ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾವು ಕೂಡ 'ಮೇಡ್‌ ಇನ್‌ ಚೀನಾ' ಆಗುತ್ತೆ ಅಂದುಕೊಂಡಿರಲಿಲ್ಲ–ರಾಮ್‌ ಗೋಪಾಲ್‌ ವರ್ಮಾ

Last Updated 4 ಮಾರ್ಚ್ 2020, 6:59 IST
ಅಕ್ಷರ ಗಾತ್ರ

ಹೈದರಾಬಾದ್‌: ವಿಡಂಬನೆ ಮತ್ತು ವಿವಾದಾತ್ಮಕ ಹೇಳಿಕೆಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಪದೇ ಪದೇ ಸದ್ದು ಮಾಡುತ್ತಿರುವ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ ಕೊರೊನಾ ವೈರಸ್‌ ಭೀತಿ ಕುರಿತಂತೆ ಮೌನ ಮುರಿದಿದ್ದಾರೆ!

ಸಾಮಾನ್ಯವಾಗಿ ಭಾರತೀಯ ನಾಗರಿಕ ಸರಕುಗಳ ಬ್ರಾಂಡ್‌ಗೆ ಆದ್ಯತೆ ನೀಡುತ್ತಾರೆ. ಕಡಿಮೆ ಬೆಲೆಗೆ ದೊರೆಯುವ ಚೀನಾ ಮೇಡ್‌ ಸರಕುಗಳನ್ನು ಬಡವರು ಮತ್ತು ಕೆಳ ಮಧ್ಯಮವರ್ಗದವರು ಭಾರತದಲ್ಲಿ ಹೆಚ್ಚಾಗಿ ಕೊಳ್ಳುತ್ತಾರೆ. ಈ ಚೀನಾ ಮೇಡ್‌ ಸರಕುಗಳಿಗೂ ಮತ್ತು ಕೊರೊನಾ ವೈರಸ್‌ಗೆ ಲಿಂಕ್ ಮಾಡಿ ರಾಮ್‌ ಗೋಪಾಲ್‌ ವರ್ಮಾ ಟ್ವೀಟ್‌ ಮಾಡಿದ್ದಾರೆ.

‘ನಾನು ಎಂದಿಗೂ ಯೋಚಿಸಿರಲಿಲ್ಲ! ನಮ್ಮ ಸಾವೂ ಕೂಡ ಮೇಡ್‌ ಇನ್‌ ಚೀನಾ ಆಗುತ್ತದೆ‘ ಎಂದು ವರ್ಮಾ ಟ್ವೀಟ್‌ ಮಾಡಿದ್ದಾರೆ. ಈ ಟ್ವೀಟ್‌ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಈ ಟ್ವೀಟ್‌ಗೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.

ಸದ್ಯರಾಮ್ ಗೋಪಾಲ್ ವರ್ಮಾ 'ಎಂಟರ್ ದಿ ಗರ್ಲ್ ಡ್ರ್ಯಾಗನ್' ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ. ಈ ಚಿತ್ರದ ಕೆಲವು ದೃಶ್ಯಗಳನ್ನು ಚೀನಾದಲ್ಲಿ ಚಿತ್ರಿಕರಿಸಲು ವರ್ಮಾ ನಿರ್ಧರಿಸಿದ್ದರು. ಆದರೆ ಕೊರೊನಾ ಭೀತಿಯಿಂದ ಚೀನಾ ಪ್ರವಾಸ ಕೈಬಿಟ್ಟು ಭಾರತದಲ್ಲೇ ಚಿತ್ರೀಕರಿಸಲು ವರ್ಮಾ ನಿರ್ಧರಿಸಿದ್ದಾರೆ ಎನ್ನಲಾಗಿದೆ.

ಎಂಟರ್ ದಿ ಗರ್ಲ್ ಡ್ರ್ಯಾಗನ್ ಚಿತ್ರದಲ್ಲಿಪೂಜಾ ಬಾಲೇಕರ್ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರಕ್ಕೆ ಸಂಬಂಧಿಸಿದಂತೆ ವರ್ಮಾ ಎರಡು ಫೋಟೊಗಳನ್ನು ಹಂಚಿಕೊಂಡಿದ್ದುಪೂಜಾ ಅವರನ್ನು ವರ್ಮಾ 'ಬ್ರೂಸ್ ಲೀ ಗರ್ಲ್' ಎಂದು ಕರೆದಿದ್ದಾರೆ.

ಪೂಜಾ ಈ ಚಿತ್ರದಲ್ಲಿ ಸಖತ್‌ ಬೋಲ್ಡ್‌ ಆಗಿ ನಟಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT