ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪುಷ್ಪ’ ಸಿನಿಮಾಗೆ ದಾದಾಸಾಹೇಬ್​ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ

Last Updated 21 ಫೆಬ್ರುವರಿ 2022, 8:11 IST
ಅಕ್ಷರ ಗಾತ್ರ

ತೆಲುಗಿನ ‘ಪುಷ್ಪ’ ಸಿನಿಮಾ ಪ್ರತಿಷ್ಠಿತ ‘ದಾದಾಸಾಹೇಬ್​ ಫಾಲ್ಕೆ ಅಂತರರಾಷ್ಟ್ರೀಯ ಚಿತ್ರೋತ್ಸವ ಪ್ರಶಸ್ತಿ’ (Dadasaheb Phalke International Film Festival Awards) ಪಡೆದುಕೊಂಡಿದೆ.

ವರ್ಷದ ಸಿನಿಮಾ ವಿಭಾಗದ ಕೆಟಗರಿಯಲ್ಲಿ ‘ಪುಷ್ಪ’ ಚಿತ್ರಕ್ಕೆ ಈ ಪ್ರಶಸ್ತಿ ಸಂದಿದೆ. ಸಿದ್ದಾರ್ಥ್​ ಮಲ್ಹೋತ್ರ ನಟನೆಯ ಹಿಂದಿಯ ‘ಶೇರ್​ಷಾ’ ಸಿನಿಮಾಗೆ ಅತ್ಯುತ್ತಮ ಪ್ರಶಸ್ತಿ ಸಂದಿದೆ.‘ಪುಷ್ಪ’ ಸಿನಿಮಾ ಬಾಕ್ಸ್​ ಆಫೀಸ್​ನಲ್ಲಿ ₹ 350 ಕೋಟಿಗೂ ಅಧಿಕ ಹಣ ಗಳಿದೆ.

ಬಾಲಿವುಡ್​ನ ಖ್ಯಾತ ನಟ ರಣಬೀರ್​ ಸಿಂಗ್​ ಅತ್ಯುತ್ತಮ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಸಿನಿಮಾಗಳ ಜೊತೆಗೆ ಧಾರಾವಾಹಿಗಳು ಹಾಗೂ ಬೆವ್‌ ಸಿರೀಸ್‌ಗಳಿಗೂ ಪ್ರಶಸ್ತಿ ನೀಡಲಾಗಿದೆ.

* ವರ್ಷದ ಅತ್ಯುತ್ತಮ ಸಿನಿಮಾ: ಪುಷ್ಪ

* ಅತ್ಯುತ್ತಮ ಸಿನಿಮಾ: ಶೇರ್​ಷಾ

* ಅತ್ಯುತ್ತಮ ನಟ: ರಣವೀರ್​ ಸಿಂಗ್​

* ಅತ್ಯುತ್ತಮ ನಟಿ ಕೃತಿ ಸನೋನ್​

* ಅತ್ಯುತ್ತಮ ನಿರ್ದೇಶಕ: ಕೆನ್​ ಘೋಷ್​

* ಅತ್ಯುತ್ತಮ ವೆಬ್​ ಸಿರೀಸ್​: ಕ್ಯಾಂಡಿ

* ವರ್ಷದ ಅತ್ಯುತ್ತಮ ಟಿವಿ ಧಾರಾವಾಹಿ: ಅನುಪಮಾ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT