ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಮೈಸೂರು ಮಸಾಲಾ’ ಹಾಡು ರಘು ದೀಕ್ಷಿತ್ ಧ್ವನಿ

Last Updated 31 ಜುಲೈ 2019, 19:45 IST
ಅಕ್ಷರ ಗಾತ್ರ

‌‌‌ಸ್ಯಾಂಡಲ್‌ವುಡ್‌ನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಆಧಾರಿತ ಚಿತ್ರಗಳು ತೆರೆಗೆ ಬರುವುದು ಕಡಿಮೆ. ಅಂತಹ ಕಥಾಹಂದರ ಹೊಂದಿರುವ ‘ಮೈಸೂರು ಮಸಾಲಾ’ಸಿನಿಮಾ ಶೀಘ್ರದಲ್ಲಿಯೇ ಹಾಡೊಂದನ್ನು ಬಿಡುಗಡೆ ಮಾಡಲು ತಯಾರಿ ನಡೆಸಿದೆ. ಚಿತ್ರದಲ್ಲಿರುವ ಏಕೈಕ ಹಾಡಿಗೆ ಖ್ಯಾತ ಗಾಯಕ ರಘು ದೀಕ್ಷಿತ್ ಧ್ವನಿ ನೀಡಿದ್ದು,‘ಮುಂಜಾನೆ ಮಂಜಲ್ಲಿ’,‘ನೀನೇ ಬೇಕು’ ಹಾಡುಗಳ ನಂತರ ಮತ್ತೊಂದು ಹಿಟ್‌ ಸಾಂಗ್‌ ನೀಡಲು ರೆಡಿಯಾಗಿದ್ದಾರೆ.

ಈ ಹಾಡು ವಾಸುಕಿ ವೈಭವ್ ಸಾಹಿತ್ಯದಲ್ಲಿ ಮೂಡಿಬಂದಿದೆ. ರಘು ದೀಕ್ಷಿತ ಕಂಠದಲ್ಲಿ ಕಳೆದುಹೋದ ಪ್ರೀತಿ ಹುಡುಕುವ ನಾಯಕನ ಸಂಕಟ ಅದ್ಭುತವಾಗಿ ಮೂಡಿಬಂದಿದೆ ಎನ್ನುವುದು ಚಿತ್ರದ ನಿರ್ದೇಶಕ ಅಜಯ್‌ ಸರ್ಪೇಶ್ಕರ್‌ ಮಾತು.

‘ವಾಸುಕಿ ಅವರ ಗೀತೆ ಜನರ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯುತ್ತದೆ. ನನ್ನ ಲೈವ್‌ ಶೋಗಳಲ್ಲಿ ಈ ಹಾಡು ಹೆಚ್ಚಿನ ಬೇಡಿಕೆ ಸೃಷ್ಟಿಸಲಿದೆ. ಹಾಡನ್ನು ಭಾವಪೂರ್ಣವಾಗಿ ಕಟ್ಟಿಕೊಡಲು10ರಿಂದ12ಬಾರಿ ರೆಕಾರ್ಡ್‌ ಮಾಡಲಾಗಿದೆ’ ಎಂದು ರಘು ದೀಕ್ಷಿತ್ ಹೇಳಿದ್ದಾರೆ.

ಗಣೇಶ ಚತುರ್ಥಿಗೆ ಹಾಡನ್ನು ಬಿಡುಗಡೆಗೊಳಿಸಲು ಚಿತ್ರತಂಡ ಯೋಜನೆ ಮಾಡಿಕೊಂಡಿದೆ. ಹಾರುವ ತಟ್ಟೆಯನ್ನೇ ಮೂಲಕಥಾ ವಸ್ತುವಾಗಿಸಿಕೊಂಡಿರುವ ಚಿತ್ರದಲ್ಲಿ ಹಿರಿಯ ನಟ ಅನಂತ್‌ನಾಗ್‌,ಪ್ರಕಾಶ್‌ ಬೆಳವಾಡಿ,ಸುಧಾ ಬೆಳವಾಡಿ, ಶರ್ಮಿಳಾ ಮಾಂಡ್ರೆ,ಸಂಯುಕ್ತ ಹೊರನಾಡು,ಕಿರಣ್‌ ಶ್ರೀನಿವಾಸು ಬಣ್ಣ ಹಚ್ಚಿದ್ದಾರೆ. ಪ್ರಕಾಶ್‌ ಬೆಳವಾಡಿ ಚಿತ್ರಕಥೆ ಬರೆದಿದ್ದು,ಅಮೆರಿಕ ಮೂಲದ ಜೆಸ್ಸಿ ಕ್ಲಿಂಟನ್‌ ಸಂಗೀತ,ಮನೋಹರ್‌ ಜೋಷಿ ಛಾಯಾಗ್ರಹಣ ಇದೆ. ವರ್ಷಾಂತ್ಯಕ್ಕೆ ಸಿನಿಮಾ ತೆರೆಗೆ ಬರಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT