ಬುಧವಾರ, ಜೂನ್ 3, 2020
27 °C

ಮರಾಠಿಗೆ ರಾಮಾ ರಾಮಾ ರೇ..

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕಥೆಯಲ್ಲಿನ ತಾಜಾತನ ಮತ್ತು ಮಾನವೀಯ ಮುಖದ ಅನಾವರಣದ ಮೂಲಕವೇ ಪ್ರೇಕ್ಷಕರ ಮನಗೆದ್ದಿದ್ದ ಕನ್ನಡದ ‘ರಾಮಾ ರಾಮಾ ರೇ..’ ಚಿತ್ರ ಈಗ ಮರಾಠಿಗೆ ಜಿಗಿಯಲು ಸಜ್ಜಾಗಿದೆ. ಈ ಚಿತ್ರಕ್ಕೆ ಸೃಜನಶೀಲ ನಿರ್ದೇಶಕ ಡಿ.ಸತ್ಯಪ್ರಕಾಶ್‌ ಆ್ಯಕ್ಷನ್‌ ಕಟ್‌ ಹೇಳಿದ್ದರು.

ಮರಾಠಿ ಸಿನಿಮಾ ನಿರ್ಮಾಣ ಸಂಸ್ಥೆಯೊಂದು ‘ರಾಮಾ ರಾಮಾ ರೇ..’ ಚಿತ್ರವನ್ನು ಮರಾಠಿ ಭಾಷೆಯಲ್ಲಿ ರಿಮೇಕ್ ಮಾಡಲು ಮುಂದೆ ಬಂದಿದೆ. ‘ಸತ್ಯ ಪಿಕ್ಚರ್ಸ್’ ಸಹಯೋಗದೊಂದಿಗೆ ಚಿತ್ರ ನಿರ್ಮಾಣ ಕಾರ್ಯವು ಪ್ರಾರಂಭವಾಗಲಿದೆ. ಲಾಕ್ ಡೌನ್ ಮುಗಿದ ನಂತರ ರಿಮೇಕ್‌ ಚಿತ್ರದ ಮುಂದಿನ ಕೆಲಸಗಳು ಶುರುವಾಗಲಿವೆ ಎಂದಿದ್ದಾರೆ ಸತ್ಯಪ್ರಕಾಶ್‌.

ಈ ಚಿತ್ರ ಈಗಾಗಲೇ ತೆಲುಗಿಗೆ ‘ಆಟಗದರ ಶಿವ’ ಹೆಸರಿನಲ್ಲಿ ರಿಮೇಕ್‌ ಆಗಿದೆ. ಮಲಯಾಳ, ತಮಿಳು ರಿಮೇಕ್‌ ಹಕ್ಕನ್ನು ನಿರ್ಮಾಪಕ ರಾಕ್‌ಲೈನ್‌ ವೆಂಕಟೇಶ್‌ ಪಡೆದುಕೊಂಡಿದ್ದಾರೆ.


ರಾಮಾ ರಾಮಾ ರೇ ...ಚಿತ್ರದಲ್ಲಿ ನಟಿಸಿರುವ ಧರ್ಮಣ್ಣ ಕಡೂರು

ಒಂದು ತಿಂಗಳ ಹಿಂದೆ ಕೊರೊನಾ ಲಾಕ್ ಡೌನ್ ಪ್ರಯುಕ್ತ ‘ಸತ್ಯ ಪಿಕ್ಚರ್ಸ್’ ಯೂಟ್ಯೂಬ್ ಚಾನೆಲ್‌ನಲ್ಲಿ ‘ರಾಮಾ ರಾಮಾ ರೇ..’ ಚಿತ್ರ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದೆ. ಒಂದು ತಿಂಗಳಿನಲ್ಲೇ 10 ಲಕ್ಷಕ್ಕೂ ಮೀರಿ ಪ್ರೇಕ್ಷಕರು ಈ ಸಿನಿಮಾ ನೋಡಿ ಮೆಚ್ಚಿದ್ದಾರೆ. ಯೂಟ್ಯೂಬ್‌ನಲ್ಲಿ ಸಿನಿಮಾ ನೋಡಿಯೇ ಮರಾಠಿ ಚಿತ್ರ ನಿರ್ಮಾಣ ಸಂಸ್ಥೆ ಪ್ರೇರಣೆಗೊಂಡು, ಈ ಸಿನಿಮಾವನ್ನು ಮರಾಠಿಗೆ ರಿಮೇಕ್‌ ಮಾಡಲು ಮುಂದೆ ಬಂದಿದೆ ಎನ್ನುತ್ತಾರೆ ಸತ್ಯಪ್ರಕಾಶ್‌.

ಜೈರಾಮ್‌, ನಟರಾಜ್‌ ಎಸ್‌. ಭಟ್‌, ಧರ್ಮಣ್ಣ ಕಡೂರು, ಬಿಂಬಶ್ರೀ ನೀನಾಸಂ, ಎನ್‌.ಕೆ. ಮಠ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದರು. ವಾಸುಕಿ ವೈಭವ್‌ ಸಂಗೀತ ನೀಡಿದ್ದರು. ಲವಿತ್‌ ಅವರ ಛಾಯಾಗ್ರಹಣವಿತ್ತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು