ಪ್ರಜಾವಾಣಿ ಕನ್ನಡ ಸಿನಿ ಸಮ್ಮಾನ. ಚಂದನವನದ ಕಲಾವಿದರು ಮತ್ತು ತಂತ್ರಜ್ಞರನ್ನು ಗುರುತಿಸಿ, ಸತ್ಕರಿಸುವ ‘ಪ್ರಜಾವಾಣಿ’ಯ ಹೆಮ್ಮೆಯ ಕಾರ್ಯಕ್ರಮ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ,ಎರಡನೆಯ ವರ್ಷದ ಈ ಪ್ರತಿಷ್ಠಿತ ಸಮಾರಂಭದಲ್ಲಿ ಮನರಂಜನೆಯ ಮತ್ತೊಂದು ಲೋಕವೇ ಸೃಷ್ಟಿಯಾಗಿತ್ತು. ಕರ್ನಾಟಕದ ನಕ್ಷೆಯೊಂದಿಗೆ ಬಾಗಿ ಬಳುಕಿರುವ ಬಳ್ಳಿ ಇರುವ ಸಿನಿ ಸಮ್ಮಾನ ಪ್ರಶಸ್ತಿಯನ್ನು ಪಡೆದ ಕಲಾವಿದರು, ತಂತ್ರಜ್ಞರು ಸಂಭ್ರಮಿಸಿದರು. ಈ ಕಾರ್ಯಕ್ರಮದ ಸಂಪೂರ್ಣ ವಿಡಿಯೊ ಇದು.