ಶುಕ್ರವಾರ, ಮಾರ್ಚ್ 24, 2023
22 °C

‘ಅಪ್ಪನೇ ನನ್ನ ಡೇಟ್ಸ್‌ಗೆ ಕಾಯಬೇಕು’: ಶ್ರೇಯಸ್‌ ಕೆ. ಮಂಜು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

‘ಅಪ್ಪನೇ ನನ್ನ ಡೇಟ್ಸ್‌ಗೆ ಕಾಯಬೇಕು’ ಆ ಮಟ್ಟಕ್ಕೆ ಶ್ರಮಿಸುತ್ತೇನೆ ಎಂದು ಸವಾಲಿನ ಭರವಸೆ ನೀಡಿದರು ಶ್ರೇಯಸ್‌ ಕೆ. ಮಂಜು. 

ನಿರ್ಮಾಪಕ ಕೆ. ಮಂಜು ಅವರ ಪುತ್ರ ಶ್ರೇಯಸ್‌ ಕೆ. ಮಂಜು ಅವರ ‘ರಾಣಾ’ ಚಿತ್ರದ ಪೋಸ್ಟರ್‌ ಹಾಗೂ ಟೀಸರ್‌ ಬಿಡುಗಡೆಯ ಕಾರ್ಯಕ್ರಮದಲ್ಲಿ ಅವರಿಂದ ಮೇಲಿನ ಭರವಸೆ ಕೇಳಿಬಂದಿತು. ಈ ಮಾತಿಗೆ ನಟ ಉಪೇಂದ್ರ, ತಂದೆ ಕೆ. ಮಂಜು ಎಲ್ಲರೂ ಬೆನ್ನುತಟ್ಟಿದರು. 

ಫಸ್ಟ್‌ಲುಕ್‌ ಪೋಸ್ಟರ್ ಮತ್ತು ಟೀಸರ್‌ನ್ನು ಉಪೇಂದ್ರ ಬಿಡುಗಡೆ ಮಾಡಿದರು. ‘ಶ್ರೇಯಸ್‌ ಮಾಸ್‌ ಲುಕ್‌ನಲ್ಲಿ ಕಾಣಿಸಿಕೊಂಡ ಚಿತ್ರವಿದು. ಥ್ರಿಲ್ಲರ್‌ ಕಥಾ ಹಂದರ ಇರುವ ಚಿತ್ರವಿದು ಎಂದು ಚಿತ್ರತಂಡ ಹೇಳಿದೆ. ನಾಳೆ (ಸೆ. 15ರಂದು) ಕೊನೆಯ ಸಾಹಸ ದೃಶ್ಯ ಚಿತ್ರೀಕರಣ ನಡೆಯಲಿದೆ. ಡ್ಯೂಪ್‌ ಬಳಸದೇ ಸಾಹಸ ದೃಶ್ಯಗಳನ್ನು ಶ್ರೇಯಸ್‌ ನಿರ್ವಹಿಸಿದ್ದಾರೆ’ ಎಂದು ಕೆ. ಮಂಜು ಖುಷಿಯಿಂದ ಹೇಳಿದರು. 

ಉದ್ಯಮಿ, ಸಮಾಜ ಸೇವಕ ನವೀನ್‌ ಶರ್ಮಾ ಅವರು ನಟ ಉಪೇಂದ್ರ ಹಾಗೂ ಶ್ರೇಯಸ್‌ ಕೆ. ಮಂಜು ಅವರ ಸಾಮಾಜಿಕ ಕಳಕಳಿಗೆ ಜರ್ಮನಿಯ ಟಾರ್ಚ್‌ ಉಡುಗೊರೆ ನೀಡಿದರು. 

ರೀಷ್ಮಾ ನಾಣಯ್ಯ ಮತ್ತು ರಂಜನಿ ಈ ಚಿತ್ರದ ನಾಯಕಿಯರು. ಗುಜಲ್‌ ಪುರುಷೋತ್ತಮ ನಿರ್ಮಾಪಕರು. ಚಂದನ್‌ ಶೆಟ್ಟಿ ಸಂಗೀತವಿದೆ. 

ರೀಶ್ಮಾ ನಾಣಯ್ಯ ಕೂಡಾ ಚಿತ್ರ ತಂಡದ ಬಗ್ಗೆ ಕೊಂಡಾಡಿದರು. ‘ಒಳ್ಳೆಯ ತಂಡದ ಜೊತೆ ಕೆಲಸ ಮಾಡಿದ್ದೇನೆ. ಚಿತ್ರಮಂದಿರಗಳಲ್ಲಿ ಪೂರ್ಣ ಪ್ರಮಾಣದ ಆಸನ ಭರ್ತಿಗೆ ಅವಕಾಶ ಕೊಟ್ಟಾಗ ಈ ಚಿತ್ರ ಬಿಡುಗಡೆ ಆಗಲಿದೆ’ ಎಂದರು. 

ರಂಜನಿ ಅವರ ಮೂರನೇ ಚಿತ್ರವಿದು. ಚಿತ್ರದಲ್ಲಿಯೂ ರಂಜಿನಿ ಹೆಸರಿನ ಪಾತ್ರವಿದೆ. ‘ಪ್ರಬಲವಾದ ಪಾತ್ರ ಈ ಚಿತ್ರದಲ್ಲಿದೆ’ ಎಂದಿದ್ದಾರೆ ರಂಜನಿ. ’ಕಮರೊಟ್ಟು ಚೆಕ್‌ಪೋಸ್ಟ್‌  ಭಾಗ – 2’ ಮುಂದಿನ ಪ್ರಾಜೆಕ್ಟ್‌ ಎಂದರು ರಂಜನಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು