ಶನಿವಾರ, ಮಾರ್ಚ್ 25, 2023
22 °C

ದೀಪಾವಳಿ ಸಂಭ್ರಮ ಹೆಚ್ಚಿಸಿದ ರಜನಿ ಅಭಿನಯದ ’ಅಣ್ಣಾತೆ’ ಸಿನಿಮಾ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ‘ಅಣ್ಣಾತೆ’ ಸಿನಿಮಾ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ದೀಪಾವಳಿ ಹಬ್ಬದ ಸಂಭ್ರಮವನ್ನು ಹೆಚ್ಚಿಸಿದೆ.

ಇಂದು ಬೆಳಗಿನ ಜಾವದಿಂದಲೇ ತಮಿಳುನಾಡಿನ ಹಲವು ಚಿತ್ರಮಂದಿರಗಳಲ್ಲಿ ಅಭಿಮಾನಿಗಳಿಗಾಗಿ ವಿಶೇಷ ಪ್ರದರ್ಶನಗಳು ನಡೆದಿವೆ. ಅಭಿಮಾನಿಗಳು ಚಿತ್ರಮಂದಿರಗಳ ಮುಂದೆ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಅಣ್ಣಾತೆ ಸಿನಿಮಾದ ಸಂಭ್ರಮವನ್ನು ಹೆಚ್ಚಿಸಿದ್ದಾರೆ. 

ರಜನಿಕಾಂತ್ ಅವರಿಗೆ ವಿಶ್ವದಾದ್ಯಂತ ಅಸಂಖ್ಯಾತ ಅಭಿಮಾನಿ ಬಳಗವೇ ಇದೆ. ರಜನಿ ಸಿನಿಮಾ ಅಂದ್ರೆ ಅಭಿಮಾನಿಗಳಿಗೆ ದೊಡ್ಡ ಹಬ್ಬ ಇದ್ದಂತೆ. ಈ ಕೋವಿಡ್‌ ಕಾಲಘಟ್ಟದಲ್ಲಿ ಸಿನಿಮಾ ಬಿಡುಗಡೆಯಾಗಿರುವುದಕ್ಕೆ ಅಭಿಮಾನಗಳಂತೂ ಸಖತ್ ಖುಷಿಯಾಗಿದ್ದಾರೆ. 

ತೆಲುಗಿನಲ್ಲಿ ಇದೇ ಸಿನಿಮಾ ಪೆದ್ದಣ್ಣ ಹೆಸರಿನಲ್ಲಿ ಬಿಡುಗಡೆಯಾಗಿದೆ. ಆಂಧ್ರ, ತೆಲಂಗಾಣದಲ್ಲಿ ಸುಮಾರು 1000 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಅಂತರರಾಷ್ಟ್ರೀಯವಾಗಿ 1800 ಚಿತ್ರಮಂದಿರಗಳಲ್ಲಿ ಅಣ್ಣಾತೆ ಬಿಡುಗಡೆಯಾಗಿರುವುದು ವಿಶೇಷ. ಅಮೆರಿಕದಲ್ಲಿ 650 ಚಿತ್ರಮಂದಿರಗಳು, ಮಲೇಷಿಯಾ ಹಾಗೂ ಶ್ರೀಲಂಕಾದಲ್ಲಿ 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆಕಂಡಿದೆ. 

ಇನ್ನು ತಮಿಳುನಾಡು ಹಾಗೂ ಕೇರಳದಲ್ಲಿ ಈ ಸಿನಿಮಾ 1500 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ. ಒಟ್ಟಾರೆ ಈ ಸಿನಿಮಾ ವಿಶ್ವದಾದ್ಯಂತ 4300 ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಿದೆ ಎಂದು ಕಾಲಿವುಡ್‌ ಮೂಲಗಳು ತಿಳಿಸಿವೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು