‘ಪ್ರೀಮಿಯರ್ ಪದ್ಮಿನಿ’ಯ ಎರಡನೇ ಭಾಗ ಸೆಟ್ಟೇರಲು ಸಿದ್ಧವಾಗಿದೆ. ಜಗ್ಗೇಶ್– ಪ್ರಮೋದ್ ಜೋಡಿ ಇಲ್ಲಿಯೂ ಮುಂದುವರಿದಿದೆ. ಅಂದು ನಾಯಕನ ಆತ್ಮೀಯ ಸ್ನೇಹಿತೆಯಾಗಿ ಕೊನೆಗೂ ವರ್ಗಾವಣೆಯಾಗಿ ಹೋದ ಸ್ಪಂದನಾ (ಸುಧಾರಾಣಿ) ಈ ಭಾಗದಲ್ಲಿ ಮತ್ತೆ ಸಿಗುತ್ತಾಳೋ ಎಂಬ ಕುತೂಹಲಪ್ರೇಕ್ಷಕನಲ್ಲಿ ಉಳಿದಿದೆ.

ಜಗ್ಗೇಶ್ – ಪ್ರಮೋದ್ (ಡ್ರೈವರ್ ನಂಜುಂಡಿ) ಜೊತೆಗೆ ಇನ್ನಷ್ಟು ಹೊಸ ಪಾತ್ರಗಳು ಮತ್ತು ಕಲಾವಿದರು ಸೇರಿಕೊಳ್ಳಲಿದ್ದಾರೆ.

‘ಪ್ರೀಮಿಯರ್ ಪದ್ಮಿನಿ’ ನಿರ್ದೇಶಕ ರಮೇಶ್ ಇಂದಿರಾ ಮತ್ತು ನಿರ್ಮಾಪಕಿ ಶ್ರುತಿ ನಾಯ್ಡು ಇತ್ತೀಚೆಗೆ ಸಿನಿಮಾ ಕುರಿತು ಜಗ್ಗೇಶ್ ಜತೆ ಮಾತುಕತೆ ನಡೆಸಿದ್ದಾರೆ ಎಂದು ಚಿತ್ರತಂಡದ ಮೂಲಗಳು ಹೇಳಿವೆ.

‘ಪ್ರೀಮಿಯರ್ ಪದ್ಮಿನಿ’ ಸಿನಿಮಾದಲ್ಲಿ ಜಗ್ಗೇಶ್, ಪ್ರಮೋದ್, ಮಧು, ಸುಧಾರಾಣಿ, ಹಿತ ಚಂದ್ರಶೇಖರ್, ವಿವೇಕ್ ಸಿಂಹ ರಮೇಶ್ ಇಂದಿರಾ, ದತ್ತಣ್ಣ, ಭಾರ್ಗವಿ ನಾರಾಯಣ್ ಮತ್ತಿತರರು ನಟಿಸಿದ್ದರು. ಕೌಟುಂಬಿಕ ಕಥಾಹಂದರದ ಚಿತ್ರ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿತ್ತು.

ಸದ್ಯ ಜಗ್ಗೇಶ್ ‘ರಾಘವೇಂದ್ರ ಸ್ಟೋರ್ಸ್’ನಲ್ಲೂ ಬ್ಯುಸಿಯಾಗಿದ್ದಾರೆ. ಅವರ ಪುತ್ರ ಗುರುರಾಜ್ ಅಭಿನಯದ ‘ಕಾಗೆಮೊಟ್ಟೆ’ ಚಿತ್ರ ಅ. 1ರಂದು ತೆರೆ ಕಾಣುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.