ಬುಧವಾರ, ಜನವರಿ 19, 2022
17 °C

ಆಂಧ್ರ ನೆರೆ ಪರಿಹಾರ: ₹ 1 ಕೋಟಿ ದೇಣಿಗೆ ನೀಡಿದ ನಟ ಪ್ರಭಾಸ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹೈದರಾಬಾದ್‌: ಟಾಲಿವುಡ್‌ನ ಬಾಹುಬಲಿ ನಟ ಪ್ರಭಾಸ್‌ ಅವರು ಆಂಧ್ರದಲ್ಲಿನ ನೆರೆ ಪರಿಹಾರಕ್ಕಾಗಿ ಸರ್ಕಾರಕ್ಕೆ ₹ 1ಕೋಟಿ ದೇಣಿಗೆ ನೀಡಿದ್ದಾರೆ. 

ಇತ್ತೀಚೆಗೆ ಆಂಧ್ರಪ್ರದೇಶದ ರಾಯಲಸೀಮಾ ವಿಭಾಗದಲ್ಲಿ ತಿರುಪತಿ, ನೆಲ್ಲೂರು, ಅನಂತಪುರ ಸೇರಿದಂತೆ ಇತರೆ ಜಿಲ್ಲೆಗಳಲ್ಲಿ ಪ್ರವಾಹದಿಂದ ಅಪಾರ ನಷ್ಟವಾಗಿತ್ತು. ಹಲವರು ಮಳೆಗೆ ಬಲಿಯಾಗಿದ್ದರು.

ಜನರ ಕಷ್ಟಕ್ಕೆ ಮಿಡಿದ ನಟ ಪ್ರಭಾಸ್‌ ₹1 ಕೋಟಿ ದೇಣಿಗೆಯನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ನೀಡಿದ್ದಾರೆ. ಇದು ಸಂತ್ರಸ್ತರ ನೆರವಿಗೆ ಬರಲಿದೆ ಎಂದು ಪ್ರಭಾಸ್‌ ಹೇಳಿದ್ದಾರೆ.

ಆಂಧ್ರದಲ್ಲಿ ಪ್ರಭಾಸ್‌ ಮಾತ್ರವಲ್ಲದೆ, ಜ್ಯೂನಿಯರ್‌ ಎನ್‌ಟಿಆರ್‌, ಮಹೇಶ್‌ ಬಾಬು ಕೂಡ ₹ 25 ಲಕ್ಷ ದೇಣಿಗೆ ನೀಡಿದ್ದಾರೆ. ನಟ ಚಿರಂಜೀವಿ ಕೂಡ ದೇಣಿಗೆ ನೀಡಿದ್ದು ಅವರ ಮೊತ್ತ ಬಹಿರಂಗವಾಗಿಲ್ಲ.

ಓದಿ: ಹಣ ಅಕ್ರಮ ವರ್ಗಾವಣೆ: ಇ.ಡಿಯಿಂದ ಜಾಕ್ವೆಲಿನ್‌ ಫರ್ನಾಂಡಿಸ್‌ ವಿಚಾರಣೆ

ಸದ್ಯ ಪ್ರಭಾಸ್‌ ಮೂರು ಸಿನಿಮಾಗಳಲ್ಲಿ ಅಭಿನಯಿಸುತ್ತಿದ್ದಾರೆ. ಆದಿಪುರುಷ್‌ ಶೂಟಿಂಗ್‌ ಮುಕ್ತಾಯವಾಗಿರುವುದರಿಂದ ಸಲಾರ್‌, ಇನ್ನು ಹೆಸರಿಡದ ಎರಡು ಸಿನಿಮಾಗಳಲ್ಲಿ ತೊಡಗಿಸಿಕೊಂಡಿದ್ದಾರೆ ಎನ್ನಲಾಗಿದೆ. ಈಗಾಗಲೇ ರಾಧೆ–ಶ್ಯಾಮಾ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.

ಓದಿ: ಗೆಳೆಯ ಅಹಾನ್ ಶೆಟ್ಟಿ ಜೊತೆಗಿನ ಫೋಟೊ ಪೋಸ್ಟ್ ಮಾಡಿದ ತಾನಿಯಾ ಶ್ರಾಫ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು