ಗುರುವಾರ, 19 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ವೆಟ್ಟೈಯಾನ್‌ ಚಿತ್ರ ಅ.10ಕ್ಕೆ ಬಿಡುಗಡೆ: ಪೊಲೀಸ್‌ ಅಧಿಕಾರಿಯಾಗಿ ರಜನಿಕಾಂತ್‌

Published : 19 ಆಗಸ್ಟ್ 2024, 10:34 IST
Last Updated : 19 ಆಗಸ್ಟ್ 2024, 10:34 IST
ಫಾಲೋ ಮಾಡಿ
Comments

ಚೆನ್ನೈ: ತಮಿಳು ಸೂಪರ್‌ ಸ್ಟಾರ್‌ ರಜನಿಕಾಂತ್‌ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ವೆಟ್ಟೈಯಾನ್‌‘ ಅಕ್ಟೋಬರ್‌ 10ರಂದು ವಿಶ್ವದಾದ್ಯಂತ ಬಿಡುಗಡೆಯಾಗಲಿದೆ ಎಂದು ಚಿತ್ರತಂಡ ತಿಳಿಸಿದೆ.

ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿರುವ ಸಿನಿಮಾ ನಿರ್ಮಾಣ ಸಂಸ್ಥೆ ‘ಲೈಕಾ ಪ್ರೊಡಕ್ಷನ್’, ಸೂಪರ್‌ಸ್ಟಾರ್‌ ಸೂಪರ್‌ ಕಾಪ್‌ ಆಗಿ ನಿಮ್ಮ ಮುಂದೆ ಬರಲಿದ್ದಾರೆ ಎಂದು ತಿಳಿಸಿದೆ.

ರಜನಿಕಾಂತ್‌ ಅವರ 170ನೇ ಸಿನಿಮಾ ಇದಾಗಿದ್ದು, ಅವರು ಪೊಲೀಸ್‌ ಪಾತ್ರದ ಮೂಲಕ ವಿಭಿನ್ನ ಲುಕ್‌ನಲ್ಲಿ ಪ್ರೇಕ್ಷಕರನ್ನು ರಂಜಿಸಲಿದ್ದಾರೆ.

ಹಲವು ವರ್ಷಗಳ ಬಳಿಕ ಬಾಲಿವುಡ್‌ ಬಿಗ್‌ ಬಿ ಅಮಿತಾಭ್ ಬಚ್ಚನ್‌ ಅವರು ತಲೈವಾ ಜತೆ ಬೆಳ್ಳಿ ತೆರೆಯಲ್ಲಿ ಒಟ್ಟಾಗಿ ಕಾಣಿಸಿಕೊಳ್ಳಲಿದ್ದಾರೆ.

ಈ ಚಿತ್ರಕ್ಕೆ ‘ಜೈ ಭೀಮ್‌’ ಖ್ಯಾತಿಯ ಟಿಜೆ ಜ್ಞಾನವೇಲ್ ಅವರು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಿತ್ರಕ್ಕೆ ಅನಿರುದ್ಧ್ ರವಿಚಂದರ್ ಸಂಗೀತ ಸಂಯೋಜನೆ ಇದೆ. ಮಂಜು ವಾರಿಯರ್, ಕಿಶೋರ್, ರಿತಿಕಾ ಸಿಂಗ್, ದುಶಾರ ವಿಜಯನ್, ಜಿ.ಎಂ ಸುಂದರ್, ರೋಹಿಣಿ, ಅಭಿರಾಮಿ, ರಾವ್ ರಮೇಶ್, ರಮೇಶ್ ತಿಲಕ್, ರಕ್ಷಣ್ ಸೇರಿದಂತೆ ಸುಪ್ರೀತ್ ರೆಡ್ಡಿ ಚಿತ್ರದಲ್ಲಿ ಅಭಿನಯಿಸಿದ್ದಾರೆ.

‘ವೆಟ್ಟೈಯಾನ್‌’ ಚಿತ್ರವು ತಮಿಳು, ತೆಲುಗು, ಹಿಂದಿ ಹಾಗೂ ಕನ್ನಡ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ.

ಸೂರ್ಯ ಅಭಿನಯದ ‘ಕಂಗುವ’ ಚಿತ್ರ ಅಕ್ಟೋಬರ್‌ 11ಕ್ಕೆ ಹಾಗೂ ನಟಿ ಅಲಿಯಾ ಭಟ್‌ ನಟನೆಯ ‘ಜಿಗ್ರಾ’ ಸಿನಿಮಾವು ಬಿಡುಗಡೆಯಾಗಲಿದ್ದು, ವೆಟ್ಟೈಯಾನ್‌ ಚಿತ್ರಕ್ಕೆ ಪೈಪೋಟಿ ನೀಡಲಿವೆ ಎಂದು ವರದಿಯಾಗಿದೆ.

ರಜನಿಕಾಂತ್‌ ಅವರು ಮುಂಬರುವ ‘ಕೂಲಿ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಈ ಚಿತ್ರ 2025ಕ್ಕೆ ಬಿಡುಗಡೆಯಾಗಲಿದೆ ಎನ್ನಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT