ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಪ್ತ ಸಾಗರದ’ Side-A ಮತ್ತು Side-B!

Published 8 ಜೂನ್ 2023, 19:30 IST
Last Updated 8 ಜೂನ್ 2023, 19:30 IST
ಅಕ್ಷರ ಗಾತ್ರ

ಈ ಪ್ಯಾನ್‌ ಇಂಡಿಯಾ ಸಮಯದಲ್ಲಿ ಸಿನಿಮಾಗಳು ಎರಡು ಭಾಗಗಳಲ್ಲಿ ಬರುವುದು ಸಾಮಾನ್ಯ. ಆದರೆ ಹಳೆಯ ಟೇಪ್‌ರೆಕಾರ್ಡರ್‌ನ ಕ್ಯಾಸೆಟ್‌ನಂತೆ ಎರಡು ಬದಿಗಳಲ್ಲಿ (ಸೈಡ್‌) ಸಿನಿಮಾವೊಂದು ಸಿದ್ಧವಾದರೆ! ಹೀಗೊಂದು ಪ್ರಯತ್ನವನ್ನು ನಿರ್ದೇಶಕ ಹೇಮಂತ್‌ ಎಂ.ರಾವ್‌ ಮಾಡಿದ್ದಾರೆ.

ಅವರ ಹೊಸ ಸಿನಿಮಾ, ರಕ್ಷಿತ್‌ ಶೆಟ್ಟಿ ನಟನೆಯ ‘ಸಪ್ತ ಸಾಗರದಾಚೆ ಎಲ್ಲೋ’ ಎರಡು ಭಾಗಗಳಲ್ಲಿ ಪ್ರತ್ಯೇಕವಾಗಿ ತೆರೆಕಾಣಲಿದೆ. ರಕ್ಷಿತ್‌ ಅವರ ಜನ್ಮದಿನದಂದು ಚಿತ್ರದ ಹೊಸ ಟೀಸರ್‌ ಬಿಡುಗಡೆಯಾಗಿದ್ದು, ಜೂನ್‌ 15ರಂದು ಎರಡೂ ಭಾಗಗಳ ಬಿಡುಗಡೆ ದಿನಾಂಕವನ್ನು ಘೋಷಿಸುವುದಾಗಿ ಹೇಮಂತ್‌ ತಿಳಿಸಿದ್ದಾರೆ. ಜುಲೈ ಅಂತ್ಯದಲ್ಲಿ ಚಿತ್ರದ ಮೊದಲ ಭಾಗ ಬಿಡುಗಡೆಯಾಗುವ ಸಾಧ್ಯತೆ ಇದೆ.

ಮೊದಲ ಟೀಸರ್‌ನಲ್ಲೇ ಕ್ಯಾಸೆಟ್‌ ಒಂದನ್ನು ತೋರಿಸಲಾಗಿತ್ತು. ಇದುವೇ ಚಿತ್ರಕಥೆಯನ್ನು ಸೂಕ್ಷ್ಮವಾಗಿ ಹೇಳಿದಂತಿದೆ. ಚಿತ್ರದಲ್ಲಿ ‘ಮನು’ ಎಂಬ ಪಾತ್ರವನ್ನು ರಕ್ಷಿತ್‌ ಶೆಟ್ಟಿ ಅವರು ನಿಭಾಯಿಸಿದ್ದು, ಅವರಿಗೆ ಎರಡು ಶೇಡ್ಸ್‌ ಇವೆ. 2010ರಲ್ಲಿ ನಡೆಯುವ ಕಥೆಯನ್ನು ಸಿನಿಮಾ ಹೊಂದಿದ್ದು, ನಟಿ ರುಕ್ಮಿಣಿ ವಸಂತ್‌ ‘ಪ್ರಿಯಾ’ ಎಂಬ ಪಾತ್ರದ ಮೂಲಕ ಹಾಗೂ ‘ಸುರಭಿ’ ಎಂಬ ಪಾತ್ರದ ಮೂಲಕ ನಟಿ ಚೈತ್ರಾ ಆಚಾರ್‌ ರಕ್ಷಿತ್‌ಗೆ ಜೋಡಿಯಾಗಿದ್ದಾರೆ.

ಚಿತ್ರಕ್ಕೆ ದೈಹಿಕವಾಗಿಯೂ ರಕ್ಷಿತ್‌ ಶೆಟ್ಟಿ ಅವರು ಬದಲಾಗಬೇಕಿದ್ದ ಕಾರಣ 137 ದಿನಗಳ ಸುದೀರ್ಘ ಚಿತ್ರೀಕರಣ ನಡೆದಿತ್ತು. ಚಿತ್ರದಲ್ಲಿ ಎಲ್ಲ ಪಾತ್ರಗಳಿಗೂ ಎರಡು ನೋಟ ಇದ್ದು, 10 ವರ್ಷದ ಹಿಂದೆ ಹಾಗೂ ಪ್ರಸ್ತುತ ಇರುವ ಪಾತ್ರ ಇದಾಗಿದೆ. ಬದಲಾವಣೆ ಹೇಗಾಗುತ್ತದೆ, ಅವರ ದೃಷ್ಟಿಕೋನ ಹೇಗಿರುತ್ತದೆ ಎನ್ನುವುದೇ ಕಥಾಹಂದರ ಎಂದಿದೆ ಚಿತ್ರತಂಡ. ಎರಡೂ ಭಾಗಗಳ ಚಿತ್ರೀಕರಣವನ್ನು ಏಕಕಾಲದಲ್ಲೇ ಪೂರ್ಣಗೊಳಿಸಿರುವ ಕಾರಣ, ಎರಡೂ ಭಾಗಗಳೂ ತಿಂಗಳುಗಳ ಅಂತದಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT