ಮಂಗಳವಾರ, 6 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ಅಣ್ಣಾತ್ತೆ' ಫಸ್ಟ್‌ ಲುಕ್: ರಜನಿಯ ಸ್ಟೈಲ್‌ಗೆ ಅಭಿಮಾನಿಗಳು ಫುಲ್‌ ಖುಷ್‌

Last Updated 11 ಸೆಪ್ಟೆಂಬರ್ 2021, 4:27 IST
ಅಕ್ಷರ ಗಾತ್ರ

ಬೆಂಗಳೂರು: ಗಣೇಶ ಚತುರ್ಥಿ ಪ್ರಯುಕ್ತ ಸೂಪರ್‌ಸ್ಟಾರ್‌ ರಜನಿಕಾಂತ್ ಅಭಿನಯದ ‘ಅಣ್ಣಾತ್ತೆ‘ ಸಿನಿಮಾದ ಫಸ್ಟ್‌ ಲುಕ್ ಹಾಗೂ ಮೋಷನ್ ಫೋಸ್ಟರ್ ಬಿಡುಗಡೆಯಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಸದ್ದು ಮಾಡುತ್ತಿದ್ದೆ.

ಶುಕ್ರವಾರ ಬೆಳಿಗ್ಗೆ 6 ಕ್ಕೆ ಮೋಷನ್ ಫೋಸ್ಟರ್‌ ಬಿಡುಗಡೆಯಾಗಿದ್ದು, ಅದೇ ದಿನ 10 ಗಂಟೆಗೆ ಫಸ್ಟ್‌ ಲುಕ್ ಬಿಡುಗಡೆಯಾಯಿತು.

ಯುಟ್ಯೂಬ್‌ನಲ್ಲಿ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿ 24 ಗಂಟೆಗಳಲ್ಲಿ 19 ಲಕ್ಷಕ್ಕೂ ಹೆಚ್ಚು ವೀಕ್ಷಣೆ ಪಡೆದಿದೆ.

ಇನ್ನು ಫಸ್ಟ್‌ಲುಕ್‌ ಪೋಸ್ಟರ್‌ನಲ್ಲಿ ರಜನಿಕಾಂತ್‌ ಬಿಳಿ ಅಂಗಿ, ಪಂಚೆಯಲ್ಲಿ ಕಾಣಿಸಿಕೊಂಡು ಮಾಸ್‌ ಲುಕ್‌ ನೀಡಿದ್ದಾರೆ. ರಜನಿಯ ವಿಭಿನ್ನ ಸ್ಟೈಲ್‌ಗೆ ಅಭಿಮಾನಿಗಳು ಫಿದಾ ಆಗಿದ್ದಾರೆ.

2020 ರಲ್ಲಿ ಎ.ಆರ್.ಮುರುಘದಾಸ್ ನಿರ್ದೇಶನದ ‘ದರ್ಬಾರ್‘ ಬಿಡುಗಡೆಯಾದ ನಂತರ ರಜನಿಕಾಂತ್ ಅವರ ಯಾವುದೇ ಸಿನಿಮಾಗಳು ಬಿಡುಗಡೆಯಾಗಿರಲಿಲ್ಲ. ಕೊರೊನಾ ಲಾಕ್‌ಡೌನ್ ಪರಿಣಾಮದಿಂದ 'ಅಣ್ಣಾತ್ತೆ' ಚಿತ್ರದ ಶೂಟಿಂಗ್ ಮೂರು ಬಾರಿ ಮುಂದಕ್ಕೆ ಹೋಗಿತ್ತು. ಅಲ್ಲದೇ ಒಂದು ಬಾರಿ ರಜನಿ ಅವರು ಕೊರೊನಾ ಸೋಂಕಿಗೆ ತುತ್ತಾಗಿದ್ದರು. ಇದೀಗ ಶೂಟಿಂಗ್ ಮುಗಿಸಿರುವ ಚಿತ್ರತಂಡ ಬಿಡುಗಡೆಗೆ ಸಿದ್ದತೆ ಮಾಡಿಕೊಳ್ಳುತ್ತಿದೆ.

ನವೆಂಬರ್ 4 ರಂದು ದೀಪಾವಳಿ ಹಬ್ಬಕ್ಕೆ ‘ಅಣ್ಣಾತ್ತೆ'ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ. ಈ ಸಿನಿಮಾವನ್ನು ಸನ್‌ ಪಿಕ್ಚರ್ಸ್‌ನ ಕಲಾನಿಧಿ ಮಾರನ್ ನಿರ್ಮಿಸುತ್ತಿದ್ದು, ನಿರ್ದೇಶಕ ಶಿವಾ ಅವರು ನಿರ್ದೇಶಿಸುತ್ತಿದ್ದಾರೆ. ನಯನತಾರಾ, ಕೀರ್ತಿ ಸುರೇಶ್, ಖುಷ್ಬೂ, ಮೀನಾಹಾಗೂ ಪ್ರಕಾಶ್ ರಾಜ್ ಮುಖ್ಯ ಭೂಮಿಕೆಯಲ್ಲಿ ನಟಿಸುತ್ತಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT