ಶನಿವಾರ, 15 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಜ್ರ ಕಾಣಲಿ ಎಂದು...

Published 31 ಮೇ 2024, 18:37 IST
Last Updated 31 ಮೇ 2024, 18:37 IST
ಅಕ್ಷರ ಗಾತ್ರ

ರೇಷ್ಮೆಗೂದಲನ್ನು ಆಗಾಗ ನೇವರಿಸುತ್ತ ಮಾತನಾಡುತ್ತಿದ್ದ ಪಿಗ್ಗಿ (ಪ್ರಿಯಾಂಕಾ ಚೋಪ್ರಾ)ಈಗ ಆ ಕೂದಲನ್ನು ಕಿವಿಯುದ್ದಕ್ಕ ಕತ್ತರಿಸಿಕೊಂಡಿದ್ದಾರೆ. ಕತ್ತಿನ ಸುತ್ತ ಅಲಂಕರಿಸಿದ ವಜ್ರದ ಸರ ಕಾಣಲಿ ಎಂದೇ ಈ ಅವತಾರ ಎಂದೂ ಹೇಳಿಕೊಂಡಿದ್ದಾರೆ. ವರ್ಷಾನುಗಟ್ಟಲೆ, ಶೋಲ್ಡರ್‌ ಲೆಂತ್‌ ಇಟ್ಕೊಂಡು, ಭುಜದಿಂದ ಅಲೆಅಲೆಯಾಗಿ ಕೇಶರಾಶಿಯನ್ನು ಇಳಿಬಿಡುತ್ತಿದ್ದ ಪ್ರಿಯಾಂಕಾ ಚೋಪ್ರಾ ಜೋನ್ಸ್‌, ಈಗ ಕೂದಲಿಗೆ ಕತ್ತರಿ ಹಾಕಿದ್ದಾರೆ.

ಮೊದಲ ಸಲ ಬಾಬ್‌ ಕಟ್‌ ಮಾಡಿಸಿದ್ದು,  ತಮ್ಮ ಕತ್ತನ್ನು ಅಲಂಕರಿಸಿರುವ 140 ಕ್ಯಾರೆಟ್‌ನ ವಜ್ರದ ಸರ ಕಾಣಲೆಂದು... ಹುಬ್ಬೇರಿಸಬೇಡಿ.. ಹೌದು, ಸರ ಕಾಣಲಿ ಎಂದು ಕೂದಲಿಗೆ ಕತ್ತರಿಯಾಡಿಸಿದ್ದಾರೆ. ಬಲ್ಗರಿ ಆಭರಣ ಬ್ರ್ಯಾಂಡ್‌ನ 140ನೇ ವಾರ್ಷಿಕೋತ್ಸವದಲ್ಲಿ ಈ ಹೊಚ್ಚಹೊಸ ನೆಕ್ಲೇಸ್‌ ಧರಿಸಲು ಪ್ರಿಯಾಂಕಾ ಚಿಕ್‌ ಬಾಬ್‌ ಕಟ್‌್ ಮಾಡಿಸಿಕೊಂಡಿದ್ದಾರೆ.

ಈ ಹಿಂದೆ ಅವರ ಕೆರಿಯರ್‌ನ ಆರಂಭದಲ್ಲಿ ಮೇಘನಾ ಮಾಥುರ್‌ ಎಂಬ ರೂಪದರ್ಶಿಯಾಗಿ ಫ್ಯಾಷನ್‌ ಚಿತ್ರದಲ್ಲಿ ಇದೇ ಥರದ ಕೇಶವಿನ್ಯಾಸದಲ್ಲಿ ಕಾಣಿಸಿಕೊಂಡಿದ್ದರು. ಅವರ ಅಭಿಮಾನಿಗಳು, ವಾಟ್ಸ್‌ ಯುವರ್‌ ರಾಶಿ ಚಿತ್ರವನ್ನೂ ನೆನಪಿಸಿಕೊಂಡಿದ್ದಾರೆ. ವಜ್ರದ ಓಲೆ ತೊಟ್ಟವರು ಆಗಾಗ ಕಿವಿ ನೇವರಿಸುವಂತೆ, ಮೂಗುತಿ ತೊಟ್ಟವರು ಕೆನ್ನೆಗೆ ಬೆರಳಾನಿಸಿ, ಜನರ ಗಮನ ಸೆಳೆಯುವಂತೆ ಮಾಡುತ್ತಾರಲ್ಲ.. ಹಾಗೆಯೇ ಪ್ರಿಯಾಂಕಾ ಸಹ ಈ ಸರ ಕಾಣಲಿ ಎಂದೇ ಕೂದಲಿಗೆ ಕತ್ತರಿ ಹಾಕಿ, ಕೊರಳುದ್ದ ಮಾಡಿ, ಚಿತ್ರಗಳಿಗೆ ಪೋಸು ನೀಡಿದ್ದಾರೆ.

v

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT