ಹೈದರಾಬಾದ್: ತೆಲುಗಿನ ಸೂಪರ್ಸ್ಟಾರ್ ಅಲ್ಲು ಅರ್ಜುನ್, ರಶ್ಮಿಕಾ ಮಂದಣ್ಣ, ಫಹಾದ್ ಫಾಸಿಲ್ ಅಭಿನಯದ ಪುಷ್ಪ–2 ಚಿತ್ರವು ಬಾಕ್ಸ್ ಆಫೀಸ್ ಕೊಳ್ಳೆ ಹೊಡೆದಿದ್ದು, ವಿಶ್ವದಾದ್ಯಂತ ₹1,500 ಕೋಟಿಗೂ ಅಧಿಕ ಗಳಿಕೆ ಕಂಡಿದೆ.

ಇಷ್ಟು ಮಾತ್ರವಲ್ಲದೆ ಹಿಂದಿ ಅವತರಣಿಕೆಯ ಚಿತ್ರವು ₹700 ಕೋಟಿ ಗುಡ್ಡೆ ಹಾಕಿದ್ದು, ದೇಶದ ಬಾಕ್ಸ್ ಆಫೀಸ್ನಲ್ಲಿ ಈ ಸಾಧನೆ ಮಾಡಿದ ಮೊದಲ ಸಿನಿಮಾ ಎಂಬ ಖ್ಯಾತಿಗೆ ಪಾತ್ರವಾಗಿದೆ.

ಚಿತ್ರಗಳ ವ್ಯವಹಾರ ವಿಶ್ಲೇಷಕ ತರಣ್ ಆದರ್ಶ್ ಅವರ ಪ್ರಕಾರ, ಅಲ್ಲು ಅರ್ಜುನ್ ಅಭಿನಯದ ಹಿಂದಿ ಡಬ್ಬಿಂಗ್ ಆವೃತ್ತಿಯ ಚಿತ್ರವು ಭಾರತೀಯ ಗಲ್ಲಾಪೆಟ್ಟಿಗೆಯಲ್ಲಿ ₹700 ಕೋಟಿ ಗಳಿಸಿದ ಮೊದಲ ಹಿಂದಿ ಚಲನಚಿತ್ರವಾಗಿದೆ. ಹೀಗಾಗಿ, ದೇಶೀಯ ಬಾಕ್ಸ್ ಆಫೀಸ್ನಲ್ಲಿ ₹700 ಕೋಟಿ ಕ್ಲಬ್ನ ಹೊಸ ಮೈಲುಗಲ್ಲನ್ನು ಸ್ಥಾಪಿಸಿದೆ.

₹500 ಕೋಟಿ ಗಳಿಸಿದ್ದ ಬಾಹುಬಲಿ–2

ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಅಭಿನಯದ ಬಾಹುಬಲಿ–2 ಹಿಂದಿ ಆವೃತ್ತಿಯಲ್ಲಿ ₹500 ಕೋಟಿ ಗಳಿಸಿತ್ತು. ಆಗ ಆ ಹಂತ ತಲುಪಿದ ಮೊದಲ ಹಿಂದಿ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.

₹600 ಕೋಟಿ ಗಳಿಸಿದ್ದ ಸ್ತ್ರೀ–2

ಅಮರ್ ಕೌಶಿಕ್ ಅವರ ಮತ್ತೊಂದು ಹಾರರ್ ಕಾಮಿಡಿ ಚಿತ್ರ ಸ್ತ್ರೀ–2 ಹಿಂದಿ ಅವತರಣಿಕೆ ₹600 ಕೋಟಿ ಗಳಿಸಿತ್ತು. ₹600 ಕೋಟಿ ಕ್ಲಬ್ ಸೇರಿದ ಮೊದಲ ಸಿನಿಮಾ ಎಂಬ ದಾಖಲೆಯನ್ನು ಈ ಚಿತ್ರ ಬರೆದಿತ್ತು.

ರಾಜಕುಮಾರ್ ರಾವ್, ಶ್ರದ್ಧಾ ಕಪೂರ್, ತಮನ್ನಾ, ಪಂಕಜ್ ತ್ರಿಪಾಠಿ, ಅಭಿಷೇಕ್ ಬ್ಯಾನರ್ಜಿ ಮುಂತಾದವರು ಚಿತ್ರದಲ್ಲಿದ್ದರು.

ಪುಷ್ಪ 2: ₹700 ಕೋಟಿ

ಈ ತಿಂಗಳಲ್ಲಿ ತೆರೆಕಂಡ ತೆಲುಗಿನ ಪುಷ್ಪ–2 ಡಬ್ಬಿಂಗ್ ಆವೃತ್ತಿಯು 19 ದಿನಗಳಲ್ಲಿ ₹700 ಕೋಟಿಯ ಕ್ಲಬ್ ತೆರೆದಿದೆ. 700 ನಾಟ್ಔಟ್.. #ಪುಷ್ಪ2 ಇತಿಹಾಸ ಬರೆದಿದೆ. ಹೊಸ ಬೆಂಚ್ಮಾರ್ಕ್ ನಿರ್ಮಿಸಿದೆ. ಟ್ರೆಂಡಿಂಗ್ ಅಭೂತಪೂರ್ವವಾಗಿದೆ. ಕ್ರಿಸ್ಮಸ್ ಮತ್ತು ಹೊಸವರ್ಷಾಚರಣೆ ಇರುವುದರಿಂದ ಪುಷ್ಪ–2 ದಾಖಲೆಯ ಓಟವನ್ನು ಮುಂದುವರಿಸಲಿದೆ ಎಂದು ತರಣ್ ಆದರ್ಶ್ ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.