ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾವಾಣಿ ಸಾಧಕರು 2023 | ರಂಜನಿ ರಾಘವನ್ - ಅಭಿನಯದ ಗುಂಗು...ಸಾಹಿತ್ಯದ ಚುಂಗು

Last Updated 1 ಜನವರಿ 2023, 4:18 IST
ಅಕ್ಷರ ಗಾತ್ರ

'ಪ್ರಜಾವಾಣಿ' ಪಾಲಿಗಿದು ಅಮೃತ ಮಹೋತ್ಸವದ ವರ್ಷ. 75 ವರ್ಷಗಳ ಹಾದಿಯಲ್ಲಿ ಜನಮುಖಿಯಾಗಿರುವ ಪತ್ರಿಕೆ, ನಮ್ಮ ನಡುವಿನ ಪ್ರತಿಭಾವಂತರನ್ನು ಗುರುತಿಸುವ ಕೆಲಸವನ್ನೂ ಲಾಗಾಯ್ತಿನಿಂದ ಮಾಡುತ್ತಾ ಬಂದಿದೆ. 2020ರಿಂದ ಪ್ರತಿವರ್ಷ ಆಯಾ ಇಸವಿಯ ಕೊನೆಯ ಎರಡು ಅಂಕಿಗಳಿಗೆ ಹೊಂದುವಷ್ಟು ಸಂಖ್ಯೆಯ ಸಾಧಕರನ್ನು ಆಯ್ಕೆ ಮಾಡಿ, ಸನ್ಮಾನಿಸುತ್ತಿರುವುದೇ ಇದಕ್ಕೆ ಸಾಕ್ಷಿ. ಶಿಕ್ಷಣ, ಸಮಾಜಸೇವೆ, ವಿಜ್ಞಾನ, ಕ್ರೀಡೆ, ಸಾಹಿತ್ಯ–ಕಲೆ–ಮನರಂಜನೆ, ಪರಿಸರ, ಉದ್ಯಮ, ಸಂಶೋಧನೆ, ಆಡಳಿತ, ಕನ್ನಡ ಕೈಂಕರ್ಯ ಹೀಗೆ ಹಲವು ಕ್ಷೇತ್ರಗಳಲ್ಲಿ ತಮ್ಮಷ್ಟಕ್ಕೆ ತಾವು ಮುಗುಮ್ಮಾಗಿ ಸೇವೆ ಸಲ್ಲಿಸುತ್ತಿರುವವರನ್ನು 23 ಸಾಧಕರನ್ನು 2023ರ ಹೊಸವರ್ಷಕ್ಕೆ ಸಾಂಕೇತಿಕವಾಗಿ ಮಾಡಲಾಗಿದೆ. ಸಾಧಕರ ಕಿರು ಪರಿಚಯವನ್ನು ಇಲ್ಲಿ ನೀಡಲಾಗಿದ್ದು, ಅವರ ಹೆಜ್ಜೆಗುರುತುಗಳು ಈ ಅಕ್ಷರಚೌಕಟ್ಟನ್ನೂ ಮೀರಿದ್ದು. ಹೊಸ ವರ್ಷವನ್ನು ಈ ಸಾಧಕರೊಟ್ಟಿಗೆ ಬರಮಾಡಿಕೊಳ್ಳುವುದಕ್ಕೆ ಪತ್ರಿಕಾ ಬಳಗ ಹರ್ಷಿಸುತ್ತದೆ.

****

ಹೆಸರು: ರಂಜನಿ ರಾಘವನ್

ವೃತ್ತಿ: ಕಿರುತೆರೆ ನಟಿ

ಸಾಧನೆ: ನಟನೆಯ ಛಾಪು, ಸಾಹಿತ್ಯದ ಒಲವು

ಕನ್ನಡದ ಮನೆ ಮಾತಾಗಿರುವ ನಟಿ ರಂಜನಿ ರಾಘವನ್. ಕಿರುತೆರೆ ಹಾಗೂ ಹಿರಿತೆರೆ ಎರಡರಲ್ಲೂ ಅಭಿನಯದ ಮೂಲಕ ಕನ್ನಡಿಗರ ಮನಗೆದ್ದವರು. ಕಥೆಗಾರ್ತಿಯಾಗಿ ಸಾಹಿತ್ಯ ಲೋಕದಲ್ಲೂ ಛಾಪು ಮೂಡಿಸಿದವರು. ತಮ್ಮ 15 ಕಥೆಗಳ ಗುಚ್ಛ ‘ಕತೆ ಡಬ್ಬಿ’ಯ ಮೂಲಕ ಸಂಚಲನ ಉಂಟು ಮಾಡಿದವರು. ಒಂದು ವರ್ಷದಲ್ಲಿ 20 ಆವೃತ್ತಿಗಳನ್ನು ಕಂಡ ‘ಕತೆ ಡಬ್ಬಿ’ ಇನ್ನೂ ಬೇಡಿಕೆಯಲ್ಲಿರುವ ಕೃತಿ. ಹೊಸ ಓದುಗರನ್ನು ಕನ್ನಡಕ್ಕೆ ಕೊಟ್ಟ ಹೆಮ್ಮೆ ಇವರದ್ದು.

‘ಕೆಳದಿ ಚನ್ನಮ್ಮ’ ಧಾರಾವಾಹಿಯಲ್ಲಿ ಒಂದು ಪುಟ್ಟ ಪಾತ್ರದ ಮೂಲಕ ಕಿರುತೆರೆಗೆ ಹೆಜ್ಜೆ ಇಟ್ಟ ರಂಜನಿ ರಾಘವನ್‌, ‘ಪುಟ್ಟಗೌರಿ ಮದುವೆ’ ಹಾಗೂ ‘ಕನ್ನಡತಿ’ ಧಾರಾವಾಹಿಗಳಿಂದ ಮನೆಮಾತಾದವರು. ‘ರಾಜಹಂಸ’, ‘ಠಕ್ಕರ್’, ‘ಕ್ಷಮಿಸಿ ನಿಮ್ಮ ಖಾತೆಯಲ್ಲಿ ಹಣವಿಲ್ಲ’ – ಈಗಾಗಲೇ ತೆರೆ ಕಂಡಿರುವ ಇವರ ಅಭಿನಯದ ಚಿತ್ರಗಳು. ಕಿರುತೆರೆಯ ಅನೇಕ ಪ್ರಶಸ್ತಿಗಳು ಇವರನ್ನು ಅರಸಿ ಬಂದಿವೆ. ಮಿಸ್ ಇಂಡಿಯಾ ಸೂಪರ್ ಮಾಡೆಲ್ ಕಿರೀಟವೂ ಇವರಿಗೆ ಸಂದಿದೆ. ‘ಸ್ಟೈಪ್ ರೈಟ್’ ಇವರ ಮೊದಲ ಕಾದಂಬರಿ, ಇತ್ತೀಚೆಗಷ್ಟೇ ಬಿಡುಗಡೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT