ಸೋಮವಾರ, 15 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಿತ್ರೀಕರಣದ ವೇಳೆ ನಟಿ ಪ್ರಿಯಾಂಕಾ ಚೋಪ್ರಾಗೆ ಗಾಯ

Published 19 ಜೂನ್ 2024, 9:33 IST
Last Updated 19 ಜೂನ್ 2024, 9:33 IST
ಅಕ್ಷರ ಗಾತ್ರ

ವಾಷಿಂಗ್ಟನ್‌: ‘ದಿ ಬ್ಲಫ್‌’ ಚಿತ್ರದ ಚಿತ್ರೀಕರಣದ ವೇಳೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಅವರು ಗಾಯಗೊಂಡಿದ್ದು, ಗಂಟಲಿನ ಹೊರಭಾಗಕ್ಕೆ ಪೆಟ್ಟು ಬಿದ್ದಿರುವುದಾಗಿ ಅವರು ತಿಳಿಸಿದ್ದಾರೆ.

ಈ ಕುರಿತಂತೆ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಪ್ರಿಯಾಂಕಾ, ‘ವೃತ್ತಿ ಜೀವನದಲ್ಲಿ ಎದುರಾಗುವ ಅಪಾಯಗಳು’ ಎಂದು ಬರೆದುಕೊಂಡಿದ್ದಾರೆ. ಸ್ಟಂಟ್ ಮಾಡುವಾಗ ಗಾಯಗೊಂಡಿರುವುದಾಗಿ ತಿಳಿಸಿದ್ದಾರೆ.

ಗಂಟಲಿನ ಹೊರಭಾಗದಲ್ಲಿ ಗೀಟು ಎಳೆದಂತೆ ಗಾಯವಾಗಿದ್ದು, ಹೆಚ್ಚು ಆಳವಾಗಿ ಗಾಯವಾಗಿಲ್ಲ ಎನ್ನುವುದನ್ನು ಚಿತ್ರದಲ್ಲಿ ಕಾಣಬಹುದು.

ಹಾಲಿವುಡ್‌ ನಿರ್ದೇಶಕ ಫ್ರಾಂಕ್ ಇ. ಫ್ಲವರ್ಸ್ ನಿರ್ದೇಶನದ ‘ದಿ ಬ್ಲಫ್’ ಚಿತ್ರದಲ್ಲಿ ಪ್ರಿಯಾಂಕಾ ಚೋಪ್ರಾ ಜೋನಾಸ್ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ನಟರಾದ ಕಾರ್ಲ್ ಅರ್ಬನ್, ಇಸ್ಮಾಯೆಲ್ ಕ್ರೂಜ್ ಕಾರ್ಡೋವಾ, ನಟಿ ಸಫಿಯಾ ಓಕ್ಲೆ ಗ್ರೀನ್ ಮುಂತಾದವರು ಚಿತ್ರದಲ್ಲಿ ನಟಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT