ಮಂಗಳವಾರ, ನವೆಂಬರ್ 30, 2021
21 °C

ಫಿಟ್‌ನೆಸ್ ಟ್ರೇನರ್‌ಗೆ ರೇಂಜ್‌ ರೋವರ್‌ ಕಾರು ಗಿಫ್ಟ್‌ ಕೊಟ್ಟ ನಟ ಪ್ರಭಾಸ್‌!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಬಾಹುಬಲಿ’ ಸರಣಿ ಸಿನಿಮಾಗಳ ಯಶಸ್ಸಿನ ಬಳಿಕ ನಟ ಪ್ರಭಾಸ್‌ ‘ಬಾಕ್ಸ್‌ ಆಫೀಸ್‌ ಸುಲ್ತಾನ್’ ಎನಿಸಿಕೊಂಡಿದ್ದಾರೆ. ‘ಸಾಹೊ’ ಚಿತ್ರದ ಬಳಿಕ ಅವರು ಒಪ್ಪಿಕೊಳ್ಳುತ್ತಿರುವ ಬಿಗ್‌ ಬಜೆಟ್‌ ಸಿನಿಮಾಗಳೇ ಇದಕ್ಕೆ ಸಾಕ್ಷಿ. ಟಾಲಿವುಡ್‌ ಅಭಿಮಾನಿಗಳ ಪಾಲಿಗೆ ಅವರು ನೆಚ್ಚಿನ ‘ಡಾರ್ಲಿಂಗ್‌’ ಪ್ರಭಾಸ್‌.

ಪ್ರಭಾಸ್‌ ಮೊದಲ ಬಾರಿಗೆ ಗಲ್ಲಾಪೆಟ್ಟಿಗೆಯಲ್ಲಿ ಗೆದ್ದಿದ್ದು ‘ವರ್ಷಂ’ ಸಿನಿಮಾ ಮೂಲಕ. ಇದು ತೆರೆಕಂಡಿದ್ದು 2004ರಲ್ಲಿ. ಆದರೆ, ಅವರ ವೃತ್ತಿಬದುಕಿಗೆ ಹೊಸ ತಿರುವು ನೀಡಿದ್ದು ಎಸ್.ಎಸ್. ರಾಜಮೌಳಿ ನಿರ್ದೇಶನದ ‘ಛತ್ರಪತಿ’ ಚಿತ್ರ. ಅಲ್ಲದೇ, ರಾಜಮೌಳಿಯೇ ಆ್ಯಕ್ಷನ್‌ ಕಟ್‌ ಹೇಳಿದ ‘ಬಾಹುಬಲಿ’ ಸಿನಿಮಾಗಳಲ್ಲಿನ ನಟನೆಯು ವಿಶ್ವದಾದ್ಯಂತ ಅವರಿಗೆ ಜನಮನ್ನಣೆ ತಂದುಕೊಟ್ಟಿತು.

ಇದಾದ ಬಳಿಕ ಅವರು ನಟಿಸಿದ ‘ಸಾಹೊ’ ಸಿನಿಮಾ ತೆಲುಗು ಸೇರಿದಂತೆ ಇತರೇ ಭಾಷೆಗಳಲ್ಲಿ ನಿರೀಕ್ಷಿತಮಟ್ಟದಲ್ಲಿ ಕಲೆಕ್ಷನ್‌ ಮಾಡಲಿಲ್ಲ. ಆದರೆ, ಇದರ ಹಿಂದಿ ಅವತರಣಿಕೆಯು ಗಳಿಕೆಯಲ್ಲಿ ದಾಖಲೆ ಬರೆಯಿತು. ಇದು ವಿಶ್ವದಾದ್ಯಂತ ಪ್ರಭಾಸ್‌ ಅವರ ಅಭಿಮಾನಿಗಳ ಬಳಗದ ವೃದ್ಧಿಗೆ ಮುನ್ನುಡಿಯನ್ನೂ ಬರೆಯಿತು.

ಈಗ ಪ್ರಭಾಸ್‌ ಪ್ಯಾನ್‌ ಇಂಡಿಯಾ ಆ್ಯಕ್ಟರ್‌. ಅದಕ್ಕಾಗಿ ಅವರು ಪ್ರತಿದಿನವೂ ದೈಹಿಕ ಕಸರತ್ತು ನಡೆಸುತ್ತಾರೆ. ‘ಬಾಹುಬಲಿ’ ಚಿತ್ರದಲ್ಲಿ ಶಿವಲಿಂಗವನ್ನು ಎತ್ತಿಕೊಂಡು ಜಲಪಾತಕ್ಕೆ ಧುಮುಕುವ ಶಿವುಡುನ ಅಂಗಸೌಷ್ಠವವನ್ನು ಯಾರಾದರೂ ಮರೆಯಲು ಸಾಧ್ಯವೇ? ಜೊತೆಗೆ, ಆವಂತಿಕಾ ಜೊತೆಗಿನ ರೊಮ್ಯಾಂಟಿಕ್‌ ದೃಶ್ಯಗಳಲ್ಲಿ ಪ್ರಭಾಸ್‌ ಅವರ ಕಟ್ಟುಮಸ್ತಾದ ದೇಹ ಸಿನಿಪ್ರಿಯರ ಮನ ಸೆಳೆದಿತ್ತು. ಪರದೆ ಮೇಲೆ ಈ ಕಟ್ಟುಮಸ್ತಾದ ದೇಹ ಪ್ರೇಕ್ಷಕರನ್ನು ಸೆಳೆಯುವಂತೆ ಮಾಡುವಲ್ಲಿ ಪ್ರಭಾಸ್‌ ಅವರ ಫಿಟ್‌ನೆಸ್ ಟ್ರೇನರ್ ಅವರ ಶ್ರಮ ದೊಡ್ಡದಿದೆ. ಅವರ ಹೆಸರು ಲಕ್ಷ್ಮಣ್‌ ರೆಡ್ಡಿ.

ಪ್ರಭಾಸ್‌ ತನ್ನ ಸುತ್ತಲಿನ ಬಳಗದ ಸದಸ್ಯರಿಗೆ ಆರ್ಥಿಕ ಸಹಾಯಹಸ್ತ ಚಾಚುವುದರಲ್ಲಿ ಹಿಂದೆ ಬಿದ್ದವರಲ್ಲ. ಈಗ ಫಿಟ್‌ನೆಸ್ ಟ್ರೇನರ್ ಲಕ್ಷ್ಮಣ್‌ ರೆಡ್ಡಿಗೆ ಐಷಾರಾಮಿ ರೇಂಜ್‌ ರೋವರ್‌ ಕಾರನ್ನು ಗಿಫ್ಟ್‌ ಆಗಿ ನೀಡಿ ತನ್ನ ಪ್ರೀತಿ ಮೆರೆದಿದ್ದಾರೆ.

ಪ್ರಸ್ತುತ ‘ಆದಿಪುರುಷ್‌’ ಸಿನಿಮಾ ಮೂಲಕ ಬಣ್ಣದಲೋಕದಲ್ಲಿ ಮತ್ತೊಂದು ಹೊಸ ಅಧ್ಯಾಯ ಬರೆಯಲು ಅವರು‌ ಸಿದ್ಧರಾಗುತ್ತಿದ್ದಾರೆ. ಇದಕ್ಕೆ ಆ್ಯಕ್ಷನ್‌ ಕಟ್‌ ಹೇಳುತ್ತಿರುವುದು ‘ತಾನಾಜಿ’ ಖ್ಯಾತಿಯ ಓಂ ರಾವುತ್‌. ಇದರಲ್ಲಿ ‍ಪ್ರಭಾಸ್‌ ಅವರದು ರಾಮನ ಪಾತ್ರ. ಬಾಲಿವುಡ್‌ ನಟ ಸೈಫ್‌ ಅಲಿ ಖಾನ್‌ ಲಂಕೇಶನ ಪಾತ್ರದಲ್ಲಿ ನಟಿಸುತ್ತಿದ್ದಾರೆ. ₹ 500 ಕೋಟಿ ವೆಚ್ಚದಡಿ ನಿರ್ಮಾಣವಾಗುತ್ತಿರುವ 3ಡಿ ಸಿನಿಮಾ ಇದಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು