ಭಾರತೀಯ ಚಿತ್ರರಂಗದ ಸೂಪರ್ಸ್ಟಾರ್ ರಜನಿಕಾಂತ್ ತಮ್ಮ 50 ವರ್ಷಗಳ ಸುದೀರ್ಘ ಸಿನಿಮಾ ಪ್ರಯಾಣಕ್ಕೆ ನಿವೃತ್ತಿ ಹೊಂದುವ ಬಗ್ಗೆ ಯೋಚಿಸುತ್ತಿದ್ದಾರೆ ಎಂದು ವರದಿಯಾಗಿದೆ.

ಈ ವರ್ಷ ಅವರ ಸಿನಿಮಾ ವೃತ್ತಿ ಜೀವನದ ಕೊನೆಯ ಅಧ್ಯಾಯವಾಗುವ ಸಾಧ್ಯತೆ ಇದೆ. ಸಿ. ಸುಂದರ್ ನಿರ್ದೇಶನದ ಇನ್ನೂ ಹೆಸರಿಡದ ಹಾಸ್ಯ ಚಿತ್ರದಲ್ಲಿನ ನಟನೆಯೊಂದಿಗೆ ತಾರಾ ನಟ ವಿದಾಯ ಹೇಳಬಹುದು ಎಂದು ಮೂಲಗಳು ತಿಳಿಸಿವೆ. ಕಮಲ್ ಹಾಸನ್ ಅವರೊಂದಿಗಿನ ಸಿನಿಮಾ ಚಿತ್ರೀಕರಣ ಮುಕ್ತಾಯಗೊಂಡ ಬಳಿಕ ಅವರು ಸಿ. ಸುಂದರ್ ನಿರ್ದೇಶನದ ಸಿನಿಮಾದಲ್ಲಿ ಅಭಿನಯಿಸುವ ಸಾಧ್ಯತೆ ಇದೆ.

ರಜನಿಕಾಂತ್ ಆಪ್ತ ಬಳಗದ ಮಾಹಿತಿಯ ಪ್ರಕಾರ, ಅವರಿಗೆ ವಯಸ್ಸು ಹೆಚ್ಚುತ್ತಿರುವುದಿಂದ ದೈಹಿಕ ಶ್ರಮ ಹಾಕುವ ಪಾತ್ರಗಳನ್ನು ನಿರ್ವಹಿಸಲು ಕಷ್ಟವಾಗುತ್ತಿದೆ. ಹಾಗಾಗಿ ಅವರು ತಮ್ಮ ಕುಟುಂಬ ಸದಸ್ಯರ ಜೊತೆಗೆ ಚರ್ಚಿಸಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ರಜನಿಕಾಂತ್ ಆಪ್ತರು ಕೂಡ ಕುಟುಂಬಸ್ಥರ ನಿರ್ಧಾರವನ್ನು ಸ್ವಾಗತಿಸಿದ್ದಾರೆ. 5 ದಶಕಗಳಿಗೂ ಹೆಚ್ಚು ಕಾಲ ಚಿತ್ರರಂಗದಲ್ಲಿ ಸಕ್ರೀಯರಾಗಿದ್ದರು. ಈಗ ಅವರು ತಮ್ಮ ಆರೋಗ್ಯ ಮತ್ತು ಆಧ್ಯಾತ್ಮಿಕ ಜೀವನದ ಕಡೆಗೆ ಗಮನಹರಿಸಲು ಸರಿಯಾದ ಸಮಯ ಎಂದು ಆಪ್ತರು ತಿಳಿಸಿದ್ದಾರೆ.

ಸದ್ಯ ರಜನಿಕಾಂತ್ ಜೈಲರ್–2 ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಅದಾದ ಬಳಿಕ ರಾಜ್ ಕಮಲ್ ಫಿಲ್ಮ್ಸ್ ನಿರ್ಮಾಣದ, ಸಿ. ಸುಂದರ್ ನಿರ್ದೇಶನದ ಹಾಸ್ಯಮಯ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ನೆಲ್ಸನ್ ನಿರ್ದೇಶನದ ರಜನಿಕಾಂತ್ ಮತ್ತು ಕಮಲ್ ಹಾಸನ್ ನಟನೆಯ ಹೊಸ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಪ್ರಾರಂಭವಾಗಲಿದೆ. ಈ ಚಿತ್ರವನ್ನು ಕಮಲ್ ಹಾಸನ್ ಅವರ ರಾಜ್ ಕಮಲ್ ಫಿಲ್ಮ್ಸ್ ನಿರ್ಮಿಸಲಿದೆ. ಈ ಚಿತ್ರದ ಬಳಿಕ ರಜನಿಕಾಂತ್ ಸಿನಿಮಾ ರಂಗದಿಂದ ನಿವೃತ್ತಿ ಹೊಂದುವ ಸಾಧ್ಯತೆ ಇದೆ. ಅದಾಗ್ಯೂ 2027ರ ಅವಧಿಯ ಒಳಗೆ ಎರಡು ಸಿನಿಮಾಗಳಲ್ಲಿ ನಟನೆ ಮಾಡುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ.

ಮುಂದಿನ ವರ್ಷ ಬಿಡುಗಡೆಯಾಗುವ ನಿರೀಕ್ಷೆಯಿರುವ ತಮ್ಮದೇ ಆತ್ಮಚರಿತ್ರೆಯಲ್ಲಿ ರಜನಿಕಾಂತ್ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಲಾಗಿದ್ದು, ಇದು ಅವರ ಗಮನಾರ್ಹ ಸಿನಿ ಪ್ರಯಾಣ ಮತ್ತು ಭಾರತೀಯ ಚಿತ್ರರಂಗದ ಮೇಲಿನ ಶಾಶ್ವತ ಗುರುತಾಗಿರಲಿದೆ ಎಂದು ಹೇಳಲಾಗುತ್ತಿದೆ.

ತಮ್ಮ ಸಿನಿಮಾ ನಿವೃತ್ತಿ ಬಗ್ಗೆ ರಜನಿಕಾಂತ್ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲದಿದ್ದರೂ ಕಾಲಿವುಡ್ ಅಂಗಳದಲ್ಲಿ ಈ ವಿಚಾರ ತೀವ್ರ ಚರ್ಚೆಯ ವಿಚಾರವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.