ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೂಜಾ ಹೆಗ್ಡೆ ಸಂಭಾವನೆ ಎಷ್ಟು?

Last Updated 29 ಅಕ್ಟೋಬರ್ 2019, 5:28 IST
ಅಕ್ಷರ ಗಾತ್ರ

ಸಿನಿಮಾ ಜಗತ್ತು ಎಂದಾಗ ಸೋಲು– ಗೆಲುವು, ಏರಿಳಿತಗಳು ಇರಲೇಬೇಕು. ಅದರಲ್ಲೂ ಒಂದರ ಹಿಂದೆ ಒಂದರಂತೆ ನಟಿಸಿದ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಗೆಲುವು ಕಾಣುವುದು ಅಪರೂಪ. ಆದರೆ ನಟಿ ಪೂಜಾ ಹೆಗ್ಡೆ ನಟಿಸಿದ ಹಲವು ಚಿತ್ರಗಳು ಹಿಟ್‌ ಆಗಿವೆ. ಇದಕ್ಕೆ ಈಗ ಗದ್ದಲಕೊಂಡ ಗಣೇಶ್‌ ಚಿತ್ರವೂ ಸೇರಿದೆ.

ಗದ್ದಲಕೊಂಡ ಗಣೇಶ್‌ ಚಿತ್ರದಲ್ಲಿ ಪೂಜಾ ನಾಯಕಿಯಾಗಿ ನಟಿಸಿದ್ದಾರೆ. ಚಿತ್ರದಲ್ಲಿ ಅವರ ಪಾತ್ರದ ಅವಧಿ ಕೇವಲ 20 ನಿಮಿಷ. ಇವರು ನಟಿಸಿದ ದೃಶ್ಯಗಳ ಚಿತ್ರೀಕರಣವನ್ನು 15 ದಿನಗಳಲ್ಲಿ ಮುಗಿಸಲಾಗಿತ್ತು. ಆದರೆ ಈ ಚಿತ್ರಕ್ಕೆ ಪೂಜಾ ಪಡೆದ ಸಂಭಾವನೆ ಬಗ್ಗೆ ಕೇಳಿದರೆ ಆಶ್ಚರ್ಯವಾಗುತ್ತದೆ.

ಬಹುತೇಕ ಎಲ್ಲ ಸಿನಿಮಾಗಳಲ್ಲಿ 50 ದಿನಗಳ ಕಾಲ್‌ಸೀಟ್‌ಗೆ ಪೂಜಾ ಅವರು ₹2 ಕೋಟಿ ಸಂಭಾವನೆ ಪಡೆಯುತ್ತಾರೆ. ಗದ್ದಲಕೊಂಡ ಗಣೇಶ್‌ ಚಿತ್ರಕ್ಕೂ ಪೂಜಾ ಇಷ್ಟೇ ಸಂಭಾವನೆ ಪಡೆದಿದ್ದಾರೆ.

ಈಗ ಈ ಸಿನಿಮಾ ಯಶಸ್ಸು ಕಂಡಿದ್ದು, ಇದರ ಬೆನ್ನಲ್ಲೇ ಪೂಜಾ ತಮ್ಮ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.

ಸದ್ಯ ಅವರು ‘ಅಲಾ ವೈಕುಂಠಪುರಮುಲೊ’ ಚಿತ್ರದಲ್ಲಿ ನಟಿಸುತ್ತಿದ್ದು, ಈ ಚಿತ್ರದ ಶೂಟಿಂಗ್‌ ಬಹುತೇಕ ಮುಗಿದಿದೆ. ಪ್ರಭಾಸ್‌ ನಟನೆಯ ಜಾನ್ ಚಿತ್ರದಲ್ಲೂ ಪೂಜಾ ನಾಯಕಿಯಾಗಿ ನಟಿಸುತ್ತಿದ್ದಾರೆ. ಇದನ್ನು ರಾಧಾ ಕೃಷ್ಣ ಕುಮಾರ್‌ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದ ಚಿತ್ರೀಕರಣವೂ ಶೇಕಡ 20ರಷ್ಟು ಮುಗಿದಿದೆ.

ಇತ್ತೀಚೆಗೆ ಅಖಿಲ್‌ ಅಕ್ಕಿನೇನಿ ಅವರ ಮುಂದಿನ ಚಿತ್ರದ ನಾಯಕಿ ಪೂಜಾ ಎಂದು ಗೋಷಣೆ ಮಾಡಿದ್ದರು. ಈ ಚಿತ್ರದ ಶೂಟಿಂಗ್‌ ಇನ್ನಷ್ಟೇ ಆರಂಭವಾಗಬೇಕಿದೆ. ಸದ್ಯ ಬಾಲಿವುಡ್‌ ಹಾಗೂ ಟಾಲಿವುಡ್‌ನಲ್ಲಿ ಬ್ಯುಸಿಯಾಗಿರುವ ಈ ನಟಿಯ ಕೈಯಲ್ಲಿ ಅನೇಕ ಸಿನಿಮಾಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT