ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಶೀಲ’ದ ಹಿಂದೆ ರಾಗಿಣಿ: ಶೀಲ ಚಿತ್ರ ಜುಲೈ 28ಕ್ಕೆ ತೆರೆಗೆ

ಬಾಲು ನಾರಾಯಣನ್ ಆ್ಯಕ್ಷನ್‌–ಕಟ್‌
Published 9 ಜುಲೈ 2023, 19:14 IST
Last Updated 9 ಜುಲೈ 2023, 19:14 IST
ಅಕ್ಷರ ಗಾತ್ರ

ನಟಿ ರಾಗಿಣಿ ದ್ವಿವೇದಿ ಪ್ರಮುಖಪಾತ್ರದಲ್ಲಿ ನಟಿಸಿರುವ ‘ಶೀಲ’ ಚಿತ್ರ ಜುಲೈ 28ಕ್ಕೆ ತೆರೆಗೆ ಬರಲಿದೆ. ಮಲಯಾಳಂ ಹಾಗೂ ಕನ್ನಡದಲ್ಲಿ ನಿರ್ಮಾಣವಾಗಿರುವ ಚಿತ್ರಕ್ಕೆ ಬಾಲು ನಾರಾಯಣನ್ ಆ್ಯಕ್ಷನ್‌–ಕಟ್‌ ಹೇಳಿದ್ದಾರೆ. ಉದ್ಯಮಿ ಡಿ.ಎಂ.ಪಿಳ್ಳೈ ಬಂಡವಾಳ ಹೂಡಿದ್ದಾರೆ.

‘ಇದೊಂದು ಮಹಿಳಾ ಪ್ರಧಾನ ಚಿತ್ರ. ಪ್ರಸ್ತುತ ಹೆಣ್ಣುಮಕ್ಕಳು ದಿನನಿತ್ಯ ಸಮಾಜದಲ್ಲಿ ಎದುರಿಸುತ್ತಿರುವ ಹಲವು ಸಮಸ್ಯೆಗಳ ಸುತ್ತ ಕಥೆ ಸಾಗುತ್ತದೆ. ಹೆಣ್ಣು ಮನಸ್ಸು ಮಾಡಿದರೆ, ತನ್ನಗೆದುರಾಗುವ ಸಮಸ್ಯೆಯನ್ನು ತಾನೇ ಹೇಗೆ ಬಗೆಹರಿಸಿಕೊಳ್ಳಬಹುದು‌ ಎಂಬುದನ್ನು ಕೂಡ ಈ ಚಿತ್ರದಲ್ಲಿ ತೋರಿಸಿದ್ದೇವೆ. ಹೆಣ್ಣು ಲಕ್ಷ್ಮೀ ಸ್ವರೂಪಿಯೂ ಹೌದು. ಕಾಳಿ ಸ್ವರೂಪಿ ಕೂಡ ಎಂಬುದು ಚಿತ್ರ ನೋಡಿದಾಗ ತಿಳಿಯುತ್ತದೆ’ ಎಂದು ರಾಗಿಣಿ ದ್ವಿವೇದಿ ಹೇಳಿದರು.
ಕೇರಳ ಹಾಗೂ ಬೆಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ಚಿತ್ರ ಮೊದಲು ಕನ್ನಡದಲ್ಲಿ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ಹೇಳಿದೆ. ಅವಿನಾಶ್, ಶೋಭ್ ರಾಜ್, ಚಿತ್ರಾ ಶೆಣೈ ಮುಂತಾದವರಿದ್ದಾರೆ‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT