ಸೋಮವಾರ, ನವೆಂಬರ್ 28, 2022
20 °C

ಅವತಾರ್ 2 ಜೊತೆ ಬರುತ್ತಿದೆಯಾ ಪುಷ್ಪ2  ಟೀಸರ್? ಅಭಿಮಾನಿಗಳಿಗೆ ಕಾತರ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ಜೇಮ್ಸ್ ಕೆಮರೂನ್ ನಿರ್ದೇಶನದ 'ಅವತಾರ್ ದಿ ವೇ ಆಫ್ ವಾಟರ್' ಹೊಸ ಸಿನಿಮಾ ಡಿಸೆಂಬರ್ 16 ರಂದು ಜಗತ್ತಿನಾದ್ಯಂತ ಚಿತ್ರಮಂದಿರಗಳಲ್ಲಿ 4K HDR 3ಡಿಯಲ್ಲಿ ಬಿಡುಗಡೆಯಾಗುತ್ತಿದೆ.

ಸಿನಿಪ್ರಿಯರು ಈ ಸೈನ್ಸ್ ಫಿಕ್ಸನ್ ಅಡ್ವೆಂಚರ್ ಸಿನಿಮಾವನ್ನು ವೀಕ್ಷಿಸಲು ತುದಿಗಾಲ ಮೇಲೆ ನಿಂತಿದ್ದಾರೆ. ಈ ಸಿನಿಮಾದ ಬಿಡುಗಡೆ ಸಂದರ್ಭದಲ್ಲಿ ಭಾರತೀಯ ಸಿನಿ ಪ್ರಿಯರಿಗೆ ಮತ್ತೊಂದು ಸಿಹಿ ಸುದ್ದಿ ಬಂದಿದೆ.

ಕಳೆದ ವರ್ಷ ಡಿಸೆಂಬರ್ 16 ರಂದು ಬಿಡುಗಡೆಯಾಗಿದ್ದ ಬ್ಲಾಕ್‌ಬಸ್ಟರ್ ಸಿನಿಮಾ ಪುಷ್ಪದ ಎರಡನೇ ಭಾಗವಾದ ಪುಷ್ಪ2 ಸಿನಿಮಾದ ಚಿತ್ರೀಕರಣ ಬರದಿಂದ ಸಾಗಿದೆ. ಇದೀಗ ಈ ಚಿತ್ರದ ಟೀಸರ್‌ನ್ನು ಅವತಾರ್ ಬಿಡುಗಡೆಗೊಳ್ಳುವ ಸಿನಿಮಾ ಮಂದಿರಗಳಲ್ಲಿ ಬಿಡುಗಡೆ ಮಾಡಲು ಚಿತ್ರತಂಡ ಮುಂದಾಗಿದೆ ಎಂದು ತಿಳಿದು ಬಂದಿದೆ.

ಈ ಬಗ್ಗೆ ಚಿತ್ರತಂಡ ಅಧಿಕೃತ ಮಾಹಿತಿಯನ್ನು ಬಿಟ್ಟುಕೊಟ್ಟಿಲ್ಲವಾದರೂ ಸಿನಿ ವಿಶ್ಲೇಷಕರು ಅವತಾರ್2 ಬಿಡುಗಡೆಯಾಗುವ ದಿನ ಪುಷ್ಪ2 ಟೀಸರ್ ಬರುವುದು ಪಕ್ಕಾ ಎನ್ನುತ್ತಿದ್ದಾರೆ.

ಇನ್ನು ಅವತಾರ್ ದಿ ವೇ ಆಫ್ ವಾಟರ್' ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಕಷ್ಟು ಗಮನ ಸೆಳೆದಿದೆ. ಇಂಗ್ಲಿಷ್, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಟ್ರೇಲರ್ ಮಾತ್ರ ಬಿಡುಗಡೆಯಾಗಿವೆ. ಕನ್ನಡದಲ್ಲಿ ಬಿಡುಗಡೆಯಾಗಿಲ್ಲ.

ಟ್ರೇಲರ್‌ಗೆ ಜಗತ್ತಿನಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಹಿಂದಿನ ಅವತಾರ್ ಸಿನಿಮಾದಲ್ಲಿನ  ನಾಯಕ ನಾಯಕಿಗೆ ಈ ಸಿನಿಮಾದಲ್ಲಿ ಮಕ್ಕಳಾಗಿದ್ದು ಹೊಸದೊಂದು ಲೋಕವನ್ನು ಜೇಮ್ಸ್ ಕೆಮರೂನ್ ಅನಾವರಣ ಮಾಡಲಿದ್ದಾರೆ.

ನಟರಾದ ವರ್ಥಿಂಗ್‌ಟನ್, ಜೋ ಸಲ್ಡಾನಾ, ಸ್ಟೀಪನ್ ಲಾಂಗ್, ಮಿಚಲ್ ರೋಡ್ರಿಗಜ್, ಸಿಗೋರನಿ ವೇವರ್, ಕೇಟ್ ವಿನ್ಸ್‌ಲೆಟ್ ಸೇರಿದಂತೆ ಮುಖ್ಯ ತಾರಾಗಣದಲ್ಲಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು