ಶುಕ್ರವಾರ, ಅಕ್ಟೋಬರ್ 29, 2021
20 °C

ಹೊಸ ಫೋಟೊಗಳನ್ನು ಹರಿಬಿಟ್ಟ ಪೂಜಾ ಹೆಗ್ಡೆ: ಬೋಲ್ಡ್‌ ಲುಕ್‌ನಲ್ಲಿ ನಟಿ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟಿ ಪೂಜಾ ಹೆಗ್ಡೆ ‘ಅಲಾ ವೈಕುಂಠಪುರಂ' ತೆಲುಗು ಸಿನಿಮಾ ನಂತರ ಸಾಕಷ್ಟು ಬುಜಿಯಾಗಿದ್ದಾರೆ. ಅವರು ಈಗ ತಮಿಳಿನಲ್ಲಿ ವಿಜಯ್ ನಟನೆಯ ‘ಬೀಸ್ಟ್' ಸೇರಿದಂತೆ ಸಾಲು ಸಾಲು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಅನೇಕ ದಿನಗಳಿಂದ ತಮ್ಮ ಫೋಟೊಶೂಟ್ ನಡೆಸಿರದಿದ್ದ ಪೂಜಾ, ಇದೀಗ ಹೊಸ ಫೋಟೊಗಳನ್ನು ಹರಿಬಿಟ್ಟಿದ್ದು ಅವು ಇಂಟರ್‌ನೆಟ್‌ನಲ್ಲಿ ಸದ್ದು ಮಾಡಿವೆ. ತಮ್ಮ ಸಾಮಾಜಿಕ ಜಾಲತಾಣಗಳ ಖಾತೆಗಳಲ್ಲಿ ಹೊಸ ಪೋಟೊಶೂಟ್‌ನ ಫೋಟೊಗಳನ್ನು ಹಂಚಿಕೊಂಡಿರುವ ಪೂಜಾ, ಪಡ್ಡೆ ಹುಡುಗರ ಬಿಸಿ ಏರಿಸಿದ್ದಾರೆ.

ಬಿಳಿ ಟಾಪ್‌ನಲ್ಲಿ ಗುಲಾಬಿ ಹಿಡಿದು ಫೋಸ್ ಕೊಟ್ಟಿರುವ ನಟಿ ಆಕರ್ಷಕ ಮೂರು ಫೋಟೊಗಳನ್ನು ಹಂಚಿಕೊಂಡಿದ್ದಾರೆ.

ಪೂಜಾ ಹೆಗ್ಡೆ ಪ್ರಭಾಸ್ ಅಭಿನಯದ ಬಹು ನಿರೀಕ್ಷಿತ ರೋಮ್ಯಾಂಟಿಕ್ ಚಿತ್ರವಾಗಿರುವ ‘ರಾಧೆ ಶ್ಯಾಮ್' 2022 ರ ಜನವರಿ 14 ಕ್ಕೆ ಬಿಡುಗಡೆಯಾಗಲು ಸಿದ್ದವಾಗಿದೆ. ಉಳಿದಂತೆ ತೆಲುಗಿನ ‘ಮೋಸ್ಟ್ ಎಲಿಜಿಬಲ್ ಬ್ಯಾಚಲರ್', ‘ಆಚಾರ್ಯ್', ‘ಸರ್ಕಸ್' ಹಾಗೂ ‘ಬೀಸ್ಟ್‌' ಸಿನಿಮಾಗಳಲ್ಲಿ ಸದ್ಯಕ್ಕೆ ಪೂಜಾ ತೊಡಗಿಸಿಕೊಂಡಿದ್ದಾರೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು