌ಚೇರ್‌ ಡಾನ್ಸ್‌ ಥೆರಪಿ ಉತ್ತಮ ಮಾರ್ಗ ಎಂಬುದು ಪಾಷ ಅವರ ಅಭಿಪ್ರಾಯ.

ಈ ಥೆರಪಿಯಲ್ಲಿ ಪಾಲ್ಗೊಳ್ಳಲು ಬಯಸುವವರುinfo@miracleonwheels.in ಮೂಲಕ ರಿಜಿಸ್ಟರ್‌ ಮಾಡಿಕೊಳ್ಳಬೇಕು. ವೀಲ್‌ಚೇರ್‌ ಡಾನ್ಸ್‌ ಹಾಗೂ ಯೋಗ ಕಾರ್ಯಾಗಾರಗಳು ಆನ್‌ಲೈನ್‌ ಮೂಲಕ ಪ್ರತಿದಿನ ಬೆಳಿಗ್ಗೆ 10ರಿಂದ 11 ಗಂಟೆವರೆಗೆ ನಡೆಯುತ್ತವೆ. ಏಪ್ರಿಲ್‌ 14ರವರೆಗೆ ನಡೆಯಲಿದೆ. ಇಲ್ಲಿ ವೀಲ್‌ಚೇರ್‌ನಲ್ಲಿ ಭರತನಾಟ್ಯ ನೃತ್ಯ ನಿರ್ದೇಶನ, ಯೋಗ, ಸೂಫಿ ಡಾನ್ಸ್ ಹಾಗೂ ಇನ್ನಿತರ ನೃತ್ಯ ಪ್ರಕಾರಗಳನ್ನು ಕಲಿಸಲಾಗುತ್ತದೆ.
ಸಂಪರ್ಕಕ್ಕೆ: 95971 67987, 98113 40308

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT