ಬೆಂಗಳೂರು: ಪ್ರಿಯಾಂಕಾ ಚೋಪ್ರಾ ಅವರ ತಂಗಿ ಹಾಗೂ ನಟಿ ಮೀರಾ ಚೋಪ್ರಾ ಅವರು, ‘ತಮಗೆ ವ್ಯಕ್ತಿಯೊಬ್ಬರು ಮೋಸ ಮಾಡಿದ್ದಾರೆ’ಎಂದು ಆರೋಪಿಸಿ ಮುಂಬೈ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

‘ರಾಜೇಂದ್ರ ದಿವಾನ್ ಎನ್ನುವ ಇಂಟಿರಿಯರ್ ಡಿಸೈನರ್ ಎನ್ನವರು ನನಗೆ ಎಂಟು ಲಕ್ಷ ರೂಪಾಯಿ ವಂಚಿಸಿದ್ದಾರೆ‘ ಎಂದು ಮೀರಾ ಅಂಧೇರಿಉಪ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದಿವಾನ್ ಅವರ ಮೇಲೆ ಐಪಿಸಿ ಸೆಕ್ಷನ್ 354, 504, 506 ಹಾಗೂ 509 ರ ಅಡಿ ಎಫ್ಐಆರ್ ದಾಖಲಾಗಿದೆ.

ಅಸಲಿಗೆ ಮೀರಾ ದೂರು ನೀಡಿ ಎರಡು ತಿಂಗಳು ಕಳೆದಿದೆ. ಆದರೆ, ಈ ಬಗ್ಗೆ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ನಟಿ ಅಸಮಾಧಾನ ವ್ಯಕ್ತಪಡಿಸಿ ಟ್ವಿಟರ್ನಲ್ಲಿ ಇಂದು ಪೋಸ್ಟ್ ಒಂದನ್ನು ಹಾಕಿದ ಮೇಲೆ ಪ್ರಕರಣ ಬೆಳಕಿಗೆ ಬಂದಿದೆ.

‘ನನ್ನ ಅಂಧೇರಿ ಮನೆಯನ್ನು ಒಳಾಂಗಣ ವಿನ್ಯಾಸ ಮಾಡಲು ರಾಜೇಂದ್ರ ಅವರಿಗೆ ನೀಡಿದ್ದೆ. ಇದಕ್ಕಾಗಿ ಅವರಿಗೆ ಮುಂಗಡವಾಗಿ ₹8 ಲಕ್ಷ ನೀಡಿದ್ದೆ. ಆದರೆ, ಅವರು ನಿರ್ವಹಿಸಿದ ಕೆಲಸ ಸರಿ ಇರದಿದ್ದರಿಂದ ನಾನು ಕೆಲಸ ನಿಲ್ಲಿಸಲು ಹೇಳಿ, ಖರ್ಚಾದ ಹಣ ಹೊರತುಪಡಿಸಿ ಉಳಿದ ಹಣ ನೀಡಿ ಎಂದು ಕೇಳಿದ್ದೆ. ಆದರೆ, ನನಗೆ ಅವಾಚ್ಯವಾಗಿ ನಿಂದಿಸಿ, ಬೆದರಿಕೆ ಹಾಕಿ ಹಣ ನೀಡಿಲ್ಲ’ ಎಂದು ದೂರಿದ್ದಾರೆ.

‘ಎರಡು ತಿಂಗಳಾದರೂ ಪೊಲೀಸರು ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿರುವ ಅವರು, ಎಲ್ಲೇ ಇದ್ದರೂ ಮಹಿಳೆಗೆ ರಕ್ಷಣೆ ನೀಡುವುದು ಪೊಲೀಸರ ಮೊದಲ ಕರ್ತವ್ಯ ಆಗಬೇಕು’ಎಂದಿದ್ದಾರೆ.

ಇದನ್ನೂ ಓದಿ:ರತ್ನನ್ ಪ್ರಪಂಚಕ್ಕಾಗಿ ‘ಗಿಚ್ಚಿ ಗಿಲಿ ಗಿಲಿ‘ ಎಂದು ಹಾಡಿದ ಪುನೀತ್ ರಾಜ್ಕುಮಾರ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.