ಚೆನ್ನೈ: ನಟ ರಜನಿಕಾಂತ್ ಶನಿವಾರ ತಮ್ಮ 70ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಈ ಸಂದರ್ಭದಲ್ಲಿ ಅಸಂಖ್ಯ ಅಭಿಮಾನಿಗಳು ಇಲ್ಲಿನ ಅವರ ನಿವಾಸದ ಬಳಿ ಸೇರಿದ್ದು ಜನ್ಮದಿನದ ಸಂಭ್ರಮದಲ್ಲಿ ಭಾಗಿಯಾದರು.

ಪ್ರಧಾನಿ ನರೇಂದ್ರ ಮೋದಿ ಅವರೂ ಸೇರಿದಂತೆ ರಾಜಕೀಯ ಹಾಗೂ ಚಿತ್ರರಂಗದ ಹಲವು ಪ್ರಮುಖರು ಶುಭಾಶಯ ಕೋರಿದ್ದಾರೆ. ರಜನಿಕಾಂತ್ ನಿವಾಸದ ಬಳಿ ಸೇರಿದ್ದ ಅಭಿಮಾನಿಗಳು ನಟನ ಚಿತ್ರ ಒಳಗೊಂಡಿದ್ದ ಟೀ–ಶರ್ಟ್ ಧರಿಸಿದ್ದರು.

‘ಈಗಲ್ಲದಿದ್ದರೆ ಎಂದಿಗೂ ಇಲ್ಲ’ ಎಂಬ ಅರ್ಥದ ತಮಿಳು ಭಾಷೆಯ ಘೋಷಣೆಯೂ ಅದರಲ್ಲಿತ್ತು. ರಜನಿಕಾಂತ್ ಅವರು ತಮ್ಮ ರಾಜಕೀಯ ಪ್ರವೇಶವನ್ನು ಈಚೆಗಷ್ಟೇ ಘೋಷಿಸಿದ್ದ ಹಿನ್ನೆಲೆಯಲ್ಲಿ ಜನ್ಮದಿನ ಆಚರಣೆ ಗಮನಸೆಳೆಯಿತು.

ಜನವರಿ ತಿಂಗಳಲ್ಲಿ ರಾಜಕೀಯ ಪಕ್ಷ ಸ್ಥಾಪನೆಯನ್ನು ಪ್ರಕಟಿಸುವುದಾಗಿ ರಜನಿಕಾಂತ್ ಇತ್ತೀಚೆಗೆ ಘೋಷಿಸಿದ್ದರು. ಈ ಮೂಲಕ ಅವರು ರಾಜಕೀಯ ಕ್ಷೇತ್ರ ಪ್ರವೇಶಿಸುವ ಕುರಿತು ಹಲವು ವರ್ಷಗಳಿಂದ ಇದ್ದ ಕುತೂಹಲಕ್ಕೆ ತೆರೆ ಎಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.