ಕೋವಿಡ್–19 ಲಾಕ್ಡೌನ್ ಕಾರಣದಿಂದ ಮುಚ್ಚಿದ ಸಿನಿಮಾ ಥಿಯೇಟರ್ಗಳು ಹಾಗೂ ಮಲ್ಟಿಫ್ಲೆಕ್ಸ್ಗಳು ಅಕ್ಟೋಬರ್ 15 ರಿಂದ ಪುನರಾರಂಭಗೊಳ್ಳಲಿವೆ.

ಸದ್ಯ ದೊಡ್ಡ ಬಜೆಟ್ ಸಿನಿಮಾಗಳು ಥಿಯೇಟರ್ನಲ್ಲಿ ಬಿಡುಗಡೆಯಾಗುವುದು ಅನುಮಾನವಾಗಿದೆ. ಆದರೆ ಕೆಲವು ಕಡಿಮೆ ಬಜೆಟ್ ಹಾಗೂ ಮಧ್ಯಮ ವರ್ಗದ ಸಿನಿಮಾಗಳು ತೆರೆ ಮೇಲೆ ಬರಲು ಸಿದ್ಧವಾಗಿವೆ. ಅಲ್ಲದೇ ಅವು ಥಿಯೇಟರ್ ಆರಂಭವಾಗುವುದನ್ನೇ ಕಾಯುತ್ತಿವೆ.

ಇದರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಚರಿತ್ರೆ ಆಧಾರಿತ ‘ಪಿಎಂ ನರೇಂದ್ರ ಮೋದಿ’ ಸಿನಿಮಾ ಕೂಡ ಅಕ್ಟೋಬರ್ 15ಕ್ಕೆ ಮರು ಬಿಡುಗಡೆಯಾಗಲಿದೆ. ಈ ಚಿತ್ರದಲ್ಲಿ ನಟ ವಿವೇಕ್ ಒಬೇರಾಯ್ ಮೋದಿ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಚಲನಚಿತ್ರ ವಿಮರ್ಶಕ ಮತ್ತು ವ್ಯಾಪಾರ ವಿಶ್ಲೇಷಕ ತರಣ್ ಆದರ್ಶ್ ಚಿತ್ರಮಂದಿರಗಳಲ್ಲಿ ಈ ಸಿನಿಮಾ ಮರು ಬಿಡುಗಡೆಯಾಗುವ ಸುದ್ದಿಯನ್ನು ಸಾಮಾಜಿಕ ಮಾಧ್ಯಮದಲ್ಲಿ ಖಚಿತಪಡಿಸಿದ್ದಾರೆ.

ಪಿಎಂ ನರೇಂದ್ರ ಮೋದಿ ಸಿನಿಮಾ2019ರ ಮೇ 24ರಲ್ಲಿ ಬಿಡುಗಡೆಯಾಗಿತ್ತು. ಈ ಸಿನಿಮಾವನ್ನು ಓಮಂಗ್ ಕುಮಾರ್ ನಿರ್ದೇಶನ ಮಾಡಿದ್ದಾರೆ. ಸಂದೀಪ್ ಸಿಂಗ್ ಹಣ ಹೂಡಿಕೆ ಮಾಡಿದ್ದರು.

ಸಿನಿಮಾದಲ್ಲಿ ಬೋಮನ್ ಇರಾನಿ, ಮನೋಜ್ ಜೋಷಿ, ಪ್ರಶಾಂತ್ ನಾರಾಯಣ್, ಬರ್ಕಾ ಬಿಷ್ಟ್, ರಾಜೇಂದ್ರ ಗುಪ್ತಾ ಹಾಗೂ ಝರೀನಾ ವಹಾಬ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.