ಶುಕ್ರವಾರ, ಮೇ 27, 2022
21 °C

ನನಗೆ ಹೊಟ್ಟೆಕಿಚ್ಚಾಗುತ್ತಿದೆ: ಸಹೋದರಿ ಫೋಟೊ ನೋಡಿ ಪ್ರಿಯಾಂಕ ಕಮೆಂಟ್!

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

Parineeti Instagram

ಬೆಂಗಳೂರು: ನಟಿ ಪ್ರಿಯಾಂಕ ಚೋಪ್ರಾ ತನ್ನ ಸಹೋದರಿ ಪರಿಣಿತಿ ಚೋಪ್ರಾ ಫೋಟೊ ನೋಡಿ ಹೊಟ್ಟೆಕಿಚ್ಚಾಗುತ್ತಿದೆ ಎಂದು ಕಮೆಂಟ್ ಮಾಡಿದ್ದಾರೆ!

ಪರಿಣಿತಿ ಚೋಪ್ರಾ ತನ್ನ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಟರ್ಕಿ ಬೀಚ್‌ನಲ್ಲಿ ಇರುವ ಫೋಟೊ ಪೋಸ್ಟ್ ಮಾಡಿದ್ದರು.

ಪರಿಣಿತಿ ಚೋಪ್ರಾ ಫೋಟೊಗೆ ಅಭಿಮಾನಿಗಳು ಲೈಕ್ ಮಾಡಿದ್ದರೆ, ಪ್ರಿಯಾಂಕ ಚೋಪ್ರಾ ಮಾತ್ರ ಕಮೆಂಟ್ ಮೂಲಕ ಸಹೋದರಿಯ ಕಾಲೆಳೆದಿದ್ದಾರೆ.

ನಟಿ ಪ್ರಿಯಾಂಕ ಪ್ರಸ್ತುತ ಸಿಟಾಡೆಲ್‌ ಟಿವಿ ಸರಣಿ ಚಿತ್ರೀಕರಣಕ್ಕಾಗಿ ಲಂಡನ್‌ನಲ್ಲಿದ್ದಾರೆ. ಅಲ್ಲದೆ, ಲಾಕ್‌ಡೌನ್ ಮುಂತಾದ ನಿರ್ಬಂಧಗಳಿಂದಾಗಿ ಹೊರಗಡೆ ಹೆಚ್ಚು ತಿರುಗಾಡಲು ಕೂಡ ಸಾಧ್ಯವಾಗುತ್ತಿಲ್ಲ.

ಇತ್ತ ಪರಿಣಿತಿ ಚೋಪ್ರಾ, ಕಪ್ಪು ಬಣ್ಣದ ಬಿಕಿನಿ ಧರಿಸಿ, ಟರ್ಕಿಯ ಸಮುದ್ರ ತೀರದಲ್ಲಿ ಕುಳಿತುಕೊಂಡ ಫೋಟೊ ಪೋಸ್ಟ್ ಮಾಡಿದ್ದು, ಈ ಚಿತ್ರ ತೆಗೆಯುವ ಮೊದಲು ಪ್ರಾಣಾಯಾಮ ಮಾಡುತ್ತಿದ್ದೆ, ಆದರೆ ಅದು ಸುಳ್ಳು ಎಂದು ಅಡಿಬರಹ ನೀಡಿದ್ದರು.


ಟರ್ಕಿ ಬೀಚ್‌ನಲ್ಲಿ ಇರುವ ಫೋಟೊ

ಪರಿಣಿತಿ ಪೋಸ್ಟ್‌ಗೆ ವಸ್ತ್ರ ವಿನ್ಯಾಸಕ ಮನೀಶ್ ಮಲ್ಹೋತ್ರಾ ಕೂಡ ಉಫ್ ಎಂದು ಕಮೆಂಟ್ ಮಾಡಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು