ಮುಂಬೈ: ‘ಬಾಲಿವುಡ್ ನಟಿ, ಕಿರುತೆರೆ ನಿರೂಪಕಿ ಮಂದಿರಾ ಬೇಡಿ ಅವರ ಪತಿ, ನಿರ್ಮಾಪಕ ಹಾಗೂ ನಿರ್ದೇಶಕ ರಾಜ್ ಕೌಶಲ್ (50)ಬುಧವಾರ ಮುಂಜಾನೆ 4.30ಕ್ಕೆ ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ’ ಎಂದು ಅವರ ಕುಟುಂಬದ ಮಿತ್ರ, ನಟ ರೋಹಿತ್ ರಾಯ್ ತಿಳಿಸಿದ್ದಾರೆ.

ರಾಜ್ ಕೌಶಲ್ ಅವರಿಗೆ ಪತ್ನಿ ಮಂದಿರಾ ಬೇಡಿ, ಮಗ ವೀರ್ ಮತ್ತು ಮಗಳು ತಾರಾ ಇದ್ದಾರೆ.

ದಾದರ್‌ನಲ್ಲಿರುವ ಶಿವಾಜಿ ಪಾರ್ಕ್ ಸ್ಮಶಾನದಲ್ಲಿ ರಾಜ್ ಅವರ ಅಂತಿಮ ವಿಧಿವಿಧಾನಗಳು ನೆರವೇರಿಸಲಾಯಿತು. ರೋನಿತ್ ರಾಯ್, ಸಮೀರ್ ಸೂರಿ, ಆಶೀಶ್ ಚೌಧರಿ, ಡಿನೊ ಮೊರಿಯಾ ಸೇರಿದಂತೆ ಚಿತ್ರರಂಗದ ಹಲವರು ಈ ಸಂದರ್ಭದಲ್ಲಿ ಹಾಜರಿದ್ದರು.

‘ಪ್ಯಾರ್ ಮೇ ಕಭೀ ಕಭೀ’ ಹಾಗೂ ‘ಶಾದೀ ಕೆ ಲಡ್ಡೂ’ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದ್ದ, ರಾಜ್ ಅವರು, ಓನಿರ್ ಅವರ ನಾಟಕ ‘ಮೈ ಬ್ರದರ್... ನಿಖಿಲ್’ ಚಿತ್ರದ ನಿರ್ಮಾಣವನ್ನೂ ಮಾಡಿದ್ದರು. ಈ ಚಿತ್ರದಲ್ಲಿ ಸಂಜಯ್ ಸೂರಿ ಹಾಗೂ ಜೂಹಿ ಚಾವ್ಲಾ ನಟಿಸಿದ್ದರು.

1989ರಲ್ಲಿ ಕಾಪಿ ರೈಟರ್ ಆಗಿ ಸಿನಿಮಾ ವೃತ್ತಿ ಆರಂಭಿಸಿದ್ದ ರಾಜ್ ಕೌಶಲ್, ಬಳಿಕ ಮುಕುಲ್ ಆನಂದ್ ಅವರೊಂದಿಗೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ನಂತರ ಹಂತ ಹಂತವಾಗಿ ವೃತ್ತಿಯಲ್ಲಿ ಮೇಲೇರುತ್ತ ತಮ್ಮದೇ ಆದ ಜಾಹೀರಾತು ನಿರ್ಮಾಣ ಸಂಸ್ಥೆ ‘ಫ್ಯುಯೆಲ್’ ಅನ್ನು ಸ್ಥಾಪಿಸಿದ್ದರು. ಇದರ ಮೂಲಕ 800ಕ್ಕೂ ಹೆಚ್ಚು ಕಮರ್ಷಿಯಲ್ ಜಾಹೀರಾತುಗಳನ್ನು ನಿರ್ದೇಶಿಸಿದ್ದರು. ನಟ ವಿಕ್ಕಿ ಕೌಶಲ್ ಅವರ ಅಭಿನಯದ ಜಾಹೀರಾತೊಂದನ್ನು ಈಚೆಗಷ್ಟೇ ರಾಜ್ ನಿರ್ದೇಶಿಸಿದ್ದರು.

ಭಾನುವಾರವಷ್ಟೇ ರಾಜ್ ಕೌಶಲ್ ಅವರು ತಮ್ಮ ಸ್ನೇಹಿತರಾದ ಅಂಗದ್ ಬೇಡಿ, ನೇಹಾ ಧೂಪಿಯಾ,ಸಾಗರಿಕಾ ಘಾಟ್ಗೆ, ಮಾಜಿ ಕ್ರಿಕೆಟಿಗ ಜಹೀರ್ ಖಾನ್ ಅವರೊಂದಿಗೆ ಇರುವ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಅಪ್‌ಲೋಡ್ ಮಾಡಿದ್ದರು.

ರಾಜ್ ಕೌಶಲ್ ಅವರ ಹಠಾತ್ ಸಾವಿಗೆ ಬಾಲಿವುಡ್ ಅನೇಕ ನಟ–ನಟಿಯರು, ನಿರ್ದೇಶಕ–ನಿರ್ಮಾಪಕರು ಆಘಾತ ವ್ಯಕ್ತಪಡಿಸಿದ್ದಾರೆ. ಅವರೊಂದಿಗೆ ಕೆಲಸ ಮಾಡಿದ್ದ ಅನೇಕರು ತಮ್ಮ ನೆನಪುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.