ಶುಕ್ರವಾರ, 2 ಜೂನ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಮಾಚಾರಿಯ ಎರಡನೇ ಆವೃತ್ತಿ ಏನಿದು?

Last Updated 26 ಫೆಬ್ರವರಿ 2023, 8:26 IST
ಅಕ್ಷರ ಗಾತ್ರ

‘ರಾಮಾಚಾರಿ 2.0’ ಜನರ ಪ್ರೀತಿ ವಿಶ್ವಾಸ ಗಳಿಸಿದ್ದಾನೆ. ಖಂಡಿತಾ ಈ ಸಿನಿಮಾ ಗೆಲ್ಲುತ್ತದೆ ಎನ್ನುತ್ತಾರೆ ನಿರ್ಮಾಪಕ, ನಿರ್ದೇಶಕ, ನಾಯಕ ನಟ ತೇಜ್‌ ಆರ್‌.

ತಾಯಿ ಮಗನ ಭಾವುಕ ಸಂಬಂಧ, ಸಸ್ಪೆನ್ಸ್‌ ಥ್ರಿಲ್ಲರ್‌, ತಮಾಷೆ, ವಿಷ್ಣುವರ್ಧನ್‌, ರವಿಚಂದ್ರನ್‌ ಮೇಲಿನ ಅಭಿಮಾನ ಈ ಚಿತ್ರದಲ್ಲಿ ವ್ಯಕ್ತವಾಗಿದೆ ಎಂದಿದೆ ಚಿತ್ರ ತಂಡ.

ಏನಂದ್ರು ‘ರಾಮಾಚಾರಿ’?

‘ರಾಮಾಚಾರಿ ಚಿತ್ರದಲ್ಲಿದ್ದ ಚಾಮಯ್ಯ ಮೇಷ್ಟ್ರಂತಹ ಪಾತ್ರ ಬೇಕಿತ್ತು. ಅದಕ್ಕೆ ರಾಘವೇಂದ್ರ ರಾಜ್‌ಕುಮಾರ್‌ ಅವರನ್ನು ಭೇಟಿಯಾದೆ. ಅವರ ಆಶೀರ್ವಾದ ಸಿಕ್ಕಿತು. ಈ ಸಿನಿಮಾ ಒಳ್ಳೆಯ ತಂಡದಿಂದ ನಿರ್ಮಾಣಗೊಂಡಿದೆ. ಸರಿಯಾದ ವ್ಯಕ್ತಿಗಳನ್ನು ಸರಿಯಾದ ಜಾಗದಲ್ಲಿ ನಿಯೋಜಿಸಿದ್ದೆ. ಅವರವರ ಕೆಲಸಗಳನ್ನು ನಿಯತ್ತಾಗಿ ಮಾಡಿದ್ದಾರೆ. ಹೀಗಾಗಿ ಸಿನಿಮಾ ತುಂಬಾ ಚೆನ್ನಾಗಿ ಮೂಡಿ ಬಂದಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು ಚಿತ್ರದ ನಾಯಕ ತೇಜ್‌.

ಚಿತ್ರದ ಟ್ರೇಲರ್‌ ಬಿಡುಗಡೆ ಸಮಾರಂಭದಲ್ಲಿ ಅವರ ವಿಶ್ವಾಸದ ಮಾತುಗಳು ಕೇಳಿಬಂದಿವೆ. ಚಿತ್ರಸಾಹಿತಿ ವಿ. ನಾಗೇಂದ್ರ ಪ್ರಸಾದ್‌ ಅವರು ಕೂಡಾ ಚಿತ್ರದ ಟ್ರೇಲರ್‌ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಪನಾರೋಮಿಕ್‌ ಸ್ಟುಡಿಯೋಸ್‌ ಮತ್ತು ಮೇಘನಾ ಕ್ರಿಯೇಷನ್ಸ್‌ ಬ್ಯಾನರ್‌ ಅಡಿ ಈ ಚಿತ್ರ ನಿರ್ಮಾಣಗೊಂಡಿದೆ. ಏಪ್ರಿಲ್‌ 7ರಂದು ಬಿಡುಗಡೆಯಾಗಲಿದೆ. ತೇಜ್‌ ಜೊತೆ ರಾಘವೇಂದ್ರ ರಾಜ್‌ಕುಮಾರ್‌, ಸ್ಪರ್ಶರೇಖಾ, ಚಂದನಾ, ಸ್ವಾತಿ, ವಿಜಯ್‌ ಚೆಂಡೂರ್‌, ಪ್ರಭು ಸೂರ್ಯ, ಕೌಸ್ತುಭಮಣಿ ತಾರಾಗಣದಲ್ಲಿದ್ದಾರೆ. ಸುಂದರಮೂರ್ತಿ ಅವರ ಸಂಗೀತ, ಪ್ರದ್ಯೋತ್‌ ಅವರ ಹಿನ್ನೆಲೆ ಸಂಗೀತವಿದೆ.

ಟ್ರೈಲರ್‌ ಬಿಡುಗಡೆ ಸಮಾರಂಭ ನೋಡಲು ಲಿಂಕ್‌: https://www.youtube.com/watch?v=u2mPo758E4U

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT