ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ಕೆಜಿಎಫ್–2 ವಿಶ್ವದಾದ್ಯಂತ ಭರ್ಜರಿ ಪ್ರದರ್ಶನ ಕಾಣುತ್ತಿದ್ದು, ಸಾವಿರ ಕೋಟಿ ಗಳಿಕೆಯತ್ತ ದಾಪುಗಾಲಿಟ್ಟಿದೆ. ಈ ನಡುವೆ, ಯಶ್‌ಗಾಗಿ ಪ್ರಶಾಂತ್ ನೀಲ್ ಕೆಜಿಎಫ್ ಮಾಡುವುದಕ್ಕೂ ಮುನ್ನ ಪುನೀತ್ ರಾಜ್‌ಕುಮಾರ್ ಅವರ ಸಿನಿಮಾ ಮಾಡಲು ಮುಂದಾಗಿದ್ದರು ಎಂಬ ಮಾಹಿತಿ ಹೊರಬಿದ್ದಿದೆ.

ನಿರೂಪಕಿ ಅನುಶ್ರೀ ಯೂಟ್ಯೂಬ್ ಚಾನಲ್ ಸಂದರ್ಶನದಲ್ಲಿ ಮಾತನಾಡಿರುವ ಅವರು, ಪುನೀತ್ ರಾಜ್‌ಕುಮಾರ್ ಅವರ ಜೊತೆ ಕೌಟುಂಬಿಕ ಕಥಾಹಂದರವಿರುವ ಸಿನಿಮಾ ಮಾಡಲು ಪ್ರಸ್ತಾವ ಇಟ್ಟಿದ್ದೆ ಎಂದು ಹೇಳಿಕೊಂಡಿದ್ದಾರೆ.

ತಮ್ಮ ಮೊದಲ ನಿರ್ದೇಶನದ ಸಿನಿಮಾ ಉಗ್ರಂ ಅಷ್ಟಾಗಿ ಯಶಸ್ಸು ಕಾಣದ ಹಿನ್ನೆಲೆಯಲ್ಲಿ ಕೌಟುಂಬಿಕ ಕಥಾ ವಸ್ತುವನ್ನು ಒಳಗೊಂಡ ‘ಆಹ್ವಾನ’ ಎಂಬ ಸಿನಿಮಾ ಮಾಡಲು ಪುನೀತ್ ಅವರ ಜೊತೆ ಮಾತುಕತೆ ನಡೆಸಿದ್ದೆವು. ಅವರಿಗೂ ಕಥೆ ಮತ್ತು ಸಿನಿಮಾ ಟೈಟಲ್ ಇಷ್ಟವಾಗಿತ್ತು. ಆದರೆ, ಆ ಬಳಿಕ 4 ತಿಂಗಳು ಅವರು ಬೇರೆ ಪ್ರಾಜೆಕ್ಟ್‌ಗಳಲ್ಲಿ ಬ್ಯುಸಿಯಾಗಿದ್ದರು. ಆ ನಡುವೆ ಕೆಜಿಎಫ್ ಶುರುವಾಯಿತು ಎಂದು ಪ್ರಶಾಂತ್ ನೀಲ್ ಹೇಳಿದ್ದಾರೆ.

ಉಗ್ರಂ ಸಿನಿಮಾದಿಂದ ಬಹಳಷ್ಟು ಹಣ ಕಳೆದುಕೊಂಡಿದ್ದೆ. ನಿರ್ಮಾಪಕನಾಗಿ ನನಗೆ ಸೇಲ್ಸ್ ಗೊತ್ತಿರಲಿಲ್ಲ. ಪ್ರಚಾರ ಸಿಗದೆ ಸಿನಿಮಾ ಅಷ್ಟಾಗಿ ಯಶಸ್ಸು ಕಾಣಲಿಲ್ಲ. ಸ್ಯಾಟಲೈಟ್ ಹಕ್ಕು ಖರೀದಿಸಲೂ ಸಹ ಯಾರೂ ಮುಂದೆ ಬಂದಿರಲಿಲ್ಲ ಎಂದು ಹೇಳಿಕೊಂಡಿದ್ದಾರೆ.

ಟ್ರೆಂಡ್‌ಗೆ ವಿರುದ್ಧ..

ಉಗ್ರಂ ನನಗೆ ಅತ್ಯಂತ ದೊಡ್ಡ ಪಾಠಗಳನ್ನು ಕಲಿಸಿತು. ಇರುವ ಟ್ರೆಂಡ್‌ಗೆ ವಿರುದ್ಧವಾಗಿ ಸಿನಿಮಾ ಮಾಡುವುದನ್ನು ಕಲಿತೆ. ಅದರಿಂದಲೇ ಕೆಜಿಎಫ್ ಮಾಡಲು ಸಾಧ್ಯವಾಯಿತು. ಸಿನಿಮಾ ಎಂದರೆ ಸೈನ್ಸ್ ಅಲ್ಲ. ಅದೊಂದು ಸ್ಟೋರಿ ಟೆಲ್ಲಿಂಗ್. ನಿಮ್ಮ ಕಥೆಯನ್ನು ಜನರ ಮುಂದಿಡಬೇಕು ಎಂದು ಪ್ರಶಾಂತ್ ಹೇಳಿದ್ದಾರೆ.

ಇದನ್ನೂ ಓದಿ.. ನಾಲ್ಕೇ ದಿನಕ್ಕೆ ₹ 551 ಕೋಟಿ ದಾಟಿದ ಕೆಜಿಎಫ್–2 ಗಳಿಕೆ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.