ಭಾನುವಾರ, ಜೂನ್ 20, 2021
20 °C

ಬೆಳ್ಳಿತೆರೆಯಲ್ಲೊಂದು ಮಧುಮೇಹದ ಕಥನ

. Updated:

ಅಕ್ಷರ ಗಾತ್ರ : | |

Prajavani

ಟೀ ಸ್ಟಾಲ್‌ಗಳ ಮುಂದೆ ನಿಂತಾಗ ‘ಶುಗರ್‌ಲೆಸ್‌’ ಎನ್ನುವ ಪದ ಎಲ್ಲರ ಕಿವಿಯ ಮೇಲೂ ಬಿದ್ದಿರುತ್ತದೆ. ಮಧುಮೇಹದಿಂದ ಬಳಲುತ್ತಿರುವವರು ಶುಗರ್‌ಲೆಸ್‌ ಟೀ, ಕಾಫಿ ಅಥವಾ ಕಷಾಯ ಕುಡಿಯುವುದು ವಾಡಿಕೆ. ಇಂತಹ ಪದಗಳೇ ಚಿತ್ರರಂಗದವರಿಗೆ ಸಿನಿಮಾದ ಟೈಟಲ್‌ ಆಗುವುದು ಹೊಸದೇನಲ್ಲ. ಶಶಿಧರ ಕೆ.ಎಂ. ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ‘ಶುಗರ್‌ಲೆಸ್‌’ ಎಂಬ ಶೀರ್ಷಿಕೆ ಇಡಲಾಗಿದೆ.

‘ಡಾಟರ್‌ ಆಫ್‌ ಪಾರ್ವತಮ್ಮ’ ಸಿನಿಮಾಕ್ಕೆ ಬಂಡವಾಳ ಹೂಡಿದ್ದ ಅವರು ‘ಶುಗರ್‌ಲೆಸ್‌‘ ಚಿತ್ರದ ಮೂಲಕ ಮೊದಲ ಬಾರಿಗೆ ನಿರ್ದೇಶನಕ್ಕೆ ಇಳಿಯುತ್ತಿದ್ದಾರೆ. ಕಥೆ, ಚಿತ್ರಕಥೆಯ ನೊಗವನ್ನು ಅವರೇ ಹೊತ್ತಿದ್ದಾರೆ.

ಸಣ್ಣ ವಯಸ್ಸಿನವರಿಂದ ಹಿಡಿದು ವೃದ್ಧರವರೆಗೂ ಸಕ್ಕರೆ ಕಾಯಿಲೆ ಕಾಡುವುದು ಸರ್ವೇ ಸಾಮಾನ್ಯ. ಅದು ಆರೋಗ್ಯದ ಮೇಲೆ ಬೀರುತ್ತಿರುವ ಪರಿಣಾಮ ಒಂದೆರಡಲ್ಲ. ಮೂವತ್ತು ವರ್ಷದ ಯುವಕನೊಬ್ಬನಲ್ಲಿ ಕಾಣಿಸಿಕೊಂಡು ಡಯಾಬಿಟಿಸ್‌ ಆತನ ಬದುಕಿನಲ್ಲಿ ಏನೆಲ್ಲಾ ಏರಿಳಿತಕ್ಕೆ ಕಾರಣವಾಗುತ್ತದೆ ಎನ್ನುವುದು ಈ ಚಿತ್ರದ ಕಥಾಹಂದರ.

‍ಪುಷ್ಕರ್‌ ಫಿಲ್ಮ್ಸ್‌ ಮತ್ತು ದಿಶಾ ಎಂಟರ್‌ಟೈನ್‌ಮೆಂಟ್‌ನಿಂದ ಈ ಸಿನಿಮಾ ನಿರ್ಮಾಣವಾಗುತ್ತಿದೆ. ಈ ಚಿತ್ರದ ಫಸ್ಟ್‌ಲುಕ್ ಪೋಸ್ಟರ್‌ ಬಿಡುಗಡೆಯಾಗಿದೆ. ಕೋವಿಡ್‌–19 ಪರಿಣಾಮ ರಾಜ್ಯದಲ್ಲಿ ಸಿನಿಮಾ ಶೂಟಿಂಗ್‌ ಶುರುವಾಗಿಲ್ಲ. ಅನುಮತಿ ಸಿಕ್ಕಿದ ಬಳಿಕ ಸರ್ಕಾರದ ಮಾರ್ಗಸೂಚಿ ಅನ್ವಯ ಮುಹೂರ್ತ ನೆರವೇರಿಸಿ ಶೂಟಿಂಗ್‌ ಆರಂಭಿಸಲು ಚಿತ್ರತಂಡ ನಿರ್ಧರಿಸಿದೆ.

ಕಥೆಯೇ ಈ ಚಿತ್ರದ ಹೀರೊ. ಹಾಗಾಗಿ, ಹೊಸಬರು ಇದರಲ್ಲಿ ನಟಿಸುವ ನಿರೀಕ್ಷೆಯಿದೆ. ಇನ್ನೂ ಪಾತ್ರವರ್ಗದ ಆಯ್ಕೆ ಅಂತಿಮಗೊಂಡಿಲ್ಲ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.