ಗುರುವಾರ , ಜೂನ್ 17, 2021
29 °C

‘ಪುರುಷೋತ್ತಮ’ನ ಮೈಸೂರು ಮಾತು ಮುಕ್ತಾಯ; ಹಾಡುಗಳಷ್ಟೇ ಬಾಕಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ರವೀಸ್‌ ಜಿಮ್‌ ಬ್ಯಾನರ್‌ ಅಡಿ ನಿರ್ಮಾಣವಾಗುತ್ತಿರುವ ದೇಹದಾರ್ಢ್ಯಪಟು ಜಿಮ್‌ ರವಿ ಅಭಿನಯದ ‘ಪುರುಷೋತ್ತಮ’ ಚಿತ್ರದ ಮೈಸೂರು ಪರಿಸರದ ಚಿತ್ರೀಕರಣ ಮುಕ್ತಾಯವಾಗಿದೆ. ಆಕಾರ್ ಅಪಾರ್ಟ್‌ಮೆಂಟ್ಸ್, ಕಾರ್ಲೆ ಹೋಟೆಲ್, ವಕೀಲ ಮಹದೇವ್‌ ದೇಸಿಕ್ ಅವರ ಕಚೇರಿ, ಕೆಆರ್‌ಎಸ್ ಹಿನ್ನೀರು ಪ್ರದೇಶ, ಚಾಮುಂಡಿಬೆಟ್ಟ, ಅರಮನೆ, ಸಾಗರಕಟ್ಟೆ ಮುಂತಾದ ಕಡೆ ಚಿತ್ರೀಕರಣ ನಡೆದಿದೆ. ಅಮರನಾಥ್‌ ಎಸ್‌.ವಿ. ಈ ಚಿತ್ರದ ನಿರ್ದೇಶಕರು. ಚಿತ್ರಕತೆ, ಸಂಭಾಷಣೆಯೂ ಅವರದ್ದೇ.

ಬಾಕಿ ಎರಡು ಹಾಡುಗಳ ಚಿತ್ರೀಕರಣವನ್ನು ಲಾಕ್‌ಡೌನ್ ಮುಗಿದ ನಂತರ ಮುಗಿಸಿ, ಚಿತ್ರವನ್ನು ದಸರಾಗೆ ಬಿಡುಗಡೆ ಮಾಡಲು ಚಿಂತನೆ ನಡೆಸಲಾಗಿದೆ ಎಂದು ರವಿ ಹೇಳಿದ್ದಾರೆ.

ಅಪೂರ್ವಾ ನಾಯಕಿ. ಮೈಸೂರಿನ ನಿವೇದಿತಾ ಇನ್ನೊಬ್ಬ ನಾಯಕಿ. ಇವರೊಂದಿಗೆ ಎ.ವಿ.ಹರೀಶ್, ಪ್ರಭು ಆಲೂರು ಚಿಕ್ಕಬಸವಯ್ಯ, ಕಿರಣ್, ಶರುಣ್, ಕೃಷ್ಟಿ, ಹಾಗೂ ಅಲ್ಲಿನ ಭಾಗದ ರಂಗಭೂಮಿ ಕಲಾವಿದರು ತಾರಾಗಣದಲ್ಲಿದ್ದಾರೆ. ಆನಂದ್‌ಪ್ರಿಯಾ, ಪ್ರಮೋದ್‌ ಮರವಂತೆ ಹಾಗೂ ನಿರ್ದೇಶಕರು ರಚಿಸಿರುವ ಸಾಹಿತ್ಯಕ್ಕೆ ಶ್ರೀಧರ್ ಸಂಭ್ರಮ್ ಸಂಗೀತ ಸಂಯೋಜಿಸಿದ್ದಾರೆ. ಸಹ ನಿರ್ದೇಶನ ಚಲ, ಛಾಯಾಗ್ರಹಣ ಕುಮಾರ್ ಎಂ., ಸಂಕಲನ ಅರ್ಜುನ್ ಕಿಟ್ಟು ಅವರದ್ದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು