ಮಂಗಳವಾರ, ಜನವರಿ 18, 2022
27 °C

ಚೆಫ್‌ ಜೊತೆ ಆರತಿ ಬೆಳಗಿದ ಪ್ರಿಯಾಂಕಾ ಚೋಪ್ರಾ; ಮನಸೋತ ಅಭಿಮಾನಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಚೆಫ್‌ ಜೊತೆಗೆ ಆರತಿ ಬೆಳಗಿದ ಪ್ರಿಯಾಂಕಾ ಚೋಪ್ರಾ

ನಟಿ ಪ್ರಿಯಾಂಕಾ ಚೋಪ್ರಾ ಅವರು ತಮ್ಮ ಮನೆಯ ಅಡುಗೆ ಸಿಬ್ಬಂದಿ (ಚೆಫ್‌) ಸ್ಯಾಮಿ ಉಡೆಲ್‌ ಅವರೊಂದಿಗೆ ಲಾಸ್‌ ಏಂಜಲೀಸ್‌ನಲ್ಲಿರುವ ನಿವಾಸದಲ್ಲಿ ಆರತಿ ಬೆಳಗಿರುವ ವಿಡಿಯೊ ಇದೀಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ. ಪ್ರಿಯಾಂಕಾ ಪತಿ, ಗಾಯಕ ನಿಕ್‌ ಜೋನಸ್‌ ಅವರು ಚಪ್ಪಾಳೆಯ ಮೂಲಕ ತಾಳ ಹಾಕುತ್ತಿರುವುದನ್ನು ವಿಡಿಯೊದಲ್ಲಿ ಕಾಣಬಹುದು.

ಸ್ನೇಹಿತರು ಮತ್ತು ಸಿಬ್ಬಂದಿಯನ್ನು ಪ್ರಿಯಾಂಕಾ ಮತ್ತು ನಿಕ್‌ ಸದಾ ಕುಟುಂಬದ ಸದಸ್ಯರ ರೀತಿ ಕಾಣುವ ಬಗ್ಗೆ ಅವರ ಅಭಿಮಾನಿಗಳು ಕೊಂಡಾಡಿದ್ದಾರೆ. ಅವರಿಗೆ ಎಂದೂ ಬತ್ತದ ಪ್ರೀತಿ ಮತ್ತು ಸಂತೋಷವನ್ನು ದೇವರು ಕರುಣಿಸಲಿ ಎಂದು ಕೋರಿದ್ದಾರೆ. ಮತ್ತೊಬ್ಬರು ಇದು 'ಪರಿಶುದ್ಧ'ವಾದುದು ಎಂದು ಕರೆದಿದ್ದಾರೆ.

ಕಳೆದ ವರ್ಷ ದೀಪಾವಳಿ ಸಮಯದಲ್ಲಿ ನಡೆದಿರುವ ಲಕ್ಷ್ಮಿ ಪೂಜೆ ಇದಾಗಿದೆ. ಪ್ರಿಯಾಂಕಾ ನವೆಂಬರ್‌ನಲ್ಲಿ ಲಕ್ಷ್ಮಿ ಪೂಜೆ ಚಿತ್ರಗಳನ್ನು ಹಂಚಿಕೊಂಡಿದ್ದರು. ಅದರಲ್ಲಿ ಪ್ರಿಯಾಂಕಾ ಹಳದಿ ಸೀರೆಯಲ್ಲಿ ಕಾಣಿಸಿಕೊಂಡಿದ್ದರು ಹಾಗೂ ಬಿಳಿ ಕುರ್ತಾ–ಪೈಜಾಮ ಧರಿಸಿದ್ದ ನಿಕ್‌ ಸಹ ಆರತಿ ಬೆಳಗಿದ್ದರು.

'ಯಾ ದೇವಿ ಸರ್ವಭೂತೇಷು ಲಕ್ಷ್ಮಿ ರೂಪೇಣ ಸಂಸ್ಥಿತಾ. ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ...' ಎಂದು ಪ್ರಿಯಾಂಕಾ ಪ್ರಕಟಿಸಿದ್ದರು.

ಟೆಕ್ಸ್ಟ್‌ ಫಾರ್ ಯು, ಸಿಟಾಡೆಲ್‌ ಹಾಗೂ ಜೀ ಲೆ ಝರಾ ಸಿನಿಮಾ ಹಾಗೂ ಸೀರಿಸ್‌ಗಳಲ್ಲಿ ಪ್ರಿಯಾಂಕಾ ಕಾಣಿಸಿಕೊಳ್ಳಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು