ಶುಕ್ರವಾರ, 21 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮ್ ಗೋಪಾಲ್ ವರ್ಮಾರ ಈ ರಿಯಾಕ್ಷನ್‌ಗೆ ಕಾರಣ ನೀಡಿದವರಿಗೆ ₹1ಲಕ್ಷ ಬಹುಮಾನ!

ಅಕ್ಷರ ಗಾತ್ರ

ಬೆಂಗಳೂರು: ಸದಾ ಟ್ವಿಟರ್‌ನಲ್ಲಿ ಕ್ರಿಯಾಶೀಲರಾಗಿರುವ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಇವತ್ತು ಒಂದು ಟ್ವೀಟ್ ಮಾಡಿ ಎಲ್ಲರನ್ನೂ ಅಚ್ಚರಿಗೆ ದೂಡಿದ್ದರು.

ವಿಭಿನ್ನ ಹಾವಭಾವದ ಫೋಟೊ ಒಂದನ್ನು ಹಾಕಿ ಈ ರಿಯಾಕ್ಷನ್ ಏಕೆ ಅಂತಾ ಹೇಳಿ? ಸಂಜೆ ಆರು ಗಂಟೆಯ ಒಳಗಾಗಿ ಸರಿಯಾದ ಉತ್ತರ ನೀಡಿದರೆ ನಿಮಗೆ ₹1 ಲಕ್ಷ ಬಹುಮಾನ ನೀಡುತ್ತೇನೆ ಎಂದು ಹೇಳಿದ್ದರು. ಇದೇ ಟ್ವೀಟ್‌ನ್ನು ಅವರು ಮೂರು ಬಾರಿ ಮಾಡಿದ್ದರು.

ಆದರೆ, ರಾಮ್ ಗೋಪಾಲ್ ವರ್ಮಾ ಅವರ ಚಾಲೇಂಜ್‌ಗೆ ಸರಿಯಾದ ಉತ್ತರ ನೀಡಲಾಗದೇ ನೆಟ್ಟಿಗರು, ವರ್ಮಾ ಬೆಂಬಲಿಗರು ಸೋತು ಹೋದರು. ಕಡೆಗೆ 6 ಗಂಟೆ ನಂತರ ತಾವೇ ಅದಕ್ಕೆ ಉತ್ತರ ನೀಡಿದ ವರ್ಮಾ ಎಲ್ಲರನ್ನೂ ಹೌಹಾರುವಂತೆ ಮಾಡಿದರು.

ತಮ್ಮ ಆ ರಿಯಾಕ್ಷನ್‌ಗೆ ಕಾರಣ ತಮ್ಮ ಡೇಂಜರಸ್ ಸಿನಿಮಾದ ನಟಿಯರಾದ ಅಪ್ಸರಾ ರಾಣಿ ಹಾಗೂ ನೈನಾ ಗಂಗೂಲಿ ನೀಡಿದ ಸಿಹಿ ಮುತ್ತು ಎಂದು ಮತ್ತೊಂದು ಟ್ವೀಟ್‌ನಲ್ಲಿ ವರ್ಮಾ ಹೇಳಿದ್ದಾರೆ.

ಸಲಿಂಗಿಗಳ ಬಗ್ಗೆ ಕಥೆ ಹೊಂದಿರುವ ಡೇಂಜರಸ್ ಸಿನಿಮಾ ಇದೇ ಮೇ 6 ರಂದು ಚಿತ್ರಮಂದಿರಗಳಲ್ಲಿ ತೆರೆ ಕಾಣಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT