ಶನಿವಾರ, ಅಕ್ಟೋಬರ್ 16, 2021
21 °C

ನಟಿ ರಾಕುಲ್ ಪ್ರೀತ್ ಸಿಂಗ್ ಇನಿಯ ಯಾರೆಂಬುದು ಬಹಿರಂಗ

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ತೆಲುಗು ಹಾಗೂ ಹಿಂದಿ ಚಿತ್ರರಂಗದಲ್ಲಿ ಬೇಡಿಕೆ ನಟಿಯಾಗಿ ಬೆಳೆದಿರುವ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಅಪಾರ ಅಭಿಮಾನಿಗಳನ್ನು ಹೊಂದಿರುವ ರಾಕುಲ್ ಪ್ರೀತ್ ಸಿಂಗ್‌ಗೆ ಇಂದು 31 ನೇ ಜನ್ಮದಿನದ ಸಂಭ್ರಮ.

ಇದೇ ವೇಳೆ ಇಷ್ಟು ದಿನ ರಾಕುಲ್‌ ಪ್ರೀತ್ ಸಿಂಗ್ ಇನಿಯ ಯಾರು? ಎಂದು ಕೇಳಿ ಬರುತ್ತಿದ್ದ ರೂಮರ್‌ಗಳಿಗೆ ತೆರೆ ಬಿದ್ದಿದ್ದು, ರಾಕುಲ್ ಇನಿಯ ಯಾರೆಂಬುದು ಕಡೆಗೂ ಇಂದು ಬಹಿರಂಗವಾಗಿದೆ.

ನಟ ಹಾಗೂ ನಿರ್ಮಾಪಕ ಜಕ್ಕಿ ಬಗ್‌ನಾನಿ ಅವರೇ ರಾಕುಲ್ ಅವರ ಹುಡುಗ. ಇಷ್ಟು ದಿನ ಗುಟ್ಟಾಗಿದ್ದ ಈ ವಿಷಯ ಜಕ್ಕಿ ಅವರಿಂದಲೇ ಬಹಿರಂಗವಾಗಿದೆ.

ಪಾರ್ಕ್‌ನಲ್ಲಿ ರಾಕುಲ್ ಹಾಗೂ ಜಕ್ಕಿ ಕೈ ಕೈ ಹಿಡಿದುಕೊಂಡು ಹೋಗುತ್ತಿರುವ ಫೋಟೊ ಹಂಚಿಕೊಂಡು ಜಕ್ಕಿ ರಾಕುಲ್‌ಗೆ ಜನ್ಮದಿನದ ಶುಭಾಶಯ ಕೋರಿದ್ದರು. ಕೆಲ ಹೊತ್ತಿನ ನಂತರ ಇದೇ ಚಿತ್ರವನ್ನು ಹಂಚಿಕೊಂಡು ರಾಕುಲ್, ತಮ್ಮ ಸಂಬಂಧವನ್ನು ಖಚಿತಪಡಿಸಿದರು. ಈ ಇಬ್ಬರೂ ಕ್ಯೂಟ್ ಜೋಡಿಗೆ ಅಭಿಮಾನಿಗಳು ಶುಭಾಶಯ ಕೋರುತ್ತಿದ್ದಾರೆ.

 

ಕೋಲ್ಕತ್ತ ಮೂಲದ 36 ವರ್ಷದ ಜಕ್ಕಿ ಬಗ್‌ನಾನಿ ಬಾಲಿವುಡ್‌ ನಟ ಹಾಗೂ ನಿರ್ಮಾಪಕ. 2001 ರಲ್ಲಿ ‘ರೆಹನಾ ಹೈ ತೆರೆ ದಿಲ್ ಮೇನ್’ ಸಿನಿಮಾ ಮೂಲಕ ಚಿತ್ರರಂಗ ಪಾದಾರ್ಪಣೆ ಮಾಡಿದ್ದಾರೆ. ‘ಫಾಲ್ತು’, ‘ಅಜಬ್ ಗಜಬ್’, ‘ಮೋಹಿನಿ’, ‘ವೆಲ್‌ ಕಮ್ ಟು ಕರಾಚಿ’, ‘ರಂಗ್ರೇಜ್’ ಸೇರಿದಂತೆ ಅನೇಕ ಸಿನಿಮಾಗಳಲ್ಲಿ ನಟಿಸಿದ್ದು, ‘ಕೂಲಿ ನಂ 1’, ‘ವೆಲ್‌ ಕಮ್ ಟು ನ್ಯೂಯಾರ್ಕ್’, ‘ಬೆಲ್ ಬಾಟಮ್’ ಸೇರಿ ಕೆಲ ಸಿನಿಮಾಗಳನ್ನು ನಿರ್ಮಿಸಿದ್ದಾರೆ.


ಜಕ್ಕಿ ಬಗ್‌ನಾನಿ

ಇದನ್ನೂ ಓದಿ: ನನ್ನ ಆ ಟ್ವೀಟ್ ಸಮಂತಾಳಿಗೆ ಸಂಬಂಧಿಸಿದ್ದಲ್ಲ, ನಾನೇನು ಮಾಡಲಿ ಎಂದ ನಟ ಸಿದ್ಧಾರ್ಥ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು