ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

‘ಫೋಟೋ’ ಚೌಕಟ್ಟಿನಲ್ಲಿ ಪ್ರಕಾಶ್‌ ರಾಜ್‌

Published 22 ಫೆಬ್ರುವರಿ 2024, 22:45 IST
Last Updated 22 ಫೆಬ್ರುವರಿ 2024, 22:45 IST
ಅಕ್ಷರ ಗಾತ್ರ

ಬೆಂಗಳೂರು ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿದಲ್ಲಿ ಪ್ರೇಕ್ಷಕರಿಂದ ಮೆಚ್ಚುಗೆ ಪಡೆದ ‘ಫೋಟೋ’ ಸಿನಿಮಾ ಮಾರ್ಚ್‌ 15ರಂದು ತೆರೆಕಾಣಲಿದೆ. ಕೋವಿಡ್ ಸಮಯದ ಕಥೆಗೆ ನಟ ಪ್ರಕಾಶ್ ರಾಜ್ ಜೊತೆಯಾಗಿದ್ದಾರೆ. 

ಉತ್ಸವ್ ಗೋನವಾರ ನಿರ್ದೇಶನದ ‘ಫೋಟೋ’ ಸಿನಿಮಾವನ್ನು ನಿರ್ದಿಗಂತದ ಮೂಲಕ ಪ್ರಕಾಶ್ ರಾಜ್ ಪ್ರಸೆಂಟ್ ಮಾಡುತ್ತಿದ್ದಾರೆ. ಬುಧವಾರ ಶ್ರೀರಂಗಪಟ್ಟಣ ಸಮೀಪವಿರುವ ಪ್ರಕಾಶ್ ರಾಜ್ ಅವರ ನಿರ್ದಿಗಂತದಲ್ಲಿ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಡಾಲಿ ಧನಂಜಯ ಹಾಗೂ ‘ಲೂಸಿಯಾ’ ಖ್ಯಾತಿಯ ಪವನ್ ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದರು. 

‘ನಮ್ಮ ದೇಹಕ್ಕೆ ಆದ ಗಾಯಗಳು ನಾವು ಸುಮ್ಮನಿದ್ದರೂ ವಾಸಿಯಾಗುತ್ತವೆ. ಆದರೆ ಸಮಾಜಕ್ಕೆ ಆಗಿರುವ ಗಾಯ ನಾವು ಸುಮ್ಮನಿದಷ್ಟು ಜಾಸ್ತಿಯಾಗುತ್ತದೆ. ನನಗೆ ಉತ್ಸವ್ ಸಿನಿಮಾವನ್ನು ತೋರಿಸುವ ಆಸೆ ಬಹಳ ದಿನಗಳಿಂದ ಇತ್ತು. ಲಾಕ್‌ಡೌನ್‌ನಲ್ಲಿ ನೋಡಿದ ನೋವುಗಳನ್ನು ದಾಖಲೆ ಮಾಡಬೇಕು ಎಂದು 21 ವರ್ಷದ ಹುಡುಗನಿಗೆ ಅನಿಸಿದೆಯಲ್ಲ ಅದನ್ನು ಮೆಚ್ಚಬೇಕು. ನಾವು ಚಿತ್ರ ಮಾಡಲು ಆಗಲಿಲ್ಲ. ಈ ಚಿತ್ರಕ್ಕೆ ಬೆಂಬಲವಾಗಿ ನಿಲ್ಲೋಣಾ ಎಂದು ಇದನ್ನು ಬಿಡುಗಡೆ ಮಾಡಲು ನಿಂತೆವು. ‘ಫೋಟೋ’ ಪ್ಯಾನ್‌ ವರ್ಲ್ಡ್‌ ಸಿನಿಮಾ ಆಗಲಿದೆ’ ಎಂದರು ಪ್ರಕಾಶ್‌ ರಾಜ್‌.

ಉತ್ಸವ್ ಮಾತನಾಡಿ, ‘ಲಾಕ್‌ಡೌನ್‌ಗೂ ಮುನ್ನ ಕೊಡಗಿಗೆ ಹೋಗಿದ್ದೆ. ಆ ಸಮಯದಲ್ಲೊಂದು ಲೇಖನ ಓದಿದ್ದೆ. ಗಂಗಮ್ಮ ಎಂಬ ಗರ್ಭಿಣಿ ಬೆಂಗಳೂರಿನಿಂದ ಊರಿಗೆ ಹೋಗಬೇಕಾದರೆ ಮಧ್ಯದಲ್ಲಿ ಬಹುಅಂಗಾಂಗ ವೈಫಲ್ಯದಿಂದ ನಿಧನ ಹೊಂದುತ್ತಾರೆ. ಇದು ನನ್ನನ್ನು ಬಹಳವಾಗಿ ಕಾಡಿತು. ಈ ವಿಷಯ ದಾಖಲೆಯಾಗಬೇಕು ಎಂದು ಅನಿಸಿತು. ಆಗ ಬರೆಯಲು ಶುರು ಮಾಡಿದೆ. ಆ ನಂತರ ಅದನ್ನು ಸಿನಿಮಾ ಮಾಡಿದೆ’ ಎಂದು ಸಿನಿಮಾ ಕಥಾಹಂದರವನ್ನು ತೆರೆದಿಟ್ಟರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT