ರಕುಲ್‌ಗೆ ಕೋಟಿ!

7

ರಕುಲ್‌ಗೆ ಕೋಟಿ!

Published:
Updated:

ತೆಲುಗಿನ ಜನಪ್ರಿಯ ನಟ ಎನ್‌ಟಿಆರ್ ಬದುಕಿನ ಕಥೆ ಸಿನಿಮಾ ಆಗುತ್ತಿರುವುದು ಹಳೆಯ ಸುದ್ದಿ. ಆ ಸಿನಿಮಾದ ತಾರಾಗಣವೂ ಅಷ್ಟೇ ಕುತೂಹಲಕಾರಿಯಾಗಿದೆ. ನಂದಮೂರಿ ಬಾಲಕೃಷ್ಣ ಅವರು ಎನ್‌ಟಿಆರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಿದ್ಯಾ ಬಾಲನ್ ಅವರು ಎನ್‌ಟಿಆರ್ ಮೊದಲ ಪತ್ನಿಯಾಗಿ ನಟಿಸುತ್ತಿದ್ದಾರೆ. ರಾನಾ ದಗ್ಗುಬಾಟಿ ಕೂಡ ಮುಖ್ಯ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ.

ಎನ್‌ಟಿಆರ್ ಜತೆ ಹದಿನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದ ಶ್ರೀದೇವಿ ಪಾತ್ರದಲ್ಲಿ ನಟಿಸಲು ರಕುಲ್ ಪ್ರೀತ್ ಸಿಂಗ್ ಆಯ್ಕೆಯಾಗಿರುವುದೂ ಹೊಸ ಸುದ್ದಿಯೇನಲ್ಲ. ರಕುಲ್ ಪ್ರೀತ್ ಸಿಂಗ್ ಅವರ ಜನ್ಮದಿನದಂದು ಅವರ ಪಾತ್ರದ ಫಸ್ಟ್ ಲುಕ್‌ ಅನ್ನೂ ಚಿತ್ರತಂಡ ಬಿಡುಗಡೆ ಮಾಡಿತ್ತು. ಈ ಚಿತ್ರವನ್ನು ನೋಡಿದ್ದ ಶ್ರೀದೇವಿ ಅಭಿಮಾನಿಗಳು ರಕುಲ್ ಪ್ರೀತ್ ಸಿಂಗ್ ಮುಖದಲ್ಲಿ ತಮ್ಮ ನೆಚ್ಚಿನ ನಟಿಯನ್ನೇ ಕಂಡಿದ್ದರು. 

ಸದ್ಯ ಚರ್ಚೆಯಲ್ಲಿರುವ ವಿಷಯ ಇದಲ್ಲ, ಎರಡು ಭಾಗಗಳಲ್ಲಿ ತಯಾರಾಗುತ್ತಿರುವ ಈ ಬಯೋಪಿಕ್‌ನಲ್ಲಿ ಶ್ರೀದೇವಿ ಪಾತ್ರ ಇಪ್ಪತ್ತು ನಿಮಿಷಗಳ ಕಾಲ ಇರುತ್ತದೆ. ಆ ಪಾತ್ರಕ್ಕಾಗಿ ರಕುಲ್‌ ತೆಗೆದುಕೊಳ್ಳುತ್ತಿರುವ ಸಂಭಾವನೆ ಎಷ್ಟು ಗೊತ್ತೇ? ಮೂಲಗಳ ಪ್ರಕಾರ ಅವರು ಒಂದು ಕೋಟಿ ರೂಪಾಯಿಗಳನ್ನು ತೆಗೆದುಕೊಳ್ಳುತ್ತಿದ್ದಾರಂತೆ!

ಸಾಮಾನ್ಯವಾಗಿ ದಕ್ಷಿಣ ಭಾರತದಲ್ಲಿ ನಟಿಯರ ಸಂಭಾವನೆ ಅರ್ಧ ಕೋಟಿ ದಾಟುವುದು ಅಪರೂಪ. ಅಂಥದ್ದರಲ್ಲಿ ಇಪ್ಪತ್ತು ನಿಮಿಷಗಳು ಇರುವ ಪಾತ್ರಕ್ಕಾಗಿ ಒಂದು ಕೋಟಿ ಪಡೆದುಕೊಳ್ಳುತ್ತಿದ್ದಾರೆ ಎನ್ನುವುದು ಬಣ್ಣದ ಜಗತ್ತಿನಲ್ಲಿ ಚರ್ಚೆಗೆ ಗ್ರಾಸವಾಗಿದೆ. 

ಈ ಇಪ್ಪತ್ತು ನಿಮಿಷಗಳಲ್ಲಿ ಎನ್‌ಟಿಆರ್ ಮತ್ತು ಶ್ರೀದೇವಿ ಒಟ್ಟಾಗಿ ಅಭಿನಯಿಸಿದ ಕೆಲವು ಸಿನಿಮಾ ಹಾಡುಗಳಿಗೆ ರಕುಲ್ ಮತ್ತು ಬಾಲಕೃಷ್ಣ ಹೆಜ್ಜೆ ಹಾಕಲಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !