ಐರಾ ಜತೆಗೆ ಇನ್ನೊಂದು ಮಗು ಬೇಕು- ಯಶ್ ದಂಪತಿ ಆಶಯ

ಬುಧವಾರ, ಜೂಲೈ 17, 2019
29 °C

ಐರಾ ಜತೆಗೆ ಇನ್ನೊಂದು ಮಗು ಬೇಕು- ಯಶ್ ದಂಪತಿ ಆಶಯ

Published:
Updated:

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಮತ್ತೊಂದು ಸಿಹಿ ಸುದ್ದಿಯನ್ನು ಟ್ವೀಟ್ ಮಾಡಿದ್ದಾರೆ. ಯಶ್- ರಾಧಿಕಾ ದಂಪತಿ  ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂಬ ಆಶಯ ವ್ಯಕ್ತ ಪಡಿಸುವ ವಿಡಿಯೊ ಈ ಟ್ವೀಟ್‌ನಲ್ಲಿದೆ.

ಕಳೆದ ಭಾನುವಾರ ಯಶ್ ಮಗಳ ನಾಮಕರಣ ಶಾಸ್ತ್ರ ನಡೆದಿತ್ತು. ಐರಾ ಯಶ್ ಎಂದು ಮಗಳಿಗೆ ನಾಮಕರಣ ಮಾಡಿದ್ದರು ಈ ತಾರಾ ದಂಪತಿ.

ಟ್ವೀಟ್‌ನಲ್ಲಿ YGF 2: Chapter 2 ಎಂದು ಇದೆ. KGF  ಗೊತ್ತು ಏನಪ್ಪಾ ಇದು YGF ಅಂತೀರಾ?  YGF 2: Yash Going to be Father for Second Time ಎಂಬುದು ಇದರರ್ಥ!

ಇದೇ ವಿಡಿಯೊವನ್ನು ರಾಧಿಕಾ ಪಂಡಿತ್ ತಮ್ಮ ಫೇಸ್‌ಬುಕ್‌ನಲ್ಲಿ ಶೇರ್ ಮಾಡಿದ್ದು, ಅಭಿಮಾನಿಗಳು ಶುಭಾಶಯದ ಮಳೆಗೆರೆಯುತ್ತಿದ್ದಾರೆ.

Post Comments (+)