ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಧರೆಯೇ ಹೊತ್ತಿ ಉರಿಯುವಂತಹ ವಾತಾವರಣ ನಿರ್ಮಾಣವಾಗಿದೆ. ಕಾಳ್ಗಿಚ್ಚು ಲಾಸ್ ಏಂಜಲೀಸ್ಗೆ ವ್ಯಾಪಿಸಿದ್ದು, ಗ್ರಹಣ ಬಂದಾಗ ಕಾಣುವಂತ ಕಡುಗೆಂಪು ಬಣ್ಣದ ಬೆಂಕಿಯ ಜ್ವಾಲೆಗಳು ಕಂಡುಬರುತ್ತಿವೆ.

ಹಾಲಿವುಡ್ನ ಖ್ಯಾತನಾಮರು, ಬಾಲಿವುಡ್ನಲ್ಲಿ ಹೆಸರು ಮಾಡಿರುವ ಕೆಲವರೂ ಇಲ್ಲಿ ನೆಲೆಸಿದ್ದಾರೆ. ಆ ಪೈಕಿ ನಟಿಯರಾದ ಪ್ರಿಯಾಂಕಾ ಚೋಪ್ರಾ, ನೋರಾ ಫತೇಹಿ ಈ ಬೆಂಕಿಯ ಕೆನ್ನಾಲಿಗೆಗೆ ಬೆಚ್ಚಿ ಬಿದ್ದಿದ್ದಾರೆ.

ನಟಿ ನೋರಾ ಫತೇಹಿ ಲಾಸ್ ಏಂಜಲೀಸ್ನಲ್ಲಿ ಕಾಡ್ಗಿಚ್ಚಿನ ಮಧ್ಯೆ ಸಿಕ್ಕಿಬಿದ್ದು, ಕ್ಷಣಾರ್ಧದಲ್ಲಿ ತನ್ನ ಸ್ಥಳವನ್ನು ಖಾಲಿ ಮಾಡಿ ಪಾರಾಗಿದ್ದಾರೆ. ಘಟನೆಯಿಂದ ಅವರು ಭಯಭೀತಳಾಗಿದ್ದೇನೆ ಎಂದು ಹೇಳಿದ್ದಾರೆ.

ಪ್ರಿಯಾಂಕಾ ಚೋಪ್ರಾ ಕೂಡ ಲಾಸ್ ಏಂಜಲೀಸ್ನ ತಮ್ಮ ನಿವಾಸದಿಂದ ಸ್ವಲ್ಪ ದೂರದಲ್ಲಿರುವ ಬೆಟ್ಟಗಳಿಗೆ ಕಾಡ್ಗಿಚ್ಚು ವ್ಯಾಪಿಸಿರುವ ವಿಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.

ಗುರುವಾರ ನೋರಾ ಫತೇಹಿ ಕಾಳ್ಗಿಚ್ಚಿನಿಂದ ಪಾರಾಗಿದ್ದು, ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ವಿಡಿಯೊ ಮತ್ತು ತಮ್ಮ ಕ್ಷೇಮದ ಮಾಹಿತಿ ಹಂಚಿಕೊಂಡಿದ್ದಾರೆ.

‘ನಾನು ಲಾಸ್ ಏಂಜಲೀಸ್ನಲ್ಲಿದ್ದೇನೆ. ಇಲ್ಲಿ ಭೀಕರ ಕಾಳ್ಗಿಚ್ಚು ವ್ಯಾಪಿಸಿದೆ. ನಾನು ಈ ರೀತಿಯ ಕಾಳ್ಗಿಚ್ಚನ್ನು ಎಂದೂ ನೋಡಿಲ್ಲ. 5 ನಿಮಿಷಗಳ ಹಿಂದೆ ಸ್ಥಳಾಂತರದ ಆದೇಶವನ್ನು ಸ್ವೀಕರಿಸಿದೆವು. ಆದ್ದರಿಂದ, ನಾನು ನನ್ನ ಎಲ್ಲ ವಸ್ತುಗಳನ್ನು ತ್ವರಿತವಾಗಿ ಪ್ಯಾಕ್ ಮಾಡಿಕೊಂಡು ಸ್ಥಳಾಂತರಿಸುತ್ತಿದ್ದೇನೆ’ಎಂದು ನೋರಾ ಹೇಳಿಕೊಂಡಿದ್ದಾರೆ.

ವಿಮಾನ ನಿಲ್ದಾಣದ ಬಳಿಯೇ ತಂಗುವ ಯೋಜನೆ ಇದ್ದು, ಆದಷ್ಟು ಬೇಗ ವಿಮಾನದ ಟಿಕೆಟ್ ಬುಕ್ ಮಾಡಿಕೊಂಡು ಹಿಂದಿರುಗುತ್ತೇನೆ ಎಂದು ಹೇಳಿದ್ದಾರೆ. ನಾನು ಸುರಕ್ಷಿತವಾಗಿದ್ದೇನೆ. ಲಾಸ್ ಏಂಜಲೀಸ್ನ ಜನ ಸುರಕ್ಷಿತವಾಗಿದ್ದಾರೆ ಎಂದು ನಂಬುತ್ತೇನೆ ಎಂದಿದ್ದಾರೆ.

ಲಾಸ್ ಏಂಜಲೀಸ್ಗೆ ಭೀಕರ ಕಾಡ್ಗಿಚ್ಚು ಆವರಿಸಿದ್ದು, 1,000ಕ್ಕೂ ಹೆಚ್ಚು ರಚನೆಗಳು ನಾಶವಾಗಿವೆ. 1,30,000 ನಿವಾಸಗಳನ್ನು ಸ್ಥಳಾಂತರಿಸಲಾಗಿದೆ.

ಮಂಗಳವಾರ ಪೆಸಿಫಿಕ್ ಪಾಲಿಸೇಡ್ಸ್ನಲ್ಲಿ ಆರಂಭವಾದ ವಿನಾಶಕಾರಿ ಕಾಡ್ಗಿಚ್ಚು 15,000 ಎಕರೆ ಪ್ರದೇಶವನ್ನು ಆವರಿಸಿದೆ. ಹೆಚ್ಚಿನ ಪ್ರದೇಶಗಳಲ್ಲಿ ಬೆಂಕಿ ಇನ್ನೂ ಅನಿಯಂತ್ರಿತವಾಗಿದೆ. ಈ ಬೆಂಕಿಯು ಪ್ರಸ್ತುತ ಲಾಸ್ ಏಂಜಲೀಸ್ನಾದ್ಯಂತ ಹರಡುತ್ತಿದೆ. ಸಾವಿರಾರು ಜನರು ತಮ್ಮ ಮನೆಗಳನ್ನು ಬಿಟ್ಟು ಸುರಕ್ಷಿತ ಪ್ರದೇಶಗಳಿಗೆ ತೆರಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.