ಭಾನುವಾರ, ನವೆಂಬರ್ 27, 2022
27 °C

ದೀಪಾವಳಿ ಹಬ್ಬಕ್ಕೆ ಅಕ್ಷಯ್ ರಾಮಸೇತು ಸಿನಿಮಾ: ಟೀಸರ್ ಹೊರಬಂತು

ಪ್ರಜಾವಾಣಿ ವೆಬ್‌ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಟ ಅಕ್ಷಯ್ ಕುಮಾರ್ ಮುಖ್ಯಪಾತ್ರದಲ್ಲಿರುವ ‘ರಾಮಸೇತು’ ಸಿನಿಮಾ ದೀಪಾವಳಿ ಹಬ್ಬದ ಸಮಯದಲ್ಲಿ ಅ.25 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲಿದೆ.

ಇದರ ಪ್ರಯುಕ್ತ ಚಿತ್ರತಂಡ ರಾಮಸೇತುವಿನ ಟೀಸರ್ ಹಂಚಿಕೊಂಡಿದೆ. 

ರಾಮಾಯಣದಲ್ಲಿ ಉಲ್ಲೇಖವಾಗಿರುವ, ಭಾರತ ಹಾಗೂ ಶ್ರೀಲಂಕಾದ ಕರಾವಳಿ ನಡುವೆ ಇರುವ ಪೌರಾಣಿಕ ರಾಮಸೇತುವಿನ ಬಗ್ಗೆ ಆಕ್ಷ್ಯನ್, ಥ್ರಿಲ್ಲರ್ ಕಥೆಯನ್ನು ರಾಮಸೇತು ಸಿನಿಮಾ ಹೊಂದಿದೆ.

 

ಚಿತ್ರದಲ್ಲಿ ಅಕ್ಷಯ್ ಪುರಾತತ್ವಶಾಸ್ತ್ರಜ್ಞನರಾಗಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ನಾಸರ್, ನುಸ್ರುತ್ ಬರೋಚಾ, ಜಾಕ್ವೆಲಿನ್ ಫರ್ನಾಂಡಿಸ್ ತಾರಾಗಣದಲ್ಲಿದ್ದಾರೆ. ಟೀಸರ್ ನೋಡಿದರೆ ಇದೊಂದು ಕುತೂಹಲ ಭರಿತ ಔಟ್ ಆ್ಯಂಡ್ ಔಟ್ ಆಕ್ಷ್ಯನ್ ಸಿನಿಮಾ ಎಂದು ನೆಟ್ಟಿಗರು ಚರ್ಚೆ ಮಾಡಿದ್ದಾರೆ.

ಚಿತ್ರವನ್ನು ಅಭಿಷೇಕ್ ಶರ್ಮಾ ನಿರ್ದೇಶಿಸಿದ್ದು, ಕೇಫ್ ಆಫ್ ಗುಡ್ ಫಿಲ್ಮ್ಸ್, ಲೈಕಾ ಪ್ರೊಡಕ್ಷನ್ ಹಾಗೂ ಅಮೆಜಾನ್ ಫ್ರೈಮ್ ಜಂಟಿಯಾಗಿ ನಿರ್ಮಾಣ ಮಾಡಿವೆ. ಅಕ್ಷಯ್ ಅವರ ರಾಮಸೇತು ಸಿನಿಮಾ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಅವರ ಆರನೇ ಸಿನಿಮಾವಾಗಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು