ಬುಧವಾರ, ಜನವರಿ 20, 2021
29 °C

ಟಾಲಿವುಡ್‌ನಲ್ಲಿ ಏಳು ವರ್ಷ ಪೂರೈಸಿದ ನಟಿ ರಕುಲ್ ಪ್ರೀತ್‌‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕನ್ನಡದ ‘ಗಿಲ್ಲಿ’ ಸಿನಿಮಾದ ಮೂಲಕ ನಟನೆ ಆರಂಭಿಸಿದ್ದ ನಟಿ ರಕುಲ್ ಪ್ರೀತ್ ಸಿಂಗ್ ಟಾಲಿವುಡ್‌ನಲ್ಲಿ ಟಾಪ್ ನಟಿಯರ ಪಟ್ಟಿಯಲ್ಲಿ ಹೆಸರು ಗಿಟ್ಟಿಸಿಕೊಂಡಿದ್ದಾರೆ. ತೆಲುಗಿನ ‘ವೆಂಕಟಾದ್ರಿ ಏಕ್ಸ್‌ಪ್ರೆಸ್’ ಮೂಲಕ ಟಾಲಿವುಡ್‌ ಪ್ರವೇಶಿಸಿದ್ದ ಉತ್ತರ ಭಾರತದ ಬೆಡಗಿ ಟಾಲಿವುಡ್‌ನಲ್ಲಿ ಏಳು ವರ್ಷ ಪೂರೈಸಿದ್ದಾರೆ.

ಈ ಏಳು ವರ್ಷಗಳಲ್ಲಿ ಆಕೆ ‘ಧ್ರುವ, ನಾನಕು ಪ್ರೇಮತೋ, ಸರೈನೊಡು’ ಸೇರಿದಂತೆ ಅನೇಕ ಹಿಟ್‌ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆ ಕಾರಣದಿಂದ ತೆಲುಗಿನಲ್ಲಿ ಸ್ಟಾರ್‌ ನಟಿ ಎನ್ನಿಸಿಕೊಂಡಿದ್ದರು. ಟಾಲಿವುಡ್‌ನ ತಮ್ಮ ಪಯಣದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ರಕುಲ್ ಅಭಿಮಾನಿಗಳ ಪ್ರೀತಿಗೆ ಧನ್ಯವಾದ ತಿಳಿಸಿದ್ದಾರೆ.

‘ನಾನು ಅಂದಿನಿಂದ ಇಂದಿನವರೆಗೆ ನಗುತ್ತಿರಲು ನಮ್ಮನ್ನು ಒಪ್ಪಿಕೊಂಡು ಪ್ರೀತಿಸಿದ ಜನರ ಪ್ರೀತಿಯೇ ಕಾರಣ. ದೆಹಲಿಯ ಹುಡುಗಿಯಾದ ನಾನು ಇಂದು ಪಕ್ಕಾ ತೆಲುಗು ಹುಡುಗಿಯಾಗಿದ್ದೇನೆ. ಈ ಪಯಣ ನಿಜಕ್ಕೂ ತುಂಬಾ ಸುಂದರವಾಗಿತ್ತು. ಎಲ್ಲಾ ನಿರ್ದೇಶಕರು, ನಿರ್ಮಾಪಕರು, ಸಹನಟರು, ಜೊತೆಗಾರರು, ಸ್ನೇಹಿರು ಹಾಗೂ ನನ್ನನ್ನು ಬೆಂಬಲಿಸಿದ, ನನ್ನೊಂದಿಗೆ ನಿಂತ, ನನ್ನನ್ನು ಪ್ರಶಂಸಿಸಿದ, ವಿರ್ಮಶಿಸಿದ ಅಭಿಮಾನಿಗಳು ಎಲ್ಲರಿಗೂ ನಾನು ಧನ್ಯವಾದ ಅರ್ಪಿಸುತ್ತೇನೆ. ಇಷ್ಟು ವರ್ಷಗಳಲ್ಲಿ ಇವರೆಲ್ಲರೂ ನನಗೆ ತುಂಬಾನೇ ಸಹಾಯ ಮಾಡಿದ್ದಾರೆ. ಅಲ್ಲದೇ ನನ್ನ ಕುಟುಂಬ, ಮ್ಯಾನೇಜರ್ ಹಾಗೂ ತಂಡವಿಲ್ಲದೇ ನಾನು ಮುಂದೆ ಸಾಗಲು ಸಾಧ್ಯವಿರಲಿಲ್ಲ. ಅವರಿಗೂ ಧನ್ಯವಾದ’ ಎಂದು ಬರೆದುಕೊಂಡಿದ್ದಾರೆ.

ಈ ಏಳುವರ್ಷಗಳ ಪಯಣದಲ್ಲಿ ರಕುಲ್ ಪ್ರೀತ್ ಮಹೇಶ್ ಬಾಬು, ನಾಗಾರ್ಜುನ ಅಕ್ಕಿನೇನಿ, ರಾಮ್‌ಚರಣ್, ಜೂನಿಯರ್ ಎನ್‌ಟಿಆರ್‌ ಹಾಗೂ ಅಲ್ಲು ಅರ್ಜುನ್‌ರಂತಹ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡಿದ್ದಾರೆ.

ಸದ್ಯ ರಕುಲ್ ಅಮಿತಾಬ್ ಹಾಗೂ ಅಜಯ್ ದೇವಗನ್ ನಟನೆಯ ‘ಮೇಡೇ’ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಈ ಸಿನಿಮಾವನ್ನು ಅಜಯ್ ದೇವಗನ್ ನಿರ್ದೇಶನ ಮಾಡುವ ಜೊತೆಗೆ ನಿರ್ಮಾಣದ ಹೊಣೆ ಹೊತ್ತಿದ್ದಾರೆ. ಅಲ್ಲದೇ ತೆಲುಗಿನಲ್ಲಿ ಚಂದ್ರಶೇಖರ್ ಯಲೆಟಿಯಾ ನಿರ್ದೇಶನದ ನಿತಿನ್ ಅಭಿನಯದ ಸಿನಿಮಾದಲ್ಲೂ ನಟಿಸುತ್ತಿದ್ದಾರೆ. ಇದರಲ್ಲಿ ಪ್ರಿಯಾ ಪ್ರಕಾಶ್ ವಾರಿಯರ್ ಕೂಡ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು